Advertisement

ಲಕ್ನೋ ನೈಟ್‌ ಕ್ಲಬ್‌ ಉದ್ಘಾಟಿಸಿದ ಸಂಸದ ಸಾಕ್ಷಿ ಮಹಾರಾಜ್‌; ವಿವಾದ

11:19 AM Apr 16, 2018 | Team Udayavani |

ಲಕ್ನೋ : ಭಾರತೀಯ ಜನತಾ ಪಕ್ಷದ ಉರಿ ನಾಲಗೆಯ ಸಂಸದ ಸಾಕ್ಷಿ ಮಹಾರಾಜ್‌ ಅವರು ನಿನ್ನೆ ಭಾನುವಾರ ಇಲ್ಲಿನ ಆಲಿಗಂಜ್‌ ಪ್ರದೇಶದಲ್ಲಿನ ಸಂಕೀರ್ಣವೊಂದರಲ್ಲಿ  “ಲಟಸ್‌ ಮೀಟ್‌’ ಎನ್ನುವ ಹೆಸರಿನ ನೈಟ್‌ ಕ್ಲಬ್‌ ಉದ್ಘಾಟಿಸಿ ವಿವಾದಕ್ಕೆ ಕಾರಣರಾದರು.

Advertisement

ಇಲ್ಲಿನ ರಾಮ್‌ ರಾಮ್‌ ಬ್ಯಾಂಕ್‌ ಕ್ರಾಸಿಂಗ್‌ ಸಮೀಪ ಇರುವ ಜೀತ್‌ ಪ್ಲಾಜಾ ದ ಎರಡನೇ ಮಹಡಿಯಲ್ಲಿರುವ ಈ ನೈಟ್‌ ಕ್ಲಬ್‌ ಅನ್ನು ಸಾಕ್ಷಿ ಮಹಾರಾಜ್‌ ಅವರು ರಿಬ್ಬನ್‌ ಕಟ್‌ ಮಾಡಿ ಉದ್ಘಾಟಿಸಿದರು. 

ಸಾಕ್ಷಿ ಮಹಾರಾಜ್‌ ಅವರು ಸಂಸದರಾಗಿ ಪ್ರತಿನಿಧಿಸುತ್ತಿರುವ ಉನ್ನಾವೋ ಕ್ಷೇತ್ರ ಈಗ ಗ್ಯಾಂಗ್‌ ರೇಪ್‌ ಮತ್ತು ಕಸ್ಟಡಿ ಸಾವಿನ ಪ್ರಕರಣದಿಂದಾಗಿ ದೇಶಾದ್ಯಂತ ಸುದ್ದಿಯಲ್ಲಿದೆ. ಉನ್ನಾವೋ ಶಾಸಕ ಕುಲದೀಪ್‌ ಸಿಂಗ್‌ ಸೆಂಗರ್‌ ಅವರು ಈ ಪ್ರಕರಣದ ಮುಖ್ಯ ಆರೋಪಿಯಾಗಿ ಸಿಬಿಐನಿಂದ ಅರೆಸ್ಟ್‌ ಆಗಿ ತನಿಖೆಗೆ ಒಳಪಟ್ಟಿದ್ದಾರೆ. 

ಈ ಪರಿಸ್ಥಿತಿಯಲ್ಲಿ  ಸಂಸದ ಸಾಕ್ಷಿ ಮಹಾರಾಜ್‌ ನೈಟ್‌ ಕ್ಲಬ್‌ ಉದ್ಘಾಟಿಸಿ ಹಲವರು ಹುಬ್ಬೇರಿಸುವಂತೆ ಮಾಡಿದ್ದಾರೆ. ಸಾಕ್ಷಿ ಮಹಾರಾಜ್‌ ಅವರು ಈಚೆಗೆಷ್ಟೇ “ಸಮಾಜದಲ್ಲಿ ರೇಪ್‌ ಕೃತ್ಯಗಳು,ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುವುದಕ್ಕೆ  ಗಂಡು – ಹೆಣ್ಣು  ಪ್ರಣಯ ಜೋಡಿಗಳು ಬಹಿರಂಗವಾಗಿ ಅಶ್ಲೀಲವಾಗಿ ವರ್ತಿಸುತ್ತಿರುವುದೇ ಕಾರಣ’ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next