Advertisement

ಗೌತಮ್ ಗಂಭೀರ್ ಗೆ ‘ಐಸಿಸ್ ಕಾಶ್ಮೀರ’ದಿಂದ ಮೂರನೇ ಬೆದರಿಕೆ ಇ-ಮೇಲ್

12:12 PM Nov 28, 2021 | Team Udayavani |

ನವದೆಹಲಿ: ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರಿಗೆ ‘ಐಸಿಸ್ ಕಾಶ್ಮೀರ’ದಿಂದ ಮೂರನೇ ಬೆದರಿಕೆ ಇ-ಮೇಲ್ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Advertisement

ಪೂರ್ವ ದೆಹಲಿ ಕ್ಷೇತ್ರದ ಸಂಸದ ಗೌತಮ್ ಗಂಭೀರ್ ಅವರು ಕಳೆದ ವಾರ ‘ಐಸಿಸ್ ಕಾಶ್ಮೀರ’ದಿಂದ ಮೊದಲ ಬಾರಿಗೆ ಕೊಲೆ ಬೆದರಿಕೆಗಳನ್ನು ಸ್ವೀಕರಿಸಿದಾಗ ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದರು.

‘ಐಸಿಸ್ ಕಾಶ್ಮೀರ’ದಿಂದ ತಮಗೆ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ದೆಹಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ ಎಂದು ಕೇಂದ್ರ ಡಿಸಿಪಿ ಶ್ವೇತಾ ಚೌಹಾಣ್ ಎಎನ್‌ಐಗೆ ತಿಳಿಸಿದ್ದಾರೆ.

ವಿಶೇಷ ಸೈಬರ್ ಕ್ರೈಂ ಸೆಲ್‌ಗೆ ದೂರನ್ನು ನೀಡಲಾಗಿದ್ದು, ಇ-ಮೇಲ್‌ನ ಮೂಲವನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ ಎಂದು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next