Advertisement

ತಗ್ಗಿಗೆ ಉರುಳಿದ ಕಾರು: ಬಿಜೆಪಿ ಶಾಸಕರ ಆಪ್ತ ಸಹಾಯಕ ಪಾರು

07:04 PM May 26, 2022 | Team Udayavani |

ಮುದ್ದೇಬಿಹಾಳ: ಸ್ಥಳೀಯ ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿಯವರ ಸರಕಾರೀ ಆಪ್ತ ಸಹಾಯಕ ಪಿಡಿಓ ಶಿವಾನಂದ ಮೂಲಿಮನಿ ಅವರು ಚಲಾಯಿಸುತ್ತಿದ್ದ ಕಾರು ಮನಗೂಳಿ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ತಗ್ಗಿನಲ್ಲಿ ಉರುಳಿ ಬಿದ್ದಿದ್ದು, ಶಿವಾನಂದ ಅವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಘಟನೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಾನಂದ ಅವರು, ವಿಜಯಪುರದಿಂದ ಮುದ್ದೇಬಿಹಾಳದಲ್ಲಿರುವ ಶಾಸಕರ ಕಚೇರಿಗೆ ಕರ್ತವ್ಯಕ್ಕಾಗಿ ಬರುತ್ತಿದ್ದೆ. ಮನಗೂಳಿ ಕ್ರಾಸ್ ನಲ್ಲಿ ಲ್ಲಿ ಡಬಲ್ ರೈಡರ್ ಬೈಕ್ ದಿಢಿರ ನೇ ಎದುರಿಗೆ ಬಂತು. ಆತನಿಗೆ ಕಾರು ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರನ್ನು ನಿಯಂತ್ರಿಸಲು ಯತ್ನಿಸಿದಾಗ ಪಕ್ಕದ ಡಿವೈಡರ್ ಗೆ ಬಡಿದು, ಹೆದ್ದಾರಿ ಪಕ್ಕದ ತಗ್ಗಿನಲ್ಲಿ ಉರುಳಿ ಬಿತ್ತು. ತಕ್ಷಣ ಕಾರಿನಲ್ಲಿರುವ ಏರ್ ಬ್ಯಾಗ್ ಬಿಚ್ಚಿಕೊಂಡಿದ್ದರಿಂದ ನನಗೇನೂ ಹೆಚ್ಚಿನ ಗಂಭೀರ ಗಾಯಗಳು ಆಗಲಿಲ್ಲ. ಆದರೆ ಸಣ್ಣ ಪುಟ್ಟ ಗಾಯಗಳಾಗಿದ್ದು ಜೀವಕ್ಕೇನೂ ಅಪಾಯ ಇಲ್ಲ. ವಿಜಯಪುರದ ಭಾಗ್ಯವಂತಿ ಆಸ್ಪತ್ರೆಯಲ್ಲಿ ಸಕಾಲಿಕ ಚಿಕಿತ್ಸೆ ದೊರಕಿದ್ದರಿಂದ ಗುಣಮುಖನಾಗಿ ಸಂಜೆ ಮನೆಗೆ ಮರಳುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಅರ್ಧ ಹೇಳಿಕೆಗೆ ಮಹತ್ವ ನೀಡಿ ಗೊಂದಲ ಸೃಷ್ಟಿಸಲಾಗಿದೆ : ಸಚಿವ ಎಂಟಿಬಿ ನಾಗರಾಜ್

ಕಾರಿನಲ್ಲಿ ಏರ್ ಬ್ಯಾಗ್ ಇಲ್ಲದೆ ಹೋದಲ್ಲಿ ಸ್ಟೇರಿಂಗ್ ಚಕ್ರ ನನ್ನ ಎದೆಗೆ ಬಡಿದು ಸ್ಥಳದಲ್ಲೇ ಸಾವನ್ನಪ್ಪುವ ಸಂಭವ ಹೆಚ್ಚಾಗಿತ್ತು. ಆದರೆ ಭಗವಂತ ಮತ್ತು ಶಾಸಕರ ಜತೆಗೂಡಿ ಅವರ ಆಶ್ರಯದಲ್ಲಿ ನಡೆಸಿರುವ ಬಡವರ ಸೇವೆ ಮತ್ತು ಪುಣ್ಯದ ಕೆಲಸಗಳು ನನ್ನನ್ನು ಪ್ರಾಣಾಪಾಯದಿಂದ ಪಾರು ಮಾಡಿವೆ ಎಂದು ಗದ್ಗದಿತರಾಗಿ ಹೇಳಿದರು.

ಮೂಲಿಮನಿ ಅವರು ಶೀಘ್ರ ಗುಣಮುಖರಾಗಿ ಕರ್ತವ್ಯಕ್ಕೆ ಮರಳಲಿ ಎಂದು ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣಗಳ ಮೂಲಕ ಸದಾಶಯ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next