Advertisement
ಮತ್ತೂಂದೆಡೆ ಮಹಿಳೆಯು ಸೋಮವಾರ ತಮ್ಮ ಪರ ವಕೀಲ ಕೆ.ಎನ್. ಜಗದೀಶ್ ಜತೆ ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರ್ ರಾವ್ ಅವರಿಗೆ ದೂರು ನೀಡಿದ್ದು, ಶಾಸಕರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.
Related Articles
Advertisement
ಶಾಸಕರ ದೂರಿನಲ್ಲಿ ಏನಿದೆ?ಕಲುಬುರಗಿಯ ಮಹಿಳೆ ಹಾಗೂ ಆಕೆಯ ಪತಿ 2009 ರಲ್ಲಿ ಮೊದಲಿಗೆ ಪರಿಚಯವಾಗಿದ್ದು, 2013ರಲ್ಲಿ ಜಮೀನು ವ್ಯಾಜ್ಯದ ಇತ್ಯರ್ಥಕ್ಕೆ ದಂಪತಿ ನನ್ನ ಸಹಾಯ ಪಡೆದುಕೊಂಡಿದ್ದರು. ಅನಂತರ ಅವರ ಪುತ್ರನನ್ನು ಶಾಲೆಗೆ ದಾಖಲಿಸಲು ಸಹಾಯ ಪಡೆದಿದ್ದರು. ಆದರೆ, ಮಹಿಳೆಯು 2018ರಲ್ಲಿ ಏಕಾಏಕಿ ಫೇಸ್‌ಬುಕ್ ಮೆಸೆಂಜರ್ ಮೂಲಕ ಮೊದಲ ಬಾರಿಗೆ ಸುಳ್ಳು ಆರೋಪ ಮಾಡಿ ಸಂದೇಶ ಕಳುಹಿಸಿದ್ದರು. ಅದೇ ವರ್ಷ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನನ್ನ ವಿರುದ್ಧ ದೂರು ನೀಡುವುದಾಗಿ ಬೆದರಿಕೆ ಹಾಕಿ, ಯಾವುದೇ ದೂರನ್ನು ನೀಡದೆ ಹಣಕ್ಕೆ ಬೇಡಿಕೆಯಿಟ್ಟಿದ್ದರು. 2021ರ ಮಾರ್ಚ್‌ನಿಂದಲೂ ಸುಮಾರು 6 ತಿಂಗಳ ಕಾಲ ತನ್ನನ್ನು ಭೇಟಿಯಾಗುವಂತೆ ಆಕೆ ನನ್ನನ್ನು ಒತ್ತಾಯಿಸುತ್ತಿದ್ದಾರೆ. ಕೋರಿಕೆಯಂತೆ ಶಾಂಗ್ರಿಲಾ ಹೊಟೇಲ್‌ನಲ್ಲಿ ನನ್ನ ಪತ್ನಿಯ ಜತೆ ತೆರಳಿ ಆಕೆಯನ್ನು ಭೇಟಿಯಾಗಿದ್ದೆ. ಈ ವೇಳೆ ನನ್ನನಿಂದಲೇ ಮಗುವಾಗಿದ್ದು, ಅದನ್ನು ನೋಡಿಕೊಳ್ಳಲು 2 ಕೋಟಿ ರೂ. ನೀಡಬೇಕು ಎಂದು ಒತ್ತಾಯಿಸಿದ್ದಳು. ಅದನ್ನು ನಾನು ಹಾಗೂ ಪತ್ನಿ ವಿರೋಧಿಸಿದ್ದೆವು. ಅನಂತರ ಮತ್ತೂಮ್ಮೆ ಸಂದೇಶ ಕಳುಹಿಸಿ ಸರಕಾರದ ಮುಖ್ಯ ಹುದ್ದೆಯಲ್ಲಿರುವವರ ಗಮನ ಸೆಳೆದು ನನ್ನ ಗೌರವಕ್ಕೆ ಧಕ್ಕೆ ತರುವುದಾಗಿ ಬೆದರಿಸಿದ್ದಳು. ಆಕೆಯ ಪರಿಚಯಸ್ಥರಿಂದ ಕರೆ ಮಾಡಿಸಿ 2 ಕೋಟಿ ರೂ. ನೀಡುವಂತೆ ಒತ್ತಾಯಿಸಿದ್ದಳು. ನೀಡದಿದ್ದರೆ ಕೊಲೆ ಮಾಡಿಸುವುದಾಗಿ ಜೀವ ಬೆದರಿಕೆ ಹಾಕಿದ್ದಳು. ಅಲ್ಲದೇ, ನನ್ನ ಮೇಲೆ ಸುಳ್ಳು ಆರೋಪಗಳನ್ನು ಟ್ವೀಟ್ ಮಾಡಿ ಅದನ್ನು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಟ್ಯಾಗ್ ಮಾಡಿದ್ದಳು. ಈ ಸಂಬಂಧ ಕಾನೂನು ಕ್ರಮಕೈಗೊಳ್ಳುವಂತೆ ಶಾಸಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ಜನರಿಗಾಗಿ, ದೇಶಕ್ಕಾಗಿ ದುಡಿಯುವ ನನ್ನಂಥವರ ಮೇಲೆ ಆರೋಪ ಸರಿಯಲ್ಲ.
-ರಾಜಕುಮಾರ ಪಾಟೀಲ್ ತೇಲ್ಕೂರ್ ,
ಸೇಡಂ ಶಾಸಕ