Advertisement
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಾಗೇರಿ, ಈ ಬಾರಿ ಮಂತ್ರಿ ಆಗುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ಜಿಲ್ಲೆಯಲ್ಲಿ ಕೇಂದ್ರ ಸಚಿವರಾಗಿ, ಕರ್ನಾಟಕದ ಮುಖ್ಯಮಂತ್ರಿಗಳಾಗಿ ದೊಡ್ಮನೆ ರಾಮಕೃಷ್ಣ ಹೆಗಡೆ ಅವರ ಬಳಿಕ ಇಂಥದ್ದೊಂದು ದೊಡ್ಡ ಹುದ್ದೆ ಕಾಗೇರಿ ಅವರಿಗೆ ಬಂದಿದ್ದಕ್ಕೂ ಸಂಭ್ರಮ ಉಂಟಾಗಿದೆ.
Related Articles
Advertisement
1981ರಲ್ಲಿ ಗುವಾಹಟಿಯಲ್ಲಿ ನಡೆದ ಅಸ್ಸಾಂ ಉಳಿಸಿ, 1992-93ರಲ್ಲಿ ಜಮ್ಮುವಿನಲ್ಲಿ ನಡೆದ ಭಯೋತ್ಪಾದನೆ ವಿರೋಧಿಸಿ ಹೋರಾಟ, ಬೇಡ್ತಿ, ಅಘನಾಶಿನಿ ಉಳಿಸಿ ಹೋರಾಟಗಳಲ್ಲೂ ತೊಡಗಿಕೊಂಡವರು. 1990ರಿಂದ ಬಿಜೆಪಿ ಮೂಲಕ ಸಕ್ರಿಯ ರಾಜಕೀಯ ಪ್ರವೇಶಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾಧ್ಯಕ್ಷ, ರಾಜ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಬಿಜೆಪಿ ರಾಷ್ಟ್ರೀಯ ಶಿಕ್ಷಣ ಸಂಯೋಜಕರಾಗಿ ಕೂಡ ಪಕ್ಷ ಸಂಘಟನೆ ಮಾಡಿದ್ದಾರೆ.
ಸತತ ಎಂಎಲ್ಎ: 1994ರ ಅಂಕೋಲಾ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ ಬಳಿಕ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಮೂರು ಸಲ ಅಂಕೋಲಾ ವಿಧಾನಸಭೆ, 2008ರಿಂದ ಮರು ವಿಂಗಡನೆ ಗೊಂಡ ಶಿರಸಿ ವಿಧಾನಸಭೆ ಕ್ಷೇತ್ರದಲ್ಲಿ ಸತತ ಮೂರು ಸಲ, ಒಟ್ಟು ಆರು ಸಲ ವಿಧಾನಸಭೆ ಪ್ರವೇಶಿಸಿದ್ದಾರೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸದಸ್ಯ, 2006ರ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ, 2008ರ ಮೇ 30ರಿಂದ ಬಿಜೆಪಿ ಸರ್ಕಾರ ದಲ್ಲಿ ಶಿಕ್ಷಣ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯ ಮಾಡಿದ್ದಾರೆ. ಪ್ರಧಾನಿ ಮೋದಿ ಅವರಾದಿಯಾಗಿ ಆರ್‌ಎಸ್‌ಎಸ್, ಎಬಿವಿಪಿ, ಪಕ್ಷಗಳಲ್ಲಿ ಉನ್ನತ ಸಂಪರ್ಕ ಹೊಂದಿದ್ದು, ಪಕ್ಷಾತೀತ ಗೆಳೆತನ ಸಂಪಾದಿಸಿದ್ದೂ ವಿಶೇಷ.
ಹೆಬ್ಟಾರ್‌ಗೆ ನೆಮ್ಮದಿ: ಕಾಗೇರಿಗೆ ಸ್ಪೀಕರ್ ಸ್ಥಾನ ಸಿಕ್ಕಿದ್ದು, ಒಂದು ಕಾಲಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ, ಅನರ್ಹಗೊಂಡ ಕಾಂಗ್ರೆಸ್ ಶಾಸಕ ಶಿವರಾಮ ಹೆಬ್ಟಾರ್ ಅವರಿಗೆ ಖುಷಿ ಕೊಟ್ಟಿದೆ ಎನ್ನಲಾಗಿದೆ. ಅನರ್ಹತೆ ಪ್ರಕರಣ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ್ದು, ಅಲ್ಲಿಂದ ತೀರ್ಪು ಬಂದ ಬಳಿಕ ಅವರು ಬಿಜೆಪಿ ಸೇರಲಿದ್ದಾರೆ ಎನ್ನಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೂಡ ಬೇಡಿಕೆಯಲ್ಲಿತ್ತು. ಈ ಕಾರಣದಿಂದ ಹೆಬ್ಟಾರ ಬೆಂಬಲಿಗರಿಗೂ ಕಾಗೇರಿ ಉಸ್ತುವಾರಿ ಸಚಿವ ಸ್ಥಾನದಿಂದ ಹೊರಗೆ ಉಳಿದದ್ದು ಖುಷಿ ತಂದಿದೆ!
ಕ್ಷೇತ್ರ ನೋಡಿ: ಈ ಹಿಂದೆ ಉತ್ತಮ ನಿರ್ವಹಣೆ ಮಾಡಿದ್ದ ಶಿಕ್ಷಣ ಇಲಾಖೆಯ ಸಚಿವರಾಗುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಮತದಾರರಿಗೆ ಸ್ಪೀಕರ್ ಹುದ್ದೆ ಹೆಡ್ ಮಾಸ್ಟರ್ ಸ್ಥಾನ ಎಂಬ ಖುಷಿ ಇದೆ. ಆದರೆ, ಕ್ಷೇತ್ರದಲ್ಲಿ ಆಗಬೇಕಾದ ರಸ್ತೆ, ಸೇತುವೆ, ಕರೆಂಟ್, ಬಸ್ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿವೆ. ರೈತರ ಸಾಲ ಮನ್ನಾ, ಶಿರಸಿ ಪ್ರತ್ಯೇಕ ಜಿಲ್ಲೆ ಪ್ರಸ್ತಾಪ, ಪ್ರವಾಸಿ ತಾಣಗಳಿಗೆ ಅನುದಾನ ಸೇರಿದಂತೆ ಅನೇಕ ಬೇಡಿಕೆಗಳಿವೆ. ಅವುಗಳನ್ನೂ ಆದ್ಯತೆಯಲ್ಲಿ ಕಾಗೇರಿ ಅವರು ಮಾಡಿಸಬೇಕಾ ಗುತ್ತದೆ. ಜವಾಬ್ದಾರಿಯುತ ಹುದ್ದೆಯನ್ನೂ ನಿರ್ವಹಿಸಬೇಕಾಗಿದೆ.