ಸಚಿವರೊಬ್ಬರು, ಚಿತ್ರದುರ್ಗ ಹಾಗೂ ವಿಜಯ ನಗರ ಜಿಲ್ಲೆಯ ಶಾಸಕರಿಬ್ಬರು ಬಿಜೆಪಿ ತೊರೆ ಯಲು ಮುಂದಾಗಿರುವುದು ಆಡಳಿತ ಪಕ್ಷಕ್ಕೆ ಮತ್ತೂಂದು ಆಘಾತವಾಗಿದೆ.
Advertisement
ಎಐಸಿಸಿ ಪ್ರಧಾನ ಕಾರ್ಯ ದರ್ಶಿ ರಣದೀಪ್ ಸಿಂಗ್ ಸುಜೇìವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿರುವ ಸಚಿವರು, ಈ ಮಾಸಾಂತ್ಯಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವ ಭರವಸೆ ನೀಡಿದ್ದಾ ರೆಂದು ತಿಳಿದುಬಂದಿದೆ. ಇದರೊಂದಿಗೆ ಸದ್ಯಕ್ಕೆ ಬಿಜೆಪಿಯಿಂದ ನಾಲ್ವರು ಶಾಸಕರು ಕಾಂಗ್ರೆಸ್ ಸೇರುವುದು ಖಚಿತವಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಬೆಳವಣಿಗೆ ಆಡಳಿತ ಪಕ್ಷಕ್ಕೆ ತುಸು ಮುಜುಗರ ಉಂಟು ಮಾಡಲಿದೆ.
ಯುವಜನ ಸೇವೆ ಸಚಿವ ನಾರಾಯಣ ಗೌಡರು ಕೆಲವು ದಿನಗಳ ಹಿಂದೆಯಷ್ಟೇ ಮಹಿಳಾ ಕ್ರೀಡಾ ಹಬ್ಬ ಕುರಿತು ಪತ್ರಿಕಾ ಗೋಷ್ಠಿ ನಡೆಸಿದ್ದರು. ಆದರೆ ಶನಿವಾರ ಕ್ರೀಡಾ ಹಬ್ಬ ಉದ್ಘಾಟಿಸಬೇಕಿದ್ದ ಸಚಿವರು ಗೈರು ಹಾಜರಾಗಿದ್ದರು ಮಾತ್ರವಲ್ಲ, ಇಲಾಖೆಯ ಆಹ್ವಾನ ಪತ್ರಿಕೆಯಲ್ಲೂ ಅವರ ಹೆಸರು ಇಲ್ಲದಿರುವುದು ಅಚ್ಚರಿ ತಂದಿದೆ. ಸಚಿವ ನಾರಾಯಣ ಗೌಡರ ಬದಲಿಗೆ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮ ಕ್ರೀಡಾ ಹಬ್ಬ ಉದ್ಘಾಟಿಸಿದರು. ಮೈಸೂರು- ಬೆಂಗಳೂರು ಹೆದ್ದಾರಿ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ರವಿವಾರ ಮಂಡ್ಯಕ್ಕೆ ಆಗಮಿಸುತ್ತಿದ್ದು, ಆ ಕಾರ್ಯಕ್ರಮದಲ್ಲಿ ನಾರಾಯಣ ಗೌಡರು ಪಾಲ್ಗೊಳ್ಳುತ್ತಾರೋ ಇಲ್ಲವೋ ಎಂಬುದು ಕುತೂಹಲ ಕೆರಳಿಸಿದೆ.