Advertisement

ಮೈಸೂರು: ಪ್ರಧಾನಿ ನರೇಂದ್ರ ಮೋದಿಗೆ ದೈವಬಲ ಪ್ರೇರಣೆಗೆ ಮೃತ್ಯುಂಜಯ ಹೋಮ

03:27 PM Jan 07, 2022 | Team Udayavani |

ಮೈಸೂರು : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತೆ ನೀಡುವಲ್ಲಿ ಪಂಜಾಬ್‌ನ ಕಾಂಗ್ರೆಸ್ ಸರ್ಕಾರ ಭಾರೀ ಲೋಪವೆಸಗಿದೆ. ಕೂಡಲೇ ಆ ಸರ್ಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡುವಂತೆ ಶಾಸಕ ಎಲ್ ನಾಗೇಂದ್ರ ಆಗ್ರಹಿಸಿದರು.

Advertisement

ಬಿಜೆಪಿ ಚಾಮರಾಜ ಕ್ಷೇತ್ರದ ವತಿಯಿಂದ ದಿವಾನ್ಸ್ ರಸ್ತೆಯಲ್ಲಿರುವ ಅಮೃತೇಶ್ವರ ದೇವಸ್ಥಾನ ದಲ್ಲಿ ಪ್ರಧಾನಿ ನರೇಂದ್ರ ಮೋದಿ ರವರಿಗೆ ದೈವಬಲ ಪ್ರೇರಣೆಗೆ ಅವರ ಹೆಸರಿನಲ್ಲಿ ಮೃತ್ಯುಂಜಯ ಹೋಮ ನಡೆಸಿದ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ವಿರುದ್ಧ ವೈಯಕ್ತಿಕವಾಗಿ ದ್ವೇಷ ಸಾಧಿಸುತ್ತಿರುವ ಕಾಂಗ್ರೆಸ್ ಪಕ್ಷ, ಭದ್ರತೆಯಲ್ಲಿ ವೈಫಲ್ಯವೆಸಗುವ ಮೂಲಕ ಅವರ ಜೀವದ ಜೊತೆ ಚೆಲ್ಲಾಟವಾಡಿದೆ ಎಂದು ಆರೋಪಿಸಿದರು.

ಸ್ವಾರ್ಥ ರಾಜಕೀಯಕ್ಕಾಗಿ ಎಸಗಿರುವ ಇಂತಹ ಲೋಪಗಳು ದೇಶದ ಭದ್ರತೆಗೆ ಸವಾಲೊಡ್ಡಲಿವೆ. ಪ್ರಧಾನಿ ಫಿರೋಜ್‌ಪುರದಲ್ಲಿ ಸುಮಾರು 42 ಸಾವಿರ ಕೋಟಿ ವೆಚ್ಚದ ಯೋಜನೆಗಳಿಗೆ ಅಡಿಗಲ್ಲು ಹಾಕಲು ಹೊರಟಿದ್ದರು. ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಮುಖ್ಯಮಂತ್ರಿ, ರಾಜ್ಯದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕ ಬಾರದೇ ಇರುವುದು ಕೂಡ ಸಂಶಯಾಸ್ಪದ ವರ್ತನೆಯಾಗಿದೆ ಎಂದರು. ಪ್ರಧಾನಿ ಬರುವ ಹಾದಿಯಲ್ಲಿ ಲಾರಿ ಹಾಗೂ ಟ್ರ್ಯಾಕ್ಟರ್ ಸಮೇತ ಬಂದು ಪ್ರತಿಭಟನಾಕಾರರು ರಸ್ತೆ ಬಂದ್ ಮಾಡಿದ್ದಾರೆ. ಇದು ಪಂಜಾಬ್‌ನ ಗುಪ್ತಚರ ದಳಕ್ಕೆ ಗೊತ್ತಿರಲಿಲ್ಲವೇ. ವಿರೋಧ ಪಕ್ಷಗಳ ಆಡಳಿತ ಇರುವ ರಾಜ್ಯಗಳಲ್ಲಿ ಇಂತಹ ಉದಾಸೀತನೆ ಸರ್ವಥಾ ಸಮರ್ಥನೀಯವಲ್ಲ ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭರತ್ , ಮೈ ಕಾ ಪ್ರೇಮ್ ಕುಮಾರ್ , ಬಿಜೆಪಿ ನಗರ ಉಪಾಧ್ಯಕ್ಷ ಹರ್ಷ, ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕ ಗಿರೀಶ್ ,ಲಕ್ಷ್ಮಿ, ನವೀನ್,ಬಿಜೆಪಿ ಚಾಮರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಸಚಿನ್ , ಮಂಜುನಾಥ್ ,ಸುರೇಂದ್ರ,ರಾಜೇಂದ್ರ , ವಿಘ್ನೇಶ್ವರ ಭಟ್, ಸುದರ್ಶನ್ ,ದಿನೇಶ್ ಗೌಡ ,ತನುಜಾ ಮಹೇಶ್ ,ಶೋಭಾ, ಆನಂದ್ ,ಕಾಂತಿಲಾಲ್ ಜೈನ್,ಶರ್ಮಾ ,ಪಾಪಣ್ಣ ಮತ್ತು ಶ್ರೀನಿವಾಸ್ ,ಹಾಗೂ ಇನ್ನಿತರರು ಹಾಜರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next