Advertisement

ಸಂಚಾರ ಪೊಲೀಸರ ಜತೆ ಅರವಿಂದ ಲಿಂಬಾವಳಿ ಪುತ್ರಿಯ ವಾಗ್ವಾದ: ವಿಡಿಯೋ ವೈರಲ್

08:49 AM Jun 10, 2022 | Team Udayavani |

ಬೆಂಗಳೂರು: ಅತೀ ವೇಗ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಕಾರು ತಡೆದ ಸಂಚಾರ ಪೊಲೀಸರ ಜತೆ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ವಾಗ್ವಾದ ನಡೆಸಿರುವ ಘಟನೆ ರಾಜಭವನ ರಸ್ತೆಯಲ್ಲಿ ಗುರುವಾರ ನಡೆದಿದೆ. ಈ ಸಂಬಂಧ ವಿಡಿಯೋ ವೈರಲ್‌ ಆಗಿದೆ.

Advertisement

ಗುರುವಾರ ಸಂಜೆ ಕಾನೂನು ಮತ್ತು ಸುವ್ಯವಸ್ಥೆಯ ಎಸಿಪಿಯೊಬ್ಬರು ಕ್ವೀನ್ಸ್‌ ರಸ್ತೆಯಲ್ಲಿ ತಮ್ಮ ವಾಹನದಲ್ಲಿ ಹೋಗುತ್ತಿದ್ದರು. ಅದೇ ವೇಳೆ ಶಾಸಕರ ಪುತ್ರಿ ಅತೀ ವೇಗವಾಗಿ ಐಷಾರಾಮಿ ಬಿಎಂಡಬ್ಲ್ಯೂ ಕಾರು ಚಾಲಾಯಿಸಿಕೊಂಡು ಸ್ನೇಹಿತರ ಜತೆ ರಾಜಭವನ ರಸ್ತೆ ಕಡೆ ಹೋಗುತ್ತಿದ್ದರು.

ಅದನ್ನು ಗಮನಿಸಿದ ಎಸಿಪಿ ಕೂಡಲೇ ಕಂಟ್ರೋಲ್‌ ರೂಂಗೆ ಕಾರಿನ ನಂಬರ್‌ ಸಮೇತ ದೂರು ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಕಬ್ಬನ್‌ ಪಾರ್ಕ್‌ ಸಂಚಾರ ಠಾಣೆ ಪೊಲೀಸರು ರಾಜಭವನ ರಸ್ತೆಯಲ್ಲಿ ಕಾರನ್ನು ತಡೆದಿದ್ದಾರೆ. ಆಗ ಆಕ್ರೋಶಗೊಂಡ ಶಾಸಕರ ಪುತ್ರಿ “ನಾನು ಯಾರು ಗೊತ್ತಾ?. ನಾನು ಮಾಜಿ ಸಚಿವ, ಹಾಲಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ. ಕಾರನ್ನು ತಡೆದಿದ್ದು ಏಕೆ? ಎಂದು ಪೊಲೀಸರ ಜತೆ ವಾಗ್ವಾದ ನಡೆಸಿದ್ದಾರೆ.

ಇದನ್ನೂ ಓದಿ:ಚಾಮರಾಜಪೇಟೆ ಮೈದಾನ ವಿವಾದ: 2006ರಲ್ಲಿ ಮಾಡಿಕೊಂಡ ಒಪ್ಪಂದ ಈವರೆಗೆ ಜಾರಿಗೆ ತಂದಿಲ್ಲ

ಅವರ ಮಾತಿಗೆ ಜಗ್ಗದ ಪೊಲೀಸರು ಕಾರಿನ ನಂಬರ್‌ ಪರಿಶೀಲಿಸಿದಾಗ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಹಳೆಯ 9 ಸಾವಿರ ರೂ. ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ. ಅತೀ ವೇಗವಾಗಿ ಕಾರು ಚಾಲನೆ ಮಾಡಿದ್ದಿರಿ. ಅಲ್ಲದೆ, ಹಳೇಯ ದಂಡ ಬಾಕಿ ಇದೆ. ಒಟ್ಟು 10 ಸಾವಿರ ರೂ. ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆ ವೇಳೆ ವಾಗ್ವಾದ ಜೋರಾಗಿ ನಡೆದಿದೆ. ಬಳಿಕ 10 ಸಾವಿರ ರೂ. ದಂಡ ಕಟ್ಟಿದ್ದು ಬಳಿಕ ಕಾರು ಬಿಟ್ಟು ಕಳುಹಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

Advertisement

ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ: ಲಿಂಬಾವಳಿ

ಈ ಮಧ್ಯೆ, ತಮ್ಮ ಮಗಳ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಶಾಸಕ ಅರವಿಂದ್‌ ಲಿಂಬಾವಳಿ ಸ್ಪಷ್ಟಣೆ ನೀಡಿದ್ದು, ನನ್ನ ಮಗಳು ತನ್ನ ಸ್ನೇಹಿತರು ಜೊತೆ ಹೋಗುತ್ತಿದ್ದಾಗ ಪೋಲಿಸರು ತಡೆದಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಇರುವುದರಿಂದ ಪೋಲಿಸರ ಬಂದೋಬಸ್ತ್ ಇತ್ತು. ನನ್ನ ಮಗಳು ಮಾಧ್ಯಮಗಳ ಬಗ್ಗೆ ಮಾತನಾಡಿಲ್ಲ, ಮಾಧ್ಯಮಗಳಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇವೆ ಎಂದು ಹೇಳಿದ್ದಾರೆ. ನಮ್ಮ ಮನೆತನದ ಇತಿಹಾಸ ಹಾಗೇನು ಇಲ್ಲ. ಡ್ರೈವ್‌ ಮಾಡಬೇಕಾದರೆ ಓವರ್‌ ಸ್ಪೀಡ್‌ ಮಾಡಿದ್ದಾರೆ ಅಂತ ಹೇಳಿದ್ದಾರೆ. ಅದಕ್ಕೆ ದಂಡ ಕೂಡ ಕಟ್ಟಲಾಗಿದೆ. ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next