Advertisement
ಪ್ರಧಾನಿಯವರ ವಿರುದ್ಧ ಬಿಬಿಸಿ ನಿರ್ಮಿಸಿದ ವಿವಾದಾತ್ಮಕ ಸಾಕ್ಷ್ಯಚಿತ್ರ, ಪಠಾಣ್ ಸಿನಿಮಾ ವಿರುದ್ಧ ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಸಂಘ ಪರಿವಾರದ ಸದಸ್ಯರು ಟೀಕೆ ಮಾಡಿದ್ದರು ಮತ್ತು ವಿರೋಧಿಸಿದ್ದರು. ಇದರಿಂದಾಗಿಯೇ ಅದನ್ನು ಜನರು ಹೆಚ್ಚಿನ ಪ್ರಮಾಣದಲ್ಲಿ ನೋಡಿದ್ದಾರೆ. ವಿವಿಗಳನ್ನೂ ಪ್ರದರ್ಶನಗೊಂಡಿದೆ. ಹೀಗಾಗಿ, ನೀವು ಯಾವುದನ್ನು ಹೆಚ್ಚಾಗಿ ವಿರೋಧಿಸುತ್ತಿರೋ, ಅದನ್ನು ಜನ ಹೆಚ್ಚು ವೀಕ್ಷಿಸುತ್ತಾರೆ. ಸಾಕ್ಷ್ಯಚಿತ್ರದಿಂದ ನಿಮಗೆ ತೊಂದರೆ ಇಲ್ಲ ಎಂದಾದಮೇಲೆ ಪ್ರತಿಕ್ರಿಯಿಸಬಹುದಿತ್ತು ಎಂದಿದ್ದಾರೆ.ಇದೇ ವೇಳೆ ದೇಶದ ಸಮಸ್ಯೆಗಳನ್ನೂ ನೋಡಿಯೂ ಪ್ರಧಾನಿ ತುಟಿ ಬಿಚ್ಚುತ್ತಿಲ್ಲ, ತಮಗೆ ತೊಂದರೆಯಾಗುವ ಸಂದರ್ಭ ಬಂದರೆ ಅವರು ಮೌನಿಬಾಬನಂತೆ ಆಗಿಬಿಡುತ್ತಾರೆ ಎಂದು ಖರ್ಗೆ ಟೀಕಿಸಿದರು.
ಪ್ರಧಾನಿ ಮೋದಿ ಅವರನ್ನು ಮೌನಿ ಬಾಬಾ ಎಂದ ಖರ್ಗೆ ಅವರ ಹೇಳಿಕೆಗೆ ಸಭಾಪತಿ ಜಗದೀಶ್ ಧಂಕರ್ ಆಕ್ಷೇಪ ವ್ಯಕ್ತ ಪಡಿಸಿದರು. ನೀವು ಹಿರಿಯ ನಾಯಕರು, ಇಂಥ ಪದಪ್ರಯೋಗಗಳು ನಿಮಗೆ ತಕ್ಕದ್ದಲ್ಲ. ಘನತೆಗೆ ತಕ್ಕಂತೆ ಮಾತನಾಡಿ ಎಂದು ಖರ್ಗೆ ಅವರಿಗೆ ಮನವರಿಕೆ ಮಾಡಿದ್ದಾರೆ. ಖರ್ಗೆ ಶಾಲಿನ ದರ 56 ಸಾವಿರ!
ಖರ್ಗೆ, 56,332 ರೂ.ಗಳ ಮೌಲ್ಯದ ಲೂಯಿಸ್ ವಿಟಾನ್ ಬ್ರ್ಯಾಂಡ್‌ನ ಶಾಲು ಧರಿಸಿದ್ದರು. ಈ ವಿಚಾರ ಬಿಜೆಪಿಗರಿಂದ ಟೀಕೆಗೆ ಗುರಿಯಾಗಿದೆ. ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಶೆಹಜಾದ್ ಪೂನಾವಾಲಾ ಈ ಕುರಿತು ಟ್ವೀಟ್ ಮಾಡಿದ್ದಾರೆ. ಅನುಸರಿಸುವ ಆಯ್ಕೆಯೊಂದು, ಬೋಧನೆಯೊಂದು ಎಂದು ಶೀರ್ಷಿಕೆ ನೀಡಿದ್ದಾರೆ.ಅಲ್ಲದೇ, ಖರ್ಗೆ ಅವರ ಫೋಟೋ ಹಾಗೂ ಮೋದಿ ಅವರ ಫೋಟೋಗಳನ್ನು ಹೋಲಿಕೆ ಮಾಡಿದ್ದಾರೆ. ಮೋದಿ ಅವರು ಧರಿಸಿದ್ದ ವೇಸ್‌ಕೋಟ್ ಮರುಬಳಕೆ ಪ್ಲಾಸಿಕ್‌ನಿಂದ ತಯಾರಿಸಲಾಗಿದೆ ಇದು ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ಸ್ನೇಹಿಯ ಸೂಚಕದ ಫ್ಯಾಶನ್. ಅದೇ ಖರ್ಗೆ ಅವರ ಶಾಲು ? ಈ ಬಗ್ಗೆ ಏನು ಹೇಳಲಾಗುವುದಿಲ್ಲ ಎಂದು ಪರೋಕ್ಷವಾಗಿ ಟೀಕಿಸಿದ್ದಾರೆ.