Advertisement

ನಗರಸಭೆ ಆಡಳಿತ ವೈಖರಿ ನಿಷಿಯ: ಆರೋಪ

03:18 PM Aug 09, 2022 | Team Udayavani |

ಕೊಳ್ಳೇಗಾಲ: ಕಾಂಗ್ರೆಸ್‌ ಆಡಳಿತರೂಢ ನಗರಸಭೆಯ ಆಡಳಿತ ವೈಖರಿ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿ ಬಿಜೆಪಿ ನಗರಸಭಾ ಸದಸ್ಯರು ಕಚೇರಿಯ ಮುಂಭಾಗ ಸೋಮವಾರ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.

Advertisement

ನಗರಸಭೆ ವಿರೋಧ ಪಕ್ಷದ ನಾಯಕ ಹಾಗೂ ಬಿಜೆಪಿ ಸದಸ್ಯ ಜಿ.ಪಿ.ಶಿವಕುಮಾರ್‌ ನೇತೃತ್ವದಲ್ಲಿ ಸೇರಿದ ಸದಸ್ಯರು ನಗರಸಭೆ ಆಡಳಿತ ವೈಖರಿಯ ವಿರುದ್ಧ ಘೋಷಣೆಗಳನ್ನು ಕೂಗಿದರು.

ಸದಸ್ಯ ಶಿವಕುಮಾರ ಮಾತನಾಡಿ ನಗರಸಭೆಯ ಅಧ್ಯಕ್ಷರು ಮತ್ತು ಪೌರಾ ಯುಕ್ತ ಅಕ್ರಮ ಖಾತೆಗಳಿಗೆ ಸ್ಪಂದಿಸುತ್ತಿದ್ದು, ಸಾರ್ವಜ ನಿಕರ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಸಂಪೂರ್ಣ ವಿಫ‌ಲರಾಗಿದ್ಧಾರೆ ಎಂದು ದೂರಿದರು.

ಈಗಾಗಲೇ ಬಸ್ತೀಪುರ ಬಡಾವಣೆ ಸೇರಿದಂತೆ ಹಲವಾರು ಬಡಾವಣೆಗಳ ಖಾತೆಗಳು ನ್ಯಾಯಾಲಯದಲ್ಲಿ ಇದ್ದು ಸಂಬಂಧಿ ಸಿದ ಬಡಾವಣೆಗಳ ಖಾತೆಗಳನ್ನು ಮಾಡುವಂತಿಲ್ಲ, ಅಧಿಕಾರಿಗಳು, ನಗರಸಭೆ ಅದ್ಯಕ್ಷರು ಅಕ್ರಮ ಖಾತೆಗೆ ಹೆಚ್ಚು ಒತ್ತುಕೊಟ್ಟು ಮಾಡುತ್ತಿದ್ಧಾರೆ. ಬೀದಿ ದೀಪಗಳನ್ನು ಅಳವಡಿಸುತ್ತಿಲ್ಲ. ಸಮಸ್ಯೆಗಳ ಚರ್ಚೆಯ ಬಗ್ಗೆ ಸಭೆ ಕರೆಯುವಂತೆ ಕಳೆದ 6 ತಿಂಗಳಿನಿಂದ ಹೇಳಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಈ ಹಿಂದೆ ನಗರಸಭೆಯಲ್ಲಿ ನಡೆದ ನಡಾವಳಿಯನ್ನು ಪುಸ್ತಕದಲ್ಲಿ ಬರೆದಿಲ್ಲ, ತಮಗೆ ಮನಬಂದಂತೆ ಕೆಲಸ ಮಾಡಿಕೊಂಡು ನಿಷ್ಕ್ರಿಯವಾಗಿದ್ದು, ಕೂಡಲೇ ಅಧ್ಯಕ್ಷರನ್ನು ಮತ್ತು ಪೌರಾಯುಕ್ತರನ್ನು ಹೊರಗಿಟ್ಟು ಸಾರ್ವಜ ನಿಕರ ಕೆಲಸ ಕಾರ್ಯಗಳನ್ನು ಸುಲಲಿತವಾಗಿ ಸರ್ಕಾರ ಮಾಡಬೇಕೆಂದು ಮನವಿ ಮಾಡಿದರು.

Advertisement

ನಗರಸಭೇಯ ಪೌರಾಯುಕ್ತ ನಂಜುಂಡಸ್ವಾಮಿ, ನಗರಸಭೆ ಅದ್ಯಕ್ಷೆ ಸುಶೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರನಾರಾಯಣ ಗುಪ್ತ ಮನವೊಲಿಸುವ ಪ್ರಯತ್ನ ಮಾಡಿದರೂ ಸದಸ್ಯರು ತಿರಸ್ಕಾರ ಮಾಡಿ ನಗರಸಭೆಯ ಆಡಳಿತಕ್ಕೆ ದಿಕ್ಕಾರ ಸಾರಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next