Advertisement

BJP Meeting: ಸಿದ್ದರಾಮಯ್ಯ ರಾಜೀನಾಮೆ ಸೇರಿ 3 ನಿರ್ಣಯ ಅಂಗೀಕಾರ

12:45 AM Jul 05, 2024 | Team Udayavani |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಹ್ಯಾಟ್ರಿಕ್‌ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಘಟಕದ ವಿಶೇಷ ಕಾರ್ಯಕಾರಿಣಿಯಲ್ಲಿ ಅಭಿನಂದನೆ ಸಲ್ಲಿಸಿ ನಿರ್ಣಯ ಅಂಗೀಕರಿಸಲಾಗಿದೆ.

Advertisement

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸಭೆಯಲ್ಲಿ ನಿರ್ಣಯ ಮಂಡಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ನೇತೃತ್ವದ ಇಂಡಿ ಒಕ್ಕೂಟವು ಭಾರತದ ಸಂವಿಧಾನ ಮತ್ತು ಇಲ್ಲಿನ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಜಗತ್ತಿನಾದ್ಯಂತ ಅಪಪ್ರಚಾರ ನಡೆಸಿತ್ತು. ಈ ಹಿನ್ನೆಲೆಯಲ್ಲಿ ಭಾರತದ ಈ ಚುನಾವಣೆ ಮಹತ್ವ ಪಡೆದಿತ್ತು. ಬಿಜೆಪಿ ಸರಕಾರದ ಸಾಧನೆಗಳ ಕಾರಣ ಈ ಗೆಲುವು ಲಭಿಸಿದೆ ಎಂದರು.

ಅಭಿವೃದ್ಧಿಶೂನ್ಯ, ಹಗರಣಗಳ ಕಾಂಗ್ರೆಸ್‌ ಸರಕಾರ ತೊಲಗಿಸಲು ಕರೆ ಕೊಡುವ ಎರಡನೇ ನಿರ್ಣಯವನ್ನೂ ಅಂಗೀಕರಿಸಲಾಗಿದೆ. ವಿಪಕ್ಷ ನಾಯಕ ಅಶೋಕ್‌ ಇದನ್ನು ಮಂಡಿಸಿದ್ದು, ವಿಧಾನಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಂಗಾರು ಹನುಮಂತು ಅನುಮೋದಿಸಿದ್ದಾರೆ. ಈ ಸರಕಾರ ಆರ್ಥಿಕ ದಿವಾಳಿತನದ ಕಡೆ ರಾಜ್ಯವನ್ನು ಒಯ್ಯುತ್ತಿರುವುದು, ಅಭಿವೃದ್ಧಿ ಕಾರ್ಯಗಳಿಗೆ ಹಣ ಕೊಡದೆ ಇರುವುದು, ಅಲ್ಪಸಂಖ್ಯಾಕರ ಓಲೈಕೆ, ಮತ ಬ್ಯಾಂಕ್‌ ಭದ್ರ ಪಡಿಸುವ ಕಡೆ ಗಮನ ಕೊಟ್ಟು ರಾಜ್ಯದ ಹಿತ ಮರೆತಿದೆ ಎಂದು ಆರೋಪಿಸಿದರು.

ಕಾನೂನು- ಸುವ್ಯವಸ್ಥೆ ಹದಗೆಟ್ಟು ಜನರು ಆತಂಕದಿಂದ ಇರುವ ಸ್ಥಿತಿ ನಿರ್ಮಾಣವಾದ ಕುರಿತು ಖಂಡಿಸಿದ್ದೇವೆ. ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕೆಂದು ಈ ನಿರ್ಣಯ ಆಗ್ರಹಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next