Advertisement

ಬಿಜೆಪಿ ಎಂದರೆ ಅಭಿವೃದ್ಧಿ, ಕಾಂಗ್ರೆಸ್‌ ಎಂದರೆ ಭ್ರಷ್ಟಾಚಾರ: ನಡ್ಡಾ

11:52 PM Jan 21, 2023 | Shreeram Nayak |

ವಿಜಯಪುರ: ಅಭಿವೃದ್ಧಿ ಮತ್ತು ಪಾರದರ್ಶಕತೆ ಎಂದರೆ ಬಿಜೆಪಿಯಾಗಿದ್ದು, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್‌ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್‌ ಪ್ರಕಾಶ ನಡ್ಡಾ ವಾಗ್ಧಾಳಿ ನಡೆಸಿದರು.

Advertisement

ವಿಜಯಪುರ ಹಾಗೂ ಸಿಂದಗಿಯಲ್ಲಿ ಶನಿವಾರ “ವಿಜಯ ಸಂಕಲ್ಪ ಯಾತ್ರೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ಕುರ್ಚಿ ಹಿಡಿಯಲು ಏನೆಲ್ಲ ಕಸರತ್ತು ನಡೆಸಿರುವ ಕಾಂಗ್ರೆಸ್‌ ಸಹಿತ ವಿಪಕ್ಷಗಳಿಗೆ ಕುರ್ಚಿ ಖಾಲಿ ಇಲ್ಲ ಎಂದು ಕರ್ನಾಟಕದ ಜನತೆ ಉತ್ತರಿಸಬೇ ಕು. ಕುರ್ಚಿ ನಿರೀಕ್ಷೆಯಲ್ಲಿರುವ ನಾಯಕರಿಗೆ ವಿಶ್ರಾಂತಿ ನೀ ಡಬೇಕೆಂದು ಮನವಿ ಮಾಡಿದರು.

“ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌ ’ ತತ್ವದ ಡಿ ನಡೆಯುತ್ತಿರುವ ಬಿಜೆಪಿ ದೇಶದ ಎಲ್ಲೆಡೆ ಜನಪರ ಕಾರ್ಯಕ್ರಮಗಳ ಮೂಲಕ ಉತ್ತಮ ಆಡಳಿತ ನೀಡುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಅಭಿವೃದ್ಧಿ ಪರ್ವದ ಮುನ್ನಡೆಗಾಗಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿ ಎಂದು ರಾಜ್ಯದ ಜನರಲ್ಲಿ ಮನವಿ ಮಾಡುವುದಾಗಿ ಹೇಳಿದರು.

ದೇಶದ ಮತದಾರನ ಬೆರಳಿಗೆ ಬಹು ದೊಡ್ಡ ಶಕ್ತಿ ಇದೆ. ರಾಜ್ಯದಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಅದನ್ನು ಸೂಕ್ತ ಬಟನ್‌ ಮೇಲೆ ಒತ್ತದಿದ್ದರೆ ಭಾರೀ ಅನಾಹುತ ಆಗಲಿದೆ. ಹೀಗಾಗಿ ರಾಜ್ಯದ ಅಭ್ಯುದಯದ ಭವಿಷ್ಯಕ್ಕಾಗಿ ಕಮಲದ ಗುರುತಿನ ಬಟನ್‌ ಮೇಲೆ ನಿಮ್ಮ ಬೆರಳಿಟ್ಟು ಆಶೀರ್ವದಿಸಿ ಎಂದು ಮನವಿ ಮಾಡಿದರು.

ಆಯುಷ್ಮಾನ್‌ ಭಾರತ್‌, ಕಿಸಾನ್‌ ಸಮ್ಮಾನ್‌, ಪ್ರಧಾನಮಂತ್ರಿ ಆವಾಸ್‌ ಸಹಿತ ದೇಶದ ಜನತೆಯ ಆಶಯಗಳನ್ನು ಈಡೇರಿಸುವಲ್ಲಿ ಸಮರ್ಥವಾಗಿ ಆಡಳಿತ ನೀಡಿರುವ ಮೋದಿ ನೇತೃತ್ವದಲ್ಲಿ ಬಿಜೆಪಿ ಸರಕಾರಗಳು, ಭವಿಷ್ಯದಲ್ಲಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಇನ್ನೂ ಉತ್ತುಂಗಕ್ಕೆ ಕೊಂಡೊಯ್ಯಲಿವೆ ಎಂದರು. ಭಾರತದಲ್ಲಿ ಹಿಂದೆಲ್ಲ ಮೊಬೈಲ್‌ ಸಹಿತ ಯಾವುದೇ ತಾಂತ್ರಿಕ ಸರಕುಗಳ ಮೇಲೆ “ಮೇಡ್‌ ಇನ್‌ ಚೀನ’ ಎಂದಿರುತ್ತಿತ್ತು. ಮೋದಿ ನೇತೃತ್ವದ ಸಮರ್ಥ ನಾಯಕತ್ವದ ಸರಕಾರ ಅಧಿ ಕಾರಕ್ಕೆ ಬರುತ್ತಲೇ “ಮೇಕ್‌ ಇನ್‌ ಇಂಡಿಯಾ’ ಮೂಲಕ “ಮೇಡ್‌ ಇನ್‌ ಇಂಡಿಯಾ ’ ಆಗಿ ಪರಿವರ್ತನೆ ಆಗಿರುವುದು ಜನತೆ ನೀಡಿದ ಅತ್ಯುತ್ತಮ ತೀರ್ಪಿನಿಂದ ಎಂದು ಬಣ್ಣಿಸಿದರು.

Advertisement

ಆಟೋಮೊಬೈಲ್‌ ಕ್ಷೇತ್ರದಲ್ಲಿ ವಿಶ್ವದಲ್ಲೇ ಮೂರನೇ ಸ್ಥಾನದಲ್ಲಿರುವ ಭಾರತ ಕೌಶಲದಲ್ಲಿ ವಿಶ್ವದಲ್ಲಿ 13ನೇ ಸ್ಥಾನದಲ್ಲಿದ್ದು, ಮುಂಚೂಣಿ ಸ್ಥಾನಕ್ಕೆ ಬರುವ ದಿನಗಳು ದೂರವಿಲ್ಲ. ಎಲ್ಲ ಪ್ರಕಾರದ ಸಾರಿಗೆಯಲ್ಲಿ ಭಾರತ ಈಗ ಅತ್ಯಂತ ಸುಧಾರಿತ ಆಧುನಿಕತೆಯ ಸ್ಪರ್ಶ ಪಡೆದಿದೆ ಎಂದರು.

ಪಕ್ಷದ ಅಧ್ಯಕ್ಷರಾಗಿ ಪುನ ರಾಯ್ಕೆ ಬಳಿಕ ಮೊದಲ ಬಾರಿಗೆ ವಿಜಯಪುರ ಜಿಲ್ಲೆಗೆ ಆಗಮಿಸಿದ ನಡ್ಡಾ ಅವರನ್ನು ಪಕ್ಷದ ಪ್ರಮುಖರು ಶ್ರೀಸಿದ್ಧೇಶ್ವರ ಶ್ರೀಗಳ ಭಾವಚಿತ್ರ ನೀಡಿ ಸ ಮ್ಮಾನಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಉನ್ನತ ಶಿಕ್ಷಣ ಸಚಿವ ಡಾ| ಅಶ್ವತ್ಥನಾರಾಯಣ, ಸಂಸದ ರಮೇಶ ಜಿಗಜಿಣಗಿ ಮುಂತಾದವರಿದ್ದರು.

ಮತ್ತೆ ಬಿಜೆಪಿ ಅಧಿಕಾರಕ್ಕೆ: ಅರುಣ್‌ ಸಿಂಗ್‌
ಚಿಕ್ಕಬಳ್ಳಾಪುರ: ರಾಜ್ಯದ ಜನತೆಗೆ ಡಬಲ್‌ ಎಂಜಿನ್‌ ಸರಕಾರ ಮತ್ತು ಅಭಿವೃದ್ಧಿ ಕೆಲಸಗಳ ವೇಗದ ಬಗ್ಗೆ ನಂಬಿಕೆ ಇದೆ. ಪ್ರಧಾನಿ ನರೇಂದ್ರ ಮೋದಿ ನಾಯತಕತ್ವ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದು ಖಚಿತ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನದ ವೇಳೆ ಮಾತನಾಡಿದ ಅವರು, ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಭ್ರಷ್ಟಾಚಾರ, ಸಮಯ ವ್ಯರ್ಥ ಮಾಡಿದ್ದೇ ಸಾಧನೆ. ಕೇವಲ ಚಿಕ್ಕಬಳ್ಳಾಪುರ ಒಂದು ಜಿಲ್ಲೆಗೆ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ ಎನ್ನುವ ಬಗ್ಗೆ ಮಾತನಾಡಲಿ. ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಈ ಒಂದು ಜಿಲ್ಲೆಯಲ್ಲೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next