Advertisement

ಚುರುಮುರಿಗೂ ಜಿಎಸ್‌ಟಿ ಹೇರುತ್ತಿದ್ದಾರೆ : ಕೇಂದ್ರದ ವಿರುದ್ಧ ಮಮತಾ ಕಿಡಿ

02:16 PM Jul 21, 2022 | Team Udayavani |

ಕೋಲ್ಕತಾ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಸರಕು ಮತ್ತು ಸೇವಾ ತೆರಿಗೆಯ ಕುರಿತಾಗಿ ಕೇಂದ್ರ ಸರಕಾರದ ವಿರುದ್ಧ ಕಿಡಿ ಕಾರಿದ್ದಾರೆ.

Advertisement

ಪಕ್ಷದ ಹುತಾತ್ಮರ ದಿನದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಬ್ಯಾನರ್ಜಿ, ಬಿಜೆಪಿ ಮನಸ್ಸು ಕಳೆದುಕೊಂಡಿದೆ ಎಂದ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚುರುಮುರಿಯ ಮೇಲೆ ಕೂಡ ಜಿಎಸ್‌ಟಿ ಹೇರುತ್ತಿದ್ದಾರೆ. ಇದೇ ವೇಳೆ ಕಾರ್ಯಕರ್ತರಿಂದ ಚುರುಮುರಿಗಳನ್ನು ರವಾನಿಸಲು ಹೇಳಿ ಸ್ವಲ್ಪ ಹೊರತೆಗೆದರು, ವೇದಿಕೆಯ ಮೇಲಿದ್ದ ಜಾಲ್ ಮುರಿ ಮಾರಾಟಗಾರನನ್ನು ಸಹ ಕರೆದು ಅವನಿಗೆ ಹಣ ನೀಡುವುದಾಗಿ ಹೇಳಿದರು. ಟ್ರೇಯನ್ನು ಹಿಡಿದುಕೊಂಡು, “ನೋಡಿ, ಮುರಿ, ಮಿಷ್ಟಿ (ಸಿಹಿ), ಲಸ್ಸಿ (ಮಜ್ಜಿಗೆ) ಮತ್ತು ಮೊಸರಿನ ಮೇಲೂ ಜಿಎಸ್‌ಟಿ ಹಾಕಿದ್ದಾರೆ. ರೋಗಿ ಆಸ್ಪತ್ರೆಗೆ ದಾಖಲಾದರೆ ಜಿಎಸ್‌ಟಿ ವಿಧಿಸುತ್ತಾರೆ ಎಂದು ಕಿಡಿ ಕಾರಿದರು.

ಹುತಾತ್ಮರ ದಿನದ ವಾರ್ಷಿಕ ಕಾರ್ಯಕ್ರಮವು ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳಿಂದ ನಡೆಸಿರಲಿಲ್ಲ. ಈ ಬಾರಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ್ದರು.1993 ರಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಮೇಲೆ ಪೋಲೀಸರ ಗುಂಡಿನ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ ದಿನದ ನೆನಪಿನಲ್ಲಿ ಜುಲೈ 21 ಅನ್ನು ಟಿಎಂಸಿ ಶಹಿದ್ ದಿವಸ್ ಎಂದು ಆಚರಿಸಲಾಗುತ್ತಿದೆ.

ಇದನ್ನೂ ಓದಿ : ಎನ್‌ಸಿಪಿಯ ಎಲ್ಲಾ ಘಟಕಗಳನ್ನು ವಿಸರ್ಜಿಸಿದ ಶರದ್ ಪವಾರ್

Advertisement

Udayavani is now on Telegram. Click here to join our channel and stay updated with the latest news.

Next