ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಹಠಮಾರಿತನ ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣವಾಯಿತು, ಮುಂದೆಯೂ ಬಿಜೆಪಿ ಹೆಚ್ಚಿನ ರಾಜ್ಯಗಳಲ್ಲಿ ಪಕ್ಷ ಸೋಲಲಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೋಮವಾರ ಹೇಳಿದ್ದಾರೆ.
‘ಲಾಭರ್ತಿ ಉತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿ, ”ಪ್ರಧಾನಿಯವರ ಹಠಮಾರಿ ಸ್ವಭಾವದಿಂದಾಗಿ ಬಿಜೆಪಿ ಇತ್ತೀಚಿನ ಚುನಾವಣೆಯಲ್ಲಿ ಹಿಮಾಚಲ ಪ್ರದೇಶ ಮತ್ತು ಕರ್ನಾಟಕದಲ್ಲಿ ಸೋಲಿನ ರುಚಿ ಕಂಡಿತು. ಪ್ರಜಾಪ್ರಭುತ್ವದಲ್ಲಿ ಹಠಮಾರಿತನಕ್ಕೆ ಅವಕಾಶವಿಲ್ಲ ಎಂದರು.
“ನೀವು ಇದನ್ನು ಖ್ಯಾತಿಯ ಪ್ರಶ್ನೆಯನ್ನಾಗಿ ಮಾಡಬೇಡಿ ಎಂದು ನಾನು ಪ್ರಧಾನಿಗೆ ಹೇಳಲು ಬಯಸುತ್ತೇನೆ. ಪ್ರಧಾನಿ ಹಠಮಾರಿ, ತನಗೆ ಅನಿಸಿದ್ದನ್ನು ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಯಾರ ದುರಹಂಕಾರವೂ ಕೆಲಸ ಮಾಡುವುದಿಲ್ಲ ಮತ್ತು ಮತದಾರರ ಮುಂದೆ ತಲೆಬಾಗಬೇಕು ಏಕೆಂದರೆ ಅವರೇ ಚುನಾವಣೆ ಗೆಲ್ಲುವಂತೆ ಮಾಡುತ್ತದೆ” ಎಂದು ಹಿರಿಯ ಕಾಂಗ್ರೆಸ್ ನಾಯಕ ಹೇಳಿದರು.