Advertisement
ಒಂದು ವೇಳೆ ಸ್ಥಳೀಯ ಪಕ್ಷದ ಕಾರ್ಯಕರ್ತನ ಮಗನು ಅಪರಾಧದಲ್ಲಿ ತೊಡಗಿಸಿಕೊಂಡಿದ್ದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ಜನತಾ ಪಕ್ಷದ ದತಿಯಾ ಜಿಲ್ಲಾ ಘಟಕದ ಮುಖ್ಯಸ್ಥರು ಹೇಳಿದ್ದಾರೆ.
Related Articles
Advertisement
ಇಲ್ಲಿಯವರೆಗೆ ಬಂಧಿಸಲ್ಪಟ್ಟವರಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತನ ಅಪ್ರಾಪ್ತ ಮಗನೂ ಸೇರಿದ್ದು, ಪ್ರಕರಣದಲ್ಲಿ ದಾಖಲಾದ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್) ಅವರ ಹೆಸರು ಕಾಣಿಸಿಕೊಂಡಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಸುರೇಂದ್ರ ಬುಧೋಲಿಯಾ ಅವರನ್ನು ಈ ಬಗ್ಗೆ ಕೇಳಿದಾಗ, ಘಟನೆ ದುರದೃಷ್ಟಕರ ಮತ್ತು ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ಇನ್ನೂ ದಾಖಲಿಸಿಲ್ಲ. ಒಂದು ವೇಳೆ ಸಂತ್ರಸ್ತೆ ಪೊಲೀಸರಿಗೆ ತನ್ನ ಹೇಳಿಕೆಯಲ್ಲಿ ಬಿಜೆಪಿ ಪದಾಧಿಕಾರಿಯ ಮಗನ ಹೆಸರನ್ನು ಹೇಳಿದರೆ, ಪಕ್ಷವು ಅವರಿಗೆ (ಸ್ಥಳೀಯ ಕಾರ್ಯಕರ್ತ) ನೋಟಿಸ್ ನೀಡುತ್ತದೆ. ನಂತರ ಪಕ್ಷ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಬುಧೋಲಿಯಾ ಹೇಳಿದ್ದಾರೆ.