Advertisement
ಅನರ್ಹ ಶಾಸಕರ ಪಕ್ಷ ಸೇರ್ಪಡೆ ಬೆನ್ನಲ್ಲೇ ಅವರ ಬೆಂಬಲಿಗರು ಉಪ ಚುನಾವಣ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಚುನಾವಣ ಕಾರ್ಯತಂತ್ರ, ಪ್ರಚಾರ ಸಭೆ, ಸಮಾ ರಂಭ, ಇತರ ಕಾರ್ಯಗಳಲ್ಲೂ ಬೆಂಬಲಿಗರೇ ಮುಂಚೂಣಿಯಲ್ಲಿರುವುದರಿಂದ ಬಿಜೆಪಿಯ ಮೂಲ ಕಾರ್ಯಕರ್ತರ ಇರುವಿಕೆ ಪ್ರಧಾನವಾಗಿ ಕಾಣದಂತಾಗಿದೆ. ಪರಿಸ್ಥಿತಿ ಹೀಗೇ ಮುಂದು ವರಿದರೆ ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಟಿಕೆಟ್, ಸ್ಥಾನಮಾನ, ಮಾನ್ಯತೆಯಿಂದಲೂ ವಂಚಿತರಾಗುವ ಭೀತಿ ಕಾರ್ಯಕರ್ತರದ್ದು.
ಮೇಲ್ಮಟ್ಟದಲ್ಲಿ ಹೊಂದಾಣಿಕೆಯಾದರೂ ಕೆಳ ಹಂತದಲ್ಲಿ ಇನ್ನೂ ಮೂಲ ಕಾರ್ಯಕರ್ತರು, ಅನರ್ಹರ ಬೆಂಬಲಿಗರ ನಡುವೆ ಸಮನ್ವಯ ಮೂಡಿಲ್ಲ. ಏಕೆಂದರೆ ಕ್ಷೇತ್ರದಲ್ಲಿ ಬಿಜೆಪಿಯ ಪ್ರತ್ಯೇಕ ವ್ಯವಸ್ಥೆಯಿದ್ದು, ಅಲ್ಲಿಯೂ ಕ್ಷೇತ್ರ ಹಂತದ ಪದಾಧಿಕಾರಿಗಳು, ಬೂತ್ ಸಮಿತಿ ಅಧ್ಯಕ್ಷರು, ಸದಸ್ಯರಿದ್ದಾರೆ. ಆದರೆ ಅನರ್ಹ ಶಾಸಕರ ಪಕ್ಷ ಸೇರ್ಪಡೆ ಮೂಲಕ ಪಕ್ಷಕ್ಕೆ ಬಂದ ಬೆಂಬಲಿಗರು ಹಾಗೂ ಆಯಾ ಕ್ಷೇತ್ರದ ಬಿಜೆಪಿ ಪದಾಧಿಕಾರಿಗಳು ಬಹುತೇಕ ಕಡೆ ಇನ್ನೂ ಒಂದುಗೂಡಿಲ್ಲ. ಹಾಗಾಗಿ ಸಮನ್ವಯವಿಲ್ಲದ ಕಾರಣ ಕೆಲವು ವ್ಯತ್ಯಾಸಗಳಾಗಿರಬಹುದು ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದರು.
Related Articles
ಈಗಿನ ಸ್ಥಿತಿ ಮುಂದುವರಿದು ಅನರ್ಹ ಶಾಸಕರ ಬೆಂಬಲಿಗರಿಗೆ ಹೆಚ್ಚು ಮಾನ್ಯತೆ ಸಿಗುತ್ತಾ ಹೋದರೆ ಮುಂದೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಟಿಕೆಟ್ ಹಂಚಿಕೆ ಸಹಿತ ಇತರ ಸ್ಥಾನಮಾನ ನೀಡುವ ಸಂದರ್ಭದಲ್ಲೂ ಮೂಲ ಕಾರ್ಯಕರ್ತರು ಅವಗಣನೆಗೆ ಒಳಗಾಗುವ ಆತಂಕವೂ ಹಲವು ಕ್ಷೇತ್ರದಲ್ಲಿ ಕಾಡುತ್ತಿದೆ.
Advertisement
ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ರಾಜಕೀಯರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಹಿರಿಯ ನಾಯಕರ ನಡುವೆ ಬಣ ರಾಜಕೀಯ ಹೆಚ್ಚಾಗಿರುವುದರಿಂದ ಅಸಮಾಧಾನಗೊಂಡಿರುವ ಹೈಕಮಾಂಡ್, ವಸ್ತುಸ್ಥಿತಿಯ ಮಾಹಿತಿ ಪಡೆಯಲು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ಖಂಡ್ರೆ ಅವರಿಗೆ ಬುಲಾವ್ ನೀಡಿದೆ. ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ದಿಲ್ಲಿಗೆ ತೆರಳಿರುವ ಈಶ್ವರ್ ಖಂಡ್ರೆ, ಇತ್ತೀಚಿನ ದಿನಗಳಲ್ಲಿ ಪಕ್ಷದಲ್ಲಿ ನಡೆಯುತ್ತಿರುವ ಬಣ ರಾಜಕೀಯದ ಸಂಪೂರ್ಣ ಮಾಹಿತಿ ಒದಗಿಸುವ ಸಾಧ್ಯತೆಯಿದೆ. ನಾಯಕರ ನಡುವಿನ ಬಣ ರಾಜಕೀಯದಿಂದ ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನುವ ಕಾರಣಕ್ಕೆ ಆರಂಭದಲ್ಲಿಯೇ ಮಾಹಿತಿ ಪಡೆದು, ಎಲ್ಲ ನಾಯಕರನ್ನೂ ಒಗ್ಗಟ್ಟಿನಿಂದ ಕರೆದುಕೊಂಡು ಹೋಗುವಂತೆ ಸಿದ್ದರಾಮಯ್ಯಗೆ ಸೂಚನೆ ನೀಡುವ ಸಾಧ್ಯತೆ ಇದೆ. - ಎಂ. ಕೀರ್ತಿಪ್ರಸಾದ್