ಬೆಳಗಾವಿ: ತಮ್ಮದೇ ಅಶ್ಲೀಲ ಚಿತ್ರವನ್ನು ಪಕ್ಷದ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಹರಿಬಿಟ್ಟ ಬಿಜೆಪಿ ಮಹಾನಗರ ಅಧ್ಯಕ್ಷ ಶಶಿಕಾಂತ ಪಾಟೀಲ ಇಕ್ಕಟ್ಟಿಗೆ ಸಿಲುಕಿದ್ದಾರೆ.
Advertisement
ಗೋವಾ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಶಶಿಕಾಂತ ಪಾಟೀಲ ಅವರ ಮೊಬೈಲ್‌ನಿಂದ ತಮ್ಮದೇ ಅಶ್ಲೀಲ ಫೋಟೋವನ್ನು ನಗರ ಬಿಜೆಪಿ ಪದಾಧಿಕಾರಿಗಳು ಇರುವ ವಾಟ್ಸ್ ಆ್ಯಪ್ ಗ್ರೂಪ್‌ಗೆ ಕಳುಹಿಸಿದ್ದಾರೆ.
ಈ ಗ್ರೂಪ್‌ನಲ್ಲಿ ಮಹಿಳಾ ಮೋರ್ಚಾ ಪದಾಧಿಕಾರಿಗಳೂ ಇದ್ದು, ಮುಜಗುರಕ್ಕೀಡು ಮಾಡಿದೆ. ಬಿಜೆಪಿ ಅಧ್ಯಕ್ಷನ ಫೋಟೋ ಬರುತ್ತಿದ್ದಂತೆ ಈ ಗ್ರೂಪ್‌ನಿಂದ ಅನೇಕ ಮಹಿಳೆಯರು ಲೆಫ್ಟ್ ಆಗಿದ್ದಾರೆ. ಶಶಿಕಾಂತ ಪಾಟೀಲ ವಿರುದ್ಧ ಬಿಜೆಪಿ ವಲಯದಲ್ಲಿಯೇ ತೀವ್ರ ಆಕ್ರೋಶ ವ್ಯಕ್ತವಾಗಿದೆ.