Advertisement

ಬಿಜೆಪಿ ನಾಯಕನ ಜತೆ ಎಸ್‌ಪಿ ನಾಯಕನ ಪುತ್ರಿ ಪರಾರಿ

11:17 PM Jan 18, 2023 | Team Udayavani |

ಹರ್ದೋಯಿ: ಉತ್ತರಪ್ರದೇಶದ ಹರ್ದೋಯಿ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಮದುವೆಯಾಗಿ 2 ಮಕ್ಕಳನ್ನು ಹೊಂದಿದ್ದ ಬಿಜೆಪಿ ನಾಯಕರೊಬ್ಬರು, ಸಮಾಜವಾದಿ ಪಕ್ಷದ ನಾಯಕನ 26 ವರ್ಷದ ಪುತ್ರಿಯೊಂದಿಗೆ ಓಡಿಹೋಗಿದ್ದಾರೆ!

Advertisement

47 ವರ್ಷದ ಆಶೀಷ್‌ ಶುಕ್ಲಾ ಈಗಾಗಲೇ ಮದುವೆಯಾಗಿ 21 ವರ್ಷದ ಒಬ್ಬ ಮಗ, 7 ವರ್ಷದ ಮಗಳನ್ನು ಹೊಂದಿದ್ದಾರೆ. ಇನ್ನು ಓಡಿಹೋಗಿರುವ ಯುವತಿಗೆ ಶುಕ್ಲಾ ಜೊತೆಗೆ ಪ್ರೀತಿಯಿತ್ತು. ಅದರ ವಿರುದ್ಧವಾಗಿ ಪೋಷಕರು ಬೇರೊಬ್ಬನೊಂದಿಗೆ ವಿವಾಹ ನಿಶ್ಚಯಿಸಿದ್ದರು. ಪರಿಣಾಮ ಈ ರೀತಿಯಾಗಿ ಮುಕ್ತಾಯವಾಗಿದೆ.

ಈ ಪ್ರಕರಣದ ಬಳಿಕ ಶುಕ್ಲಾರನ್ನು ಪಕ್ಷದ ಹುದ್ದೆಯಿಂದ ವಜಾಗೊಳಿಸಿ, ಪ್ರಾಥಮಿಕ ಸದಸ್ಯತ್ವದಿಂದಲೂ ಹೊರಹಾಕಲಾಗಿದೆ. ಎಫ್ಐಆರ್‌ ಕೂಡ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next