ಬೀದರ: “ಮುಂಬೈಗೆ ಹೋದವರು ಮರಳಿ ರಾಜ್ಯಕ್ಕೆ ಬರುತ್ತಿದ್ದಾರೆ. ಶಾಸಕ ಜಾಧವ ಈಗಾಗಲೇ ಬಿಜೆಪಿ ವಿರುದಟಛಿವೇ ಆಕ್ರೋಶಗೊಂಡಿದ್ದಾರೆ, ಬಿಜೆಪಿ ಮುಳುಗುವ ದೋಣಿ ಇದ್ದಂತೆ, ಅವರು ಏಕೆ ಆ ದೋಣಿಯಲ್ಲಿ ಕುಳಿತುಕೊಳ್ಳಲು ಹೋಗುತ್ತಾರೆ’ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, 20 ಜನರನ್ನು ಕರೆತಂದಿರುವುದಾಗಿ ಹೇಳಿದ್ದು, ಇಲ್ಲಿ ಯಾರೂ ಇಲ್ಲ. ಏಕೆ ಮೋಸ ಮಾಡಿದ್ದೀರಿ ಎಂದು ಜಾಧವ ಬಿಜೆಪಿ ಮುಖಂಡರ ವಿರುದಟಛಿವೇ ಆಕ್ರೋಶ ವ್ಯಕ್ತಪಡಿಸಿರುವುದು ಗೊತ್ತಾಗಿದೆ. ಬಿಜೆಪಿ ಅಸ್ತಿತ್ವ ಪ್ರದರ್ಶಿಸುವ ನಿಟ್ಟಿನಲ್ಲಿ ಸರ್ಕಾರ ರಚಿಸುವ ಕುರಿತು 7 ತಿಂಗಳಿಂದ ವಿಫಲ ಯತ್ನ ನಡೆಸಿದೆ. ಸಂಕ್ರಾಂತಿಗೆ ಸರ್ಕಾರ ಬೀಳುತ್ತದೆ ಎಂದು ಹೇಳಿದ ಮುಖಂಡರು ಇದೀಗ ಉತ್ತರಿಸಲಿ. ಸಂಕ್ರಾಂತಿ ಹಬ್ಬ ಸಡಗರದಿಂದ ಆಚರಣೆ ಮುಗಿದಿದೆ. ಸರ್ಕಾರ
ಸುಭದ್ರವಾಗಿದೆ ಎಂದರು.
ಸಮ್ಮಿಶ್ರ ಸರ್ಕಾರ ಕೆಡವಲು ನಡೆಯುತ್ತಿರುವ ಷಡ್ಯಂತ್ರದ ಭಾಗ ನಾನಾಗುವುದಿಲ್ಲ. ಹಲವಾರು ಕಡೆ ಎನ್.ಮಹೇಶ್ ಅವರು ಬಿಜೆಪಿ ಬೆಂಬಲಿಸುತ್ತಾರೆ ಎಂದು ಊಹಾಪೋಹ ಹಬ್ಬಿದೆ. ಆದರೆ,ನಾನು ಬಿಜೆಪಿಗೆ ಬೆಂಬಲ ನೀಡುವುದಿಲ್ಲ. ಬೆಂಬಲ ಸೂಚಿಸು ವಂತೆ ಬಿಜೆಪಿಯವರು ಯಾರೂ ಸಹ ನನ್ನನ್ನು ಸಂಪರ್ಕ ಮಾಡಿಲ್ಲ. ನನ್ನಬೆಂಬಲ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಮಾತ್ರ.
● ಎನ್.ಮಹೇಶ್, ಬಿಎಸ್ಪಿ ಶಾಸಕ