Advertisement

ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ

05:16 PM Jan 26, 2018 | Team Udayavani |

ಯಾದಗಿರಿ: ವೀರಶೈವ ಸಮಾಜವನ್ನು ಒಡೆಯುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಒಡೆದಾಡುವ ನೀತಿ
ಅನುಸರಿಸುತ್ತಿದ್ದಾರೆ ಎಂದು ಸಂಸದ ನಳೀನಕುಮಾರ ಕಟೀಲ್‌ ಆರೋಪಿಸಿದರು.

Advertisement

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ನವ ಭಾರತಕ್ಕಾಗಿ ನವ ಕರ್ನಾಟಕ ಜನಪರ ಶಕ್ತಿ ಸಭೆಯಲ್ಲಿ
ಮಾತನಾಡಿದ ಅವರು, ನೆಹರು ಅವರಿಂದ ಮನಮೋಹನ್‌ ಸಿಂಗ್‌ವರೆಗೆ ಕಾಂಗ್ರೆಸ್‌ ಅಧಿಕಾರದ ಅವಧಿಯಲ್ಲಿ
ಭ್ರಷ್ಟಾಚಾರ ತಾಂಡಾವವಾಡಿದೆ.

ಜಾತ್ಯಾತೀತವಾದಿಗಳೆಂದು ಹೇಳುವ ಕಾಂಗ್ರೆಸ್‌ನವರು, ಹಿಂದೂ ಮುಸ್ಲಿಂರನ್ನು ಪ್ರತ್ಯೇಕಗೊಳಿಸಿ ಕೋಮುವಾದ ಸೃಷ್ಟಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಕಿತ್ತೂಗೆಯಲು ಜನತೆ ಬಯಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ
ಬಿಜೆಪಿ ಪಕ್ಷ ಮಿಷನ್‌ 150 ಗೆಲುವು ಸಾಧಿ ಸಲಿದ್ದು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಗತ್ತಿನಲ್ಲಿಯೇ ದೇಶವನ್ನು ನಂ. 1 ಸ್ಥಾನಕ್ಕೆ ತರಲು ಬಯಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೇಶದಲ್ಲಿಯೇ ರಾಜ್ಯವನ್ನು ಕೊನೆ ಸ್ಥಾನಕ್ಕೆ ತರಲು ಬಯಸುತ್ತಿದ್ದಾರೆ. ಇಂತಹ ಸರಕಾರದಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷವನ್ನು ಬೂತಮಟ್ಟದಿಂದ
ಬಲಪಡಿಸಲಾಗುತ್ತಿದ್ದು, ಸಂಸದ ನಳೀನಕುಮಾರ ಕಟೀಲ್‌ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ 4 ವಿಧಾನ ಸಭಾ ಕ್ಷೇತ್ರಗಳು ಗೆಲ್ಲುವ ವಿಶ್ವಾಸವಿದೆ ಎಂದರು. ಸಮಾರಂಭದಲ್ಲಿ ಮಾಜಿ ಶಾಸಕ ಡಾ| ವೀರಬಸವಂತರೆಡ್ಡಿ ಮುದ್ನಾಳ,
ವೆಂಕಟರೆಡ್ಡಿ ಮುದ್ನಾಳ, ಎನ್‌. ಶಂಕ್ರಪ್ಪ, ನಾಗರತ್ನಾ ಕುಪ್ಪಿ, ದೇವಿಂದ್ರನಾಥ ನಾದ, ಡಾ| ಶರಣಭೂಪಾಲರೆಡ್ಡಿ ನಾಯ್ಕಲ್‌, ನಾಗರಾವ್‌, ಶರಣಗೌಡ ಬಾಡಿಯಾಳ, ಖಂಡಪ್ಪ ದಾಸನ್‌, ಎಸ್‌.ಪಿ. ನಾಡೇಕಾರ್‌, ವಿರೂಪಾಕ್ಷಯ್ಯ ಸ್ವಾಮಿ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next