Advertisement

ತೆಲಂಗಾಣದಲ್ಲಿ ಚುನಾವಣೆಗೆ ಬಿಜೆಪಿ ಸಿದ್ಧ: ಚಂದ್ರಶೇಖರ್ ರಾವ್ ಗೆ ಸವಾಲು

09:58 PM Jul 11, 2022 | Team Udayavani |

ಹೈದರಾಬಾದ್ : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ಬಿಜೆಪಿ ಸೋಮವಾರ ತಿರುಗೇಟು ನೀಡಿದ್ದು, ”ರಾವ್ ಅವರು ಪ್ರಧಾನಿ ವಿರುದ್ಧ ಅಸಭ್ಯ ಭಾಷೆ ಬಳಸುತ್ತಿರುವ ಸಾಮಾನ್ಯ ಅಪರಾಧಿ” ಎಂದು ಹೇಳಿದೆ.

Advertisement

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ರಾವ್ ಅವರ ಹೇಳಿಕೆಗಳನ್ನು ಖಂಡಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್,ರಾವ್ ಅವರು ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರರ ವಿರುದ್ಧ ಬಳಸಿದ್ದು, ಆಕ್ಷೇಪಾರ್ಹ ಭಾಷೆ ಮತ್ತು ಬೇಜವಾಬ್ದಾರಿ ಮತ್ತು ಪ್ರಚೋದನಕಾರಿ,ಯೋಗಿ ಧರಿಸಿರುವ ಉಡುಪಿನ ಬಗ್ಗೆ ಕಾಮೆಂಟ್ ಮಾಡಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ತೆಲಂಗಾಣದ ಬಿಜೆಪಿ ವ್ಯವಹಾರಗಳ ಉಸ್ತುವಾರಿ ಚುಗ್, ರಾವ್ ಅವರ ತಕ್ಷಣದ ಚುನಾವಣೆಗೆ ಹೋಗುವ ಸವಾಲನ್ನು ತಮ್ಮ ಪಕ್ಷ ಸ್ವಾಗತಿಸುತ್ತದೆ . ಮುಖ್ಯಮಂತ್ರಿಗಳು, ಬಿಜೆಪಿ ದಿನಾಂಕಗಳನ್ನು ನಿರ್ಧರಿಸಲು ಬಯಸುತ್ತಿದ್ದಾರೆ, ಅದು ಸಂವಿಧಾನ ಬದ್ಧವಲ್ಲ. ಬಿಜೆಪಿಯು ಮುಖ್ಯಮಂತ್ರಿಗೆ ವಿಧಾನಸಭೆ ವಿಸರ್ಜಿಸಬೇಕೆಂದು ಒತ್ತಾಯಿಸುತ್ತದೆ ಮತ್ತು ಅವರಿಗೆ ಧೈರ್ಯವಿದ್ದರೆ, ಹೊಸ ಜನಾದೇಶಕ್ಕಾಗಿ ಚುನಾವಣೆಗೆ ಕರೆ ನೀಡಿ” ಎಂದರು.

ಚುನಾವಣಾ ಆಯೋಗವು ದಿನಾಂಕವನ್ನು ನಿರ್ಧರಿಸುತ್ತದೆ ಮತ್ತು ಇನ್ನು 15 ದಿನಗಳ ನಂತರ ಚುನಾವಣೆ ನಡೆದರೂ ಬಿಜೆಪಿ ಸಿದ್ಧವಾಗಿದೆ .
ಜುಲೈ 3 ರಂದು ಇಲ್ಲಿನ ಪರೇಡ್ ಗ್ರೌಂಡ್ಸ್‌ನಲ್ಲಿ ಮೋದಿಯವರ ಸಾರ್ವಜನಿಕ ಸಭೆಗೆ ವ್ಯಕ್ತವಾದ ಭಾರೀ ಪ್ರತಿಕ್ರಿಯೆಯಿಂದ ಕೆಸಿಆರ್ ಆತಂಕದಿಂದ ನಡುಗಿದ್ದಾರೆ ಮತ್ತು ದಂಗಾಗಿದ್ದಾರೆ ಎಂದು ಚುಗ್ ಹೇಳಿದರು.

“ರಾವ್ ಅವರ ಇಡೀ ಕುಟುಂಬವು ಮೋದಿಯವರ ಸಾರ್ವಜನಿಕ ಸಭೆಯ ನೇರಪ್ರಸಾರ ವೀಕ್ಷಿಸಿದೆ. ಪರೇಡ್ ಮೈದಾನದಲ್ಲಿ ನೆರೆದಿದ್ದ ಲಕ್ಷಗಟ್ಟಲೆ ಜನರಿಂದ ಮೋದಿ, ಮೋದಿ ಎಂಬ ಉತ್ಸಾಹಭರಿತ ಘೋಷಣೆಯನ್ನು ಕೇಳಿದ್ದಾರೆ” ಎಂದುರು.

Advertisement

ತೆಲಂಗಾಣದ ಜನರು ಟಿಆರ್‌ಎಸ್ ಸರ್ಕಾರಕ್ಕೆ ವಿದಾಯ ಹೇಳಲು ನಿರ್ಧರಿಸಿದ್ದಾರೆ. ರಾಜಕೀಯದ ಹೊರತಾಗಿ, ಒಂದು ರಾಷ್ಟ್ರವಾಗಿ ಭಾರತದ ಬಗ್ಗೆ ಕೆಸಿಆರ್ ಅವರ ಸಿನಿಕತನದ ವರ್ತನೆಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next