Advertisement
ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಡಾ| ಉಮೇಶ ಜಾಧವ ಬುಧವಾರ ತಮ್ಮ ಉಮೇದುಗಾರಿಕೆ ಸಲ್ಲಿಸಿದರು. ಬಿಜೆಪಿ ರಾಜ್ಯಾಧ್ಯಕ್ಷರಿಂದ ಹಿಡಿದು ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪಕ್ಷದ ಪದಾಧಿಕಾರಿಗಳು, ಅಸಂಖ್ಯಾತ ಬೆಂಬಲಿಗರು ಹಾಗೂ ಸಾವಿರಾರು ಕಾರ್ಯಕರ್ತರು ಪಾಲ್ಗೊಳ್ಳುವ ಮುಖಾಂತರ ರಣಕಹಳೆ ಮೊಳಗಿಸಲಾಯಿತು. ಶರಣಬಸವೇಶ್ವರ ದೇವಸ್ಥಾನದಿಂದ ನೇರವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಡಾ| ಉಮೇಶ ಜಾಧವ ಬೆಳಗ್ಗೆ 11:27ಕ್ಕೆ ನಾಮಪತ್ರ ಸಲ್ಲಿಸಿದರು. ಈ ವೇಳೆಯಲ್ಲಿ ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ್, ಬಾಬುರಾವ ಚಿಂಚನಸೂರ, ಶಾಸಕ ಬಿ.ಜಿ. ಪಾಟೀಲ, ಜೇವರ್ಗಿಯ ಧರ್ಮಣ್ಣ ದೊಡ್ಡಮನಿ ಇದ್ದರು. ನಂತರ ನೆಹರು ಗಂಜ್‌ದಿಂದ 12 ಗಂಟೆಗೆ ಆರಂಭವಾದ ಮೆರವಣಿಗೆ ಸಂಜೆ 4ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಸಮಾಪ್ತಿಯಾಯಿತು. ಜಿಲ್ಲಾಧಿಕಾರಿ ಕಚೇರಿ ಎದುರು ಅಭ್ಯರ್ಥಿ ಸೇರಿದಂತೆ ಇತರ ಮುಖಂಡರು ಮಾತನಾಡಿ ಮತದಾರರು ಇದೇ ಉತ್ಸಾಹದಿಂದ ಏ. 23ರಂದು ಮತಗಟ್ಟೆಗೆ ತೆರಳಿ ಕಮಲದ ಗುರುತಿಗೆ ಮತ ಚಲಾಯಿಸಿ ಇತಿಹಾಸ ನಿರ್ಮಿಸಬೇಕೆಂದು ಮನವಿ ಮಾಡಿದರು.
Related Articles
ಮಾಲೀಕಯ್ಯ ವಿ. ಗುತ್ತೇದಾರ, ಬಾಬುರಾವ ಚಿಂಚನಸೂರ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ಪಾಟೀಲ ತೇಲ್ಕೂರ, ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ನಗರಾಧ್ಯಕ್ಷ, ಶಾಸಕ ಬಿ.ಜಿ.
ಪಾಟೀಲ, ಮಾಜಿ ಶಾಸಕರಾದ ವಿಶ್ವನಾಥ ಪಾಟೀಲ ಹೆಬ್ಟಾಳ, ವಾಲ್ಮೀಕಿ ನಾಯಕ, ಶಶೀಲ ನಮೋಶಿ, ಮಹಿಳಾ ಘಟಕದ ಅಧ್ಯಕ್ಷೆ ದಿವ್ಯಾ ಹಾಗರಗಿ, ಮುಖಂಡರಾದ ಚಂದು ಪಾಟೀಲ್, ಲಿಂಗನವಾಡಿ, ವಿಠ್ಠಲ ಲಾಧವ್, ನಾಮದೇವ ರಾಠೊಡ, ಪ್ರೇಮಕುಮಾರ ರಾಠೊಡ, ಅರವಿಂದ ಚವ್ಹಾಣ, ಧರ್ಮಣ್ಣ ಇಟಗಾ, ರವಿಚಂದ್ರ ಕ್ರಾಂತಿಕಾರಿ, ಶರಣಪ್ಪ ತಳವಾರ, ಮಹಾಂತಗೌಡ ಪಾಟೀಲ, ವಿದ್ಯಾಸಾಗರ ಕುಲಕರ್ಣಿ, ಲಿಂಗರಾಜ ಬಿರಾದಾರ, ಧರ್ಮಣ್ಣ ದೊಡ್ಡಮನಿ, ರವಿ ಬಿರಾದಾರ, ಪ್ರವೀಣ ತೆಗನೂರ, ರಾಜು ನೀಲಂಗಿ, ಮುಕುಂದ ದೇಶಪಾಂಡೆ, ದಯಾಘನ್ ಧಾರವಾಡಕರ್, ಶಿವಯೋಗಿ ನಾಗನಹಳ್ಳಿ, ರಾಜು ವಾಡೇಕಾರ, ಮಹೇಶ ರೆಡ್ಡಿ, ಮಲ್ಲು ಉದನೂರ, ಶಶಿಕಲಾ ಟೆಂಗಳಿ, ಬಸವರಾಜ ಇಂಗಿನ್, ಸುಭಾಷ ಬಿರಾದಾರ, ಸಂಗಣ್ಣ ಇಜೇರಿ, ಬಾಬುರಾವ ಹಾಗರಗುಂಡಗಿ ಹಾಗೂ ಮುಂತಾದವರು ಪಾಲ್ಗೊಂಡಿದ್ದರು.
Advertisement
ಮೋದಿ ಕೈ ಬಲಪಡಿಸಿಮೆರವಣಿಗೆಯಲ್ಲಿ ಪಾಲ್ಗೊಂಡ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಜನಸ್ತೋಮ ನೋಡಿದರೆ ಜಾಧವ್ ಅವರು ಲಕ್ಷ ಲೀಡ್‌ದಿಂದ ಗೆಲ್ಲುತ್ತಾರೆಂಬ ವಿಶ್ವಾಸವಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸುವ ಕಾರ್ಯ ಕಲಬುರಗಿಯಿಂದಲೇ ಆಗಲಿ ಎಂದು ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಕರೆ ನೀಡಿದರು.