Advertisement

ಯಡಿಯೂರಪ್ಪರನ್ನು ಬಿಜೆಪಿ ನಿರ್ಲಕ್ಷಿಸಿಲ್ಲ: ಬಿ.ವೈ. ರಾಘವೇಂದ್ರ

01:28 AM Dec 29, 2022 | Team Udayavani |

ಕುಂದಾಪುರ: ಓರ್ವ ಆದರ್ಶ ಕಾರ್ಯಕರ್ತರಾಗಿ ಬಿಜೆಪಿ ಪಕ್ಷ ಕಟ್ಟಿದವರಲ್ಲಿ ರೈತ ನಾಯಕ ಯಡಿಯೂರಪ್ಪ ಒಬ್ಬರು. ಈಗ ಪ್ರಧಾನಿ ಜತೆ ಕೂರುವ ಸಂಸದೀಯ ಮಂಡಳಿ ಸದಸ್ಯರಾಗಿ ಜವಾಬ್ದಾರಿ ಸಿಕ್ಕಿದೆ. ಬಿಜೆಪಿ ಪಕ್ಷ ಎಲ್ಲವನ್ನೂ ನೀಡಿದ್ದು, ಅವರನ್ನು ನಿರ್ಲಕ್ಷಿಸಿಲ್ಲ. ಜೀವನಪೂರ್ತಿ ಕೆಲಸ ಮಾಡಿದರೂ ಪಕ್ಷದ ಋಣ ತೀರಿಸಲಾಗದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಬಿಎಸ್‌ವೈ ಅವರ ಅಧಿಕಾರವನ್ನು ಬಿಜೆಪಿ ಕಸಿದುಕೊಂಡಿದೆ ಎಂಬ ಜನಾರ್ದನ ರೆಡ್ಡಿಯವರ ಆರೋಪದ ಕುರಿತಂತೆ ಅವರು ತ್ರಾಸಿಯಲ್ಲಿ ಪತ್ರಕರ್ತರಿಗೆ ಈ ಪ್ರತಿಕ್ರಿಯೆ ನೀಡಿದರು.

ಜನಾರ್ದನ ರೆಡ್ಡಿಯವರು ಈಗಷ್ಟೇ ಪಕ್ಷ ಕಟ್ಟಿದ್ದು, ಪಕ್ಷದ ಆಗು- ಹೋಗುಗಳು ಬರುವ ದಿನಗಳಲ್ಲಿ ಗೊತ್ತಾಗಲಿದೆ. ಎಲ್ಲಿ ಯಾರು ಸ್ಪರ್ಧಿಸಬೇಕೆಂದು ಪಕ್ಷ ನಿರ್ಧರಿಸುತ್ತದೆ. ಯಾರಿಗೆ ಜವಾಬ್ದಾರಿ ಯಾವ ನೀಡಬೇಕೆಂಬುದು ಸಂಘ ಟನೆ ತೀರ್ಮಾನಿಸುತ್ತದೆ. ಯಡಿಯೂರಪ್ಪ ಅವರು ಚುನಾವಣೆ ರಾಜಕೀಯದಿಂದ ದೂರ ಸರಿ ಯುವ ಆಪೇಕ್ಷೆ ಹೊಂದಿದ್ದು, ಶಿಕಾರಿಪುರ ಕ್ಷೇತ್ರದೊಂದಿಗೆ ಭಾವ ನಾತ್ಮಕ ಸಂಬಂಧವಿದೆ. ಈ ಬಾರಿ ವಿಜಯೇಂದ್ರ ಅವರನ್ನು ಸ್ಪರ್ಧೆಗಿಳಿ ಸಲು ಕಾರ್ಯಕರ್ತರ ಒಕ್ಕೊರಲ ಒತ್ತಾಯವಾಗಿದ್ದು, ತಾನು ಚುನಾ ವಣೆಗೆ ನಿಲ್ಲುತ್ತಿಲ್ಲ, ವಿಜಯೇಂದ್ರಗೆ ಅವಕಾಶ ನೀಡಲು ಯಡಿಯೂರಪ್ಪ ಅವರು ಸಹ ಪಕ್ಷಕ್ಕೆ ವಿನಂತಿದ್ದಾರೆ ಎಂದರು.

ಬೈಂದೂರಿನಲ್ಲೂ ಈಗ ಸಾಕಷ್ಟು ಆಕಾಂಕ್ಷಿಗಳಿದ್ದು, ಈ ಬಗ್ಗೆ ಪಕ್ಷ ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಒಂದು ಕಾಲ
ದಲ್ಲಿ ಅದರಲ್ಲೂ ಜನಸಂಘದ ಕಾಲದಲ್ಲಿ ಚುನಾವಣೆಗೆ ಅಭ್ಯರ್ಥಿಯಾಗಲು ಕೈ ಹಿಡಿದು ಎಳೆದು ತರಬೇಕಿತ್ತು. ಈಗ ಸಹಜವಾಗಿಯೇ ಸ್ಪರ್ಧೆಯಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಕೂಡ ಟಿಕೆಟ್‌ ಕೇಳಬಹುದು. ಆದರೆ ಒಮ್ಮೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಮೇಲೆ ಮೈಮನಸ್ಸಿನಲ್ಲದೇ ಕಾರ್ಯಕರ್ತರು ದುಡಿಯುತ್ತಾರೆ ಎಂದರು.

ರಾಜಕೀಯ ಸರಿಯಲ್ಲ
ನಂಜುಂಡಪ್ಪ ವರದಿ ಪ್ರಕಾರ ಬೈಂದೂರು ಅತ್ಯಂತ ಹಿಂದುಳಿದ ತಾಲೂಕು. ಈಗ ಡಬಲ್‌ ಎಂಜಿನ್‌ ಸರಕಾರವಿದೆ. ಸಾಕಷ್ಟು ಅನುದಾನವೂ ಬರುತ್ತಿದೆ. ಹಾಗಾಗಿ ಅಭಿವೃದ್ಧಿ ವಿಚಾರಗಳಲ್ಲಿ ರಾಜಕಾರಣ ಬದಿಗಿಟ್ಟು ಬಂದಂತಹ ಅನುದಾನವನ್ನು ಸರಿಯಾಗಿ ಬಳಸಿಕೊಂಡರೆ ನಮ್ಮೂರಿಗೆ ಆಸ್ತಿಯಾಗುತ್ತದೆ. ಇಲ್ಲಿ ಸೂಕ್ತ ಕಚೇರಿ ಇಲ್ಲ. ಕವಿ ಅಡಿಗರ ಹೆಸರಿನಲ್ಲಿ ಸುಸಜ್ಜಿತ ಪುರಭವನ ಆಗಬೇಕೆನ್ನುವ ಇಚ್ಛೆ ನಮ್ಮದು. ಸಂಸದರದ್ದಾಗಲಿ, ಶಾಸಕರದ್ದಾಗಲಿ ಹೆಸರು ಇಡುವುದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ವಿರೋಧ ಬೇಡ ಎಂದವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next