Advertisement

ಜನಾರ್ದನ ರೆಡ್ಡಿಯವರಿಗೆ ಬಿಜೆಪಿ ಬಾಗಿಲು ಮುಚ್ಚಿಲ್ಲ :ಸಂಸದ ಸಂಗಣ್ಣ ಕರಡಿ

05:40 PM Dec 31, 2022 | Team Udayavani |

ಗಂಗಾವತಿ: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಬಗ್ಗೆ ಪಕ್ಷದ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಗಾಲಿ ಜನಾರ್ದನ ರೆಡ್ಡಿಯವರು ನೂತನ ಪಕ್ಷ ಸ್ಥಾಪನೆ ನಂತರದ ರಾಜಕೀಯ ಬೆಳವಣ ಗೆ ಕುರಿತು ಪಕ್ಷದ ಹೈಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದೆ. ಜನಾರ್ದನ ರೆಡ್ಡಿಯವರಿಗೆ ಬಿಜೆಪಿ ಪಕ್ಷದ ಬಾಗಿಲು ಮುಚ್ಚಿಲ್ಲ. ಈ ಕುರಿತು ಸಚಿವ ಬಿ.ಶ್ರೀರಾಮುಲು ಹಾಗೂ ರೆಡ್ಡಿ ಸಹೋದರರ ಜತೆ ಪಕ್ಷದ ಹೈಕಮಾಂಡ್ ಚರ್ಚೆ ನಡೆಸುವ ಭರವಸೆ ಇದೆ ಎಂದರು.

ಗಾಲಿ ಜನಾರ್ದನ ರೆಡ್ಡಿ ನೂತನ ಪಕ್ಷವನ್ನು ಘೋಷಣೆ ಮಾಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ರೆಡ್ಡಿ ಅವರಿಗೆ ಸ್ಥಾನಮಾನ ಗೌರವ ನೀಡಲಾಗಿತ್ತು ಆದರೂ ಅವರ ಮನಸ್ಸಿಗೆ ನೋವಾಗಿದೆ ಎಂದು ಹೇಳಿದ್ದಾರೆ ಈ ಕುರಿತು ರಾಜ್ಯ ಮತ್ತು ರಾಷ್ಟ್ರಮಟ್ಟದ ಮುಖಂಡರ ಜೊತೆ ಚರ್ಚೆ ನಡೆಸಲಾಗುತ್ತದೆ. ಬಿಜೆಪಿ ಪಕ್ಷದ ಬಾಗಿಲು ಇನ್ನೂ ರೆಡ್ಡಿ ಅವರಿಗೆ ಮುಚ್ಚಿಲ್ಲ ಈಗಾಗಲೇ ರೆಡ್ಡಿ ಅವರ ಸಹೋದರರು ಮತ್ತು ಶ್ರೀರಾಮುಲು ಬಿಜೆಪಿ ಪಕ್ಷದ ಹೈಕಮಾಂಡ್ ಜೊತೆ ಮಾತನಾಡಿ ಸರಿಪಡಿಸುವ ಯತ್ನ ಮಾಡಲಾಗುತ್ತಿದೆ.ಅದಕ್ಕೂ ಮೀರಿ ರೆಡ್ಡಿ ಅವರು ಬಿಜೆಪಿ ಬಿಡುವ ಕುರಿತು ನಿರ್ಧರಿಸಿದ್ದರೆ ಅವರಿಗೆ ಹಾಗೂ ಅವರ ಪಕ್ಷಕ್ಕೆ ಶುಭಾಶಯಗಳು ಎಂದರು.

ಕೊಪ್ಪಳ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ಸುತ್ತಲಿನ ಸಂಸದ ಲೋಕಸಭಾ ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಗಳಾಗಿವೆ. ಬಿಜೆಪಿ ಕಾರ್ಯಕರ್ತರು ಭದ್ರವಾಗಿರುವುದರಿಂದ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಗೆಲುವು ಬಿಜೆಪಿ ಪಕ್ಷಗಳ ಅಭ್ಯರ್ಥಿ ಗಳದ್ದೇ ಆಗಿರುತ್ತದೆ. ಗಾಲಿ ಜನಾರ್ದ ರೆಡ್ಡಿ ಅವರ ನೂತನ ಕಲ್ಯಾಣ ರಾಜ್ಯ ಪ್ರಗತಿಪಕ್ಷ ಬಿಜೆಪಿ ಮೇಲೆ ಪರಿಣಾಮ ಬೀರುವುದಿಲ್ಲ. ಬಿಜೆಪಿ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದರು.

ರೆಡ್ಡಿ ಅವರು ಗಂಗಾವತಿ ಸೇರಿ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವ ಕುರಿತು ಬಿಜೆಪಿ ಪಕ್ಷದ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಅವರು ನೂತನ ಪಕ್ಷದಿಂದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದರೂ ಬಿಜೆಪಿ ಪಕ್ಷದ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ. ಎಲ್ಲಾ ಪಕ್ಷಗಳ ಮೇಲೆ ರೆಡ್ಡಿಯವರ ಪಕ್ಷದ ಅಭ್ಯರ್ಥಿಗಳ ಪರಿಣಾಮವಾಗುತ್ತದೆ ನಾವೆಲ್ಲ ಪಕ್ಷದ ಹೈಕಮಾಂಡ್ ಮೇಲೆ ಭರವಸೆ ಇಟ್ಟುಕೊಂಡಿದ್ದು ಮುಂಬರುವ ದಿನಗಳಲ್ಲಿ ಜನಾರ್ದನ ರೆಡ್ಡಿ ಹಾಗೂ ಬಿಜೆಪಿ ಮುಖಂಡರ ಮಧ್ಯೆ ಮಾತುಕತೆ ನೆಡೆದು ಒಳ್ಳೆಯ ದಿನಗಳು ಬರುವ ಲಕ್ಷಣಗಳಿವೆ ಎಂದರು.

Advertisement

ತಾವು ಜೆಡಿಎಸ್ ಸೇರುವ ಪ್ರಶ್ನೆ ಇಲ್ಲ. ಬಿಜೆಪಿ ಪಕ್ಷ ತಮ್ಮ ಕುಟುಂಬಕ್ಕೆ ಎಲ್ಲವನ್ನು ನೀಡಿದೆ.1978 ರಿಂದ ನಾನು ರಾಜಕೀಯದಲ್ಲಿ ಇದ್ದೇನೆ ಮಂತ್ರಿ ಸ್ಥಾನ ಒಂದು ಬಿಟ್ಟು ಎಲ್ಲಾ ಸ್ಥಾನಗಳನ್ನು ಪಡೆದು ಜನಸಾಮಾನ್ಯರಿಗೆ ನೆರವಾಗಿದ್ದೇನೆ. ಕೊಪ್ಪಳ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಜನರ ಕೆಲಸಗಳನ್ನು ಮಾಡಿದ್ದೇನೆ ಒಂದು ವೇಳೆ ಬಿಜೆಪಿ ಪಕ್ಷ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸೂಚನೆ ನೀಡಿದರೆ ಸ್ಪರ್ಧೆ ಮಾಡುವುದಾಗಿ ಕರಡಿ ಸಂಗಣ್ಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಪರಣ್ಣ ಮುನವಳ್ಳಿ, ದಡೇಸೂಗೂರು ಬಸವರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next