ಬಾಗಲಕೋಟೆ: ಸ್ವಯಂ ಕೃತ ಅಪರಾಧದಿಂದಲೇ ಸರ್ಕಾರ ಹೋಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಜಮಖಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರ ಬೀಳಿಸಲು ನಾವೇನು ಕೈಹಾಕೋಕೆ ಹೋಗಲ್ಲ. ಬಿಜೆಪಿ ಸರ್ಕಾರದವರು ಏನ್ಮಾಡ್ತಾರೆ ಅದಕ್ಕೆ ಹಸ್ತಕ್ಷೇಪ ಮಾಡೋಕೆ ನನಗಿಷ್ಟವಿಲ್ಲ ಎಂದರು.
ಖಾತೆ ಹಂಚಿಕೆಯಲ್ಲಿ ಹಿರಿತನಕ್ಕೆ ಬೆಲೆ ಇಲ್ಲ ಅನ್ನೋದು ಸ್ಪಷ್ಟವಾಗಿದೆ. ಅಶೋಕ್, ಈಶ್ವರಪ್ಪ ಡಿಸಿಎಂ ಆಗಿದ್ದವರು. ಅವರನ್ನು ಈ ಬಾರಿ ಡಿಸಿಎಂ ಮಾಡಿಲ್ಲ. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದವರು ಅವರನ್ನು ಡಿಸಿಎಂ ಮಾಡಿಲ್ಲ. ಲಕ್ಷ್ಮಣ ಸವದಿ ಎಂಎಲ್ಎ ಆಗದಿದ್ದವನನ್ನು ಡಿಸಿಎಂ ಮಾಡಿದ್ದಾರೆ ಎಂದು ಟೀಕಿಸಿದರು.
ಡಿಸಿಎಂ ಹುದ್ದೆ ಸಂವಿಧಾನಿಕವಾದದುದಲ್ಲ. ಈ ರೀತಿ ಯಾರ ಕಾಲದಲ್ಲೂ ಇರಲಿಲ್ಲ. ಎಲ್ಲರನ್ನೂ ಸಮಾಧಾನ ಮಾಡೋಕೆ ೩ಡಿಸಿಎಂ ಹುದ್ದೆ ಮಾಡಿದ್ದಾರೆ. ಕಾರಜೋಳ ಜನತಾದಳದಿಂದ ಹೋಗಿದ್ದವನು. ಆರ್ ಎಸ್ ಎಸ್ ನವನಲ್ಲ. ನಮ್ಮಲ್ಲಿದ್ದವನು. ಹಾಗಾಗಿ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟ ಆಗಿಯೇ ಆಗುತ್ತೆ ಎಂದರು.
ಇಬ್ಬರು ಡಿಸಿಎಂ ಮಾಡಿದ್ದವರೂ ಇವ್ರೆ. ಈಗ ಮೂರು ಡಿಸಿಎಂ ಹುದ್ದೆ ಮಾಡಿರೋರು ಇವ್ರೆ.. ಯಡಿಯೂರಪ್ಪರನ್ನು ಕಟ್ಪಿ ಹಾಕೋಕೆ ಈ ರೀತಿ ಮಾಡಿದ್ದಾರೆ ಅನ್ಸುತ್ತೆ. ಹೈಕಮಾಂಡ್ ಈ ರೀತಿ ಮಾಡಿರೋದು. ಇದು ಬಿಎಸ್ವೈ ಗೆ ಇಷ್ಟವಿಲ್ಲ. ಹೈಕಮಾಂಡ್ ಹೇಳಿ ಬಿಎಸ್ವೈ ಮೇಲೆ ಒತ್ತಡ ಹಾಕಿ ಡಿಸಿಎಂ ಮಾಡಿಸಿದ್ದಾರೆ. ಯಡಿಯೂರಪ್ಪ ರನ್ನು ಕಾರ್ನರ್ ಮಾಡೋ ಉದ್ದೇಶವಿದೆ ಎಂದರು.
ಈ ಬಾರಿ ಯಡಿಯೂರಪ್ಪರನ್ನು ಸಿಎಂ ಮಾಡೋಕೆ ಇಷ್ಟವಿರಲಿಲ್ಲ. ಚುನಾವಣೆಗೆ ಹೋಗಬೇಕೆಂದುಕೊಂಡಿದ್ರು. ಯಡಿಯೂರಪ್ಪ ಗೊಗರೆದುಕೊಂಡು ಸಿಎಂ ಆಗಿದ್ದಾರೆ. ಎಷ್ಟು ದಿನ ಸರ್ಕಾರ ಇರುತ್ತೆ ಅಂತ ಹೇಳೋಕೆ ಆಗೋಲ್ಲ.. ಕರ್ನಾಟಕ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಬಿಜೆಪಿ ಸರ್ಕಾರದ ಆಯುಷ್ಯ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು