Advertisement

ತಳ ಸಮುದಾಯಗಳ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧ

02:59 PM Mar 06, 2023 | Team Udayavani |

ಚಿಕ್ಕಬಳ್ಳಾಪುರ: ಹಿಂದುಳಿದಿರುವ ಕೊರಚ, ಕೊರಮ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದ್ದು, ಭವನ ನಿರ್ಮಾಣಕ್ಕೆ ಸರ್ಕಾರದ ಅನುದಾನದ ಜೊತೆಗೆ ವೈಯಕ್ತಿಕ ನೆರವು ನೀಡುವುದಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಭರವಸೆ ನೀಡಿದರು.

Advertisement

ನಗರದ ಕೊರವರ ಪೇಟೆಯಲ್ಲಿ ಕೊರಚ ಮತ್ತು ಕೊರಮರ ಕ್ಷೇಮಾಭಿವೃದ್ಧಿ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಸಮುದಾಯಗಳ ಮಕ್ಕಳು ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿವರಿಸಿದರು.

ಮಕ್ಕಳ ಶಿಕ್ಷಣಕ್ಕೆ ಆದ್ಯತೆ: ಈಗಾಗಲೇ ಶರಣರಾದ ಚಂದಯ್ಯ ಅವರ ಜಯಂತಿ ಅನ್ನು ಅಧಿಕೃತವಾಗಿ ಆಚರಿಸಲು ರಾಜ್ಯ ಸರ್ಕಾರ ಘೋಷಿಸಿರುವುದು ಹೆಮ್ಮೆಯ ಸಂಗತಿ. ಬಲಹೀನ ಸಮುದಾಯಗಳು ಸಂಘಟನೆ ಆಗುವುದರಿಂದ ಅಂಬೇಡ್ಕರ್‌ ಅವರ ಆಶಯ ಈಡೇರಿಸಿದಂತಾಗುತ್ತದೆ. ಸಮುದಾಯದಲ್ಲಿ ಹೋರಾಟದ ಮನೋಭಾವ ಬೆಳೆಯಬೇಕು. ಇದಕ್ಕೆ, ಶಿಕ್ಷಣ ಅಗತ್ಯವಿದ್ದು, ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಅವರು ಸಲಹೆ ನೀಡಿದರು.

ಒಬ್ಬರಾದರೂ ಶಾಸಕರಾಗಬೇಕು: ರಾಜ್ಯದಲ್ಲಿ 15 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸಮುದಾಯ ಇದಾಗಿದ್ದು, ಪ್ರತಿ ನಿಧಿಸುವವರು ವಿಧಾನಸಭೆಯಲ್ಲಿ ಇಲ್ಲದಿರುವುದು ನೋವು ತಂದಿದೆ. 2023ರ ಚುನಾವಣೆಯಲ್ಲಿ ಒಬ್ಬ ಶಾಸಕರಾದರೂ ಈ ಸಮುದಾಯದಿಂದ ಆರಿಸಿ ಬರಬೇಕು. ಸರ್ಕಾರದ ಯೋಜನೆಗಳನ್ನು ರೂಪಿಸಲು ಸಹಕಾರ ನೀಡಲು ಸಮುದಾಯದ ಒಬ್ಬರಾದರೂ ಶಾಸಕರಿರಬೇಕು ಎಂದು ಅವರು ಪ್ರತಿಪಾದಿಸಿದರು.

ಸಂಪುಟ ಉಪ ಸಮಿತಿ ರಚನೆ: ತಳ ಸಮುದಾಯಗಳಿಗೆ ಬಲ ನೀಡಲು ರಾಜ್ಯ ಸರ್ಕಾರ ಸಂಪುಟ ಉಪ ಸಮಿತಿ ರಚನೆ ಮಾಡಿದ್ದು, ಅದರಲ್ಲಿ ತಾವೂ ಸದಸ್ಯರಾಗಿದ್ದೇವೆ. ತಳ ಸಮುದಾಯಗಳಿಗೆ ನ್ಯಾಯ ಒದಗಿಸುವ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಕೆಲ ಸಮುದಾಯಗಳ ಒಬ್ಬರೂ ಸರ್ಕಾರಿ ನೌಕರರಿಲ್ಲ. ಈ ಬಗ್ಗೆ ವರದಿ ಪಡೆಯಲಾಗುತ್ತಿದೆ. ಪ್ರತಿ ಸಮುದಾಯಕ್ಕೂ ಶಿಕ್ಷಣ, ಉದ್ಯೋಗ, ಸಾಮಾಜಿಕ ಸಬಲೀಕರಣ ಮಾಡುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

ನಾಮ ನಿರ್ದೇಶನ ಸದಸ್ಯರ ನೇಮಕ: ಈ ಸಮುದಾಯದಿಂದ ಚಿಕ್ಕಬಳ್ಳಾಪುರ ನಗರಸಭಾ ಸದಸ್ಯರಾಗಿ ಒಬ್ಬರನ್ನು ನಾಮ ನಿರ್ದೇಶನ ಮಾಡುವುದಾಗಿ, ಗ್ರಾಪಂ ಚುನಾವಣೆಯಲ್ಲಿ ಸ್ಪ ರ್ಧಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ದೇವರಾಜ ಅರಸು ಅವರು ಅತಿ ಸಣ್ಣ ಸಮು ದಾಯಗಳನ್ನೂ ಗುರ್ತಿಸಿದರು. ಚುನಾವಣೆ ಯಲ್ಲಿ ಗೆಲ್ಲಿಸಿ, ಶಾಸಕರನ್ನಾಗಿ ಮಾಡಿ, ಉನ್ನತ ಮಟ್ಟದ ಸ್ಥಾನ ಮಾನ ನೀಡಿದ್ದಾರೆ. ಹಾಗೆ ಮಾಡಿದಾಗಲೇ ಸಮಾಜ ದಲ್ಲಿ ಅಂತರ ಕಡಿಮೆಯಾಗಲಿದೆ ಎಂದು ಹೇಳಿದರು.

ದೇವನಹಳ್ಳಿ ಮಾಜಿ ಶಾಸಕ ಚಂದ್ರಣ್ಣ, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್‌ಕಿರಣ್‌, ಸಮುದಾಯದ ಜಿಲ್ಲಾಧ್ಯಕ್ಷ ಚಿಕ್ಕಪ್ಪಯ್ಯ, ತಾಲೂಕು ಅಧ್ಯಕ್ಷ ಮಂಜುನಾಥ್‌, ಗಂಗಾಧರಸ್ವಾಮಿ, ಸುಗುಣ, ಮೊಬೈಲ್‌ ಬಾಬು, ಸಂತೋಷ್‌, ಶ್ರೀನಿವಾಸ್‌, ಜೆ.ನಾಗರಾಜ್‌, ಮುಖವೀಣೆ ಆಂಜಿನಪ್ಪ, ಸಂದೀಪ್‌, ಮುನಿಸ್ವಾಮಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next