Advertisement
ಮೈತ್ರಿ ಸರಕಾರದ ಭಾಗವಾಗಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ಬಂದಿರುವ 17 ಶಾಸಕರು ಆರಂಭದಲ್ಲಿ ತಮ್ಮದೇ ಆದ ಪ್ರತ್ಯೇಕ ಗುಂಪು ಕಟ್ಟಿ ಒಗ್ಗಟ್ಟು ಪ್ರದರ್ಶಿಸಿದ್ದರು. ಈ ಗುಂಪು ಕ್ರಮೇಣ ನಾಯಕತ್ವ ಪ್ರತಿಷ್ಠೆ ಯಿಂದಾಗಿ ಮೂರು ಹೋಳಾ ಗಿದ್ದು, ಎಲ್ಲರ ನಡೆಯೂ ನಿಗೂಢವಾಗಿದೆ.
ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ವಲಸೆ ಬಂದು ಬಿಜೆಪಿಯಲ್ಲಿಯೇ ಮುಂದುವರಿಯುವುದಾಗಿ ಮೇಲಿಂದ ಮೇಲೆ ಹೇಳುತ್ತಿದ್ದರೂ ವಲಸಿಗರ ಬಗ್ಗೆ ಬಿಜೆಪಿಯಲ್ಲಿ ಅನುಮಾನಗಳು ಮುಂದುವರಿದಿವೆ ಎನ್ನಲಾಗುತ್ತಿದೆ.
ಸಚಿವ ಎಂ.ಟಿ.ಬಿ. ನಾಗರಾಜ್ ಕೂಡ ಆಗಾಗ ಬಹಿರಂಗವಾಗಿ ಬೇಸರ ವ್ಯಕ್ತ ಪಡಿಸುತ್ತಿದ್ದು, ಒಂದು ಹಂತದಲ್ಲಿ ಕಾಂಗ್ರೆಸ್‌ಗೆ ಮರಳಲು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿತ್ತು. ಎಚ್.ವಿಶ್ವನಾಥ್ ತಮ್ಮ ಹೇಳಿಕೆಗಳ ಮೂಲಕ ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದು, ಮತ್ತೆ ಜೆಡಿಎಸ್ ಸೇರುವ ಮುನ್ಸೂಚನೆ ನೀಡುತ್ತಿದ್ದಾರೆ. ಬಿಜೆಪಿಗೂ ಅವರ ಬಗ್ಗೆ ಆಸಕ್ತಿ ಇದ್ದಂತಿಲ್ಲ. ವಿಧಾನಪರಿಷತ್ ಸದಸ್ಯ ಆರ್. ಶಂಕರ್, ಎಚ್. ನಾಗೇಶ್, ಶ್ರೀಮಂತ ಪಾಟೀಲ್ ಮತ್ತೆ ಸಚಿವ ರಾಗಲು ಕಸರತ್ತು ನಡೆಸಿದ್ದಾರೆ. ಮಹೇಶ್ ಕುಮಟಳ್ಳಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಸಿಗುವ ಬಗ್ಗೆಯೇ ಸಂಶಯವಿದೆ ಎನ್ನಲಾಗುತ್ತಿದೆ.
Related Articles
ಶಿಸ್ತಿನ ಪಕ್ಷ ಎನ್ನುವ ಬಿಜೆಪಿಯ ಕೆಲವು ನಿಯಮಗಳನ್ನು ಪಾಲಿಸಲು ಅನ್ಯ ಪಕ್ಷಗಳಿಂದ ಬಂದವರಿಗೆ ಕಷ್ಟವಾಗುತ್ತಿದೆ. ಆದರೆ ಪ್ರಮುಖ ರಾಗಿರುವ ಗೋಪಾಲಯ್ಯ, ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ, ಆನಂದ ಸಿಂಗ್, ಡಾ| ಕೆ. ಸುಧಾಕರ್, ಕೆ.ಸಿ. ನಾರಾಯಣ ಗೌಡ, ಬಿ.ಸಿ. ಪಾಟೀಲ್, ಶಿವರಾಮ ಹೆಬ್ಟಾರ್ ಮೊದಲಾದವರು ಮೂಲ ಬಿಜೆಪಿಯವರಿಗಿಂತಲೂ ಹೆಚ್ಚು ಪಕ್ಷ ನಿಷ್ಠೆ ತೋರುತ್ತಿದ್ದಾರೆ. ಪಕ್ಷದ ಸೂಚನೆಯನ್ನು ಸರಿಯಾಗಿ ಪಾಲಿಸುತ್ತಿದ್ದಾರೆ. ಇದರ ನಡುವೆಯೇ ನಾರಾಯಣ ಗೌಡ, ಸೋಮಶೇಖರ್, ಡಾ| ಸುಧಾಕರ್, ಬೈರತಿ ಬಸವರಾಜ್ ಕಾಂಗ್ರೆಸ್ ನಾಯಕರ ಜತೆ ಸಂಪರ್ಕ ದಲ್ಲಿದ್ದಾರೆ ಎಂಬ ಅನುಮಾನ ಬಿಜೆಪಿಯ ಒಂದು ವರ್ಗದ ನಾಯಕರಲ್ಲಿ ಮೂಡಿದೆ ಎನ್ನಲಾಗಿದೆ.
Advertisement
-ಶಂಕರ ಪಾಗೋಜಿ