ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಎನ್‌ಡಿಎ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಲು ಬಿಜೆಪಿ, 14 ಸದಸ್ಯರುಳ್ಳ ಪ್ರಚಾರ ಸಮಿತಿಯನ್ನು ನೇಮಿಸಿದ್ದು, ಅದರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಸಹ- ಸಂಚಾಲಕ ಜವಾಬ್ದಾರಿಯನ್ನು ನೀಡಿದೆ.
ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ವಿನೋದ್ ತಾಬ್ಡೆ ಅವರಿಗೂ ಸಹ- ಸಂಚಾಲಕ ಜವಾಬ್ದಾರಿಯನ್ನು ನೀಡಲಾಗಿದೆ.
ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಈ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದ್ದು, ಈ ಸಮಿತಿಯಲ್ಲಿ ಕೇಂದ್ರದ ಸಚಿವರಾದ ಜಿ. ಕಿಶನ್ ರೆಡ್ಡಿ, ಅಶ್ವಿನಿ ವೈಷ್ಣವ್, ಸರ್ಬಾನಂದ ಸೊನೊವಾಲ್, ಅರ್ಜುನ್ ಮೇಘವಾಲ್, ಭಾರತಿ ಪವಾರ್ ಇದ್ದಾರೆ.
ಇದೇ ವೇಳೆ ಮುಂದಿನ ವಾರವೇ ಮತ್ತು ಪ್ರಧಾನಿ ಮೋದಿಯವರು ಜಿ7 ರಾಷ್ಟ್ರಗಳ ಸಭೆ ತೆರಳುವ ಮುನ್ನವೇ ಎನ್‌ಡಿಎ ಅಭ್ಯರ್ಥಿಯನ್ನು ಮುಂದಿನ ವಾರವೇ ಘೋಷಣೆ ಮಾಡುವ ಸಾಧ್ಯತೆಗಳಿವೆ.
Related Articles
ಇದೇ ವೇಳೆ ಶಿವಸೇನೆ ಮುಖಂಡ ಸಂಜಯ ರಾವತ್ ಮಾತನಾಡಿ ಎನ್‌ಡಿಎ ವಿರುದ್ಧ ಪ್ರತಿಪಕ್ಷಗಳು ಪ್ರಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ.