Advertisement

ಮಹಿಳಾ ಮತದಾರರ ಮೇಲೆ ಬಿಜೆಪಿ ಕಣ್ಣು!

01:27 AM Feb 08, 2023 | Team Udayavani |

ಹೊಸದಿಲ್ಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಮತ್ತು ದೇಶದ ಬೇರೆ ಬೇರೆ ಕಡೆಗಳ ಚುನಾವಣೆಗಳ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳೂ ಮಹಿಳಾ ಮತದಾರರ ಓಲೈಕೆಗೆ ಮುಂದಾಗಿವೆ.

Advertisement

ಬಿಜೆಪಿ ಮಹಿಳಾ ಮೋರ್ಚಾ, ಪ್ರಸಕ್ತ ವರ್ಷದ ಕರ್ನಾಟಕ ಸಹಿತ 9 ವಿಧಾನಸಭೆ ಚುನಾವಣೆಗಳು ಮತ್ತು 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮಹಿಳಾ ಮತದಾರರನ್ನು ಸೆಳೆಯುವ ದೃಷ್ಟಿಯಿಂದ “ಕಮಲದೂತ’ ಅಭಿಯಾನ ನಡೆಸಲು ಮುಂದಾಗಿದೆ.

ಅದರಲ್ಲೂ ಬುಡಕಟ್ಟು ವರ್ಗದ ಮತ್ತು ಹಿಂದುಳಿದ ವರ್ಗಗಳ ಮಹಿಳೆಯರನ್ನೇ ಗುರಿಯಾಗಿಟ್ಟುಕೊಂಡು ಈ ಅಭಿಯಾನ ನಡೆಸಲಾಗುತ್ತಿದೆ. ಇದರಲ್ಲಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಹಿಳೆಯರನ್ನು ರಾಯಭಾರಿಗಳನ್ನಾಗಿ ಮಾಡಲಾಗುತ್ತದೆ. ಈ ಮೂಲಕ ಕೇಂದ್ರ ಮತ್ತು ಬಿಜೆಪಿ ಸರಕಾರಗಳ ಸಾಧನೆಗಳನ್ನು ಪ್ರಚುರ ಪಡಿಸಲು ಮುಂದಾಗಿದೆ. ಇವರಿಗೆ ತರಬೇತಿಯನ್ನೂ ನೀಡಲಾಗುತ್ತದೆ. ರಾಜ್ಯಾವಾರು ಅಭಿಯಾನ

ಈಗಾಗಲೇ ಈಶಾನ್ಯ ರಾಜ್ಯಗಳಲ್ಲಿ ಚುನಾವಣೆ ಘೋಷಣೆಯಾಗಿದ್ದು, ತಯಾರಿಯೂ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಅಲ್ಲಿ ಮಹಿಳಾ ಮೋರ್ಚಾ ಕಡೆಯಿಂದ ಇಂಥದ್ದೇ ಅಭಿಯಾನ ನಡೆಸಲಾಗುತ್ತಿದೆ. ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಬುಡಕಟ್ಟು ಜನಾಂಗದವರೇ ಹೆಚ್ಚಾಗಿದ್ದು, ಇವರಿಗೆ ಸರಕಾರಿ ಯೋಜನೆಗಳ ಬಗೆಗೆ   ಈ ಅಭಿಯಾನದ ಮೂಲಕ ತಿಳಿಸಿಕೊಡಲಾಗುತ್ತದೆ ಎಂದು ಮಹಿಳಾ ಮೋರ್ಚಾ ವಕ್ತಾರರು ಮತ್ತು ಮೇಘಾಲಯ ರಾಜ್ಯದ ಚುನಾವಣ ಸಹ ಉಸ್ತುವಾರಿ ನೀತು ದಬಾಸ್‌ ಹೇಳಿದ್ದಾರೆ. ಜತೆಗೆ ನಮ್ಮ ದೇಶದ ರಾಷ್ಟ್ರಪತಿ ಸಂಥಲ್‌ ಸಮುದಾಯಕ್ಕೆ ಸೇರಿದವರು ಎಂಬುದನ್ನೂ ನಾವು ಅರಿಯಬೇಕಿದೆ ಎಂದಿದ್ದಾರೆ.

ಹೀಗಾಗಿಯೇ ಬುಡಕಟ್ಟು ವರ್ಗದ ಮಹಿಳೆಯರನ್ನು ಗುರಿಯಾಗಿಸಿಕೊಂಡು, ಅವರನ್ನೂ ತಲುಪಲು ಬಿಜೆಪಿ ಮಹಿಳಾ ಮೋರ್ಚಾ ಮುಂದಾಗಿದೆ. ಬುಡಕಟ್ಟು ಜನಾಂಗದ ಕೆಲವು ಮಹಿಳೆಯರನ್ನು ಆರಿಸಿಕೊಂಡು ಇವರನ್ನು ಕಮಲ ದೂತರನ್ನಾಗಿ ಮಾಡಲಾಗುತ್ತದೆ. ಇವರ ಮೂಲಕವೇ ಸರಕಾರಿ ಕಾರ್ಯಕ್ರಮಗಳ ಪ್ರಚಾರ ನಡೆಸಲಾಗುತ್ತದೆ.

Advertisement

ಈ ತಿಂಗಳೇ ತರಬೇತಿ|
ಬಿಜೆಪಿ ಮಹಿಳಾ ಮೋರ್ಚಾ ಈ ತಿಂಗಳು ದೇಶಾದ್ಯಂತ ಮಹಿಳಾ ಕೇಡರ್‌ಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ಇವರಿಗೆಲ್ಲಾ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಇದಕ್ಕೆ ಕಾರಣವೂ ಇದೆ ಎಂದಿರುವ ಮಹಿಳಾ ಮೋರ್ಚಾ ಅಧ್ಯಕ್ಷೆ ವಾನತಿ ಶ್ರೀನಿವಾಸನ್‌, ನಮ್ಮ ಕಾರ್ಯಕರ್ತರಿಗೇ ಯೋಜನೆಗಳ ಬಗ್ಗೆ ಅರಿವು ಇರುವುದಿಲ್ಲ. ಹೀಗಾಗಿ ಅವರಿಗೆ ಮಾಹಿತಿ ನೀಡಬೇಕಾಗುತ್ತದೆ. ಆಗ ಈ ಕಾರ್ಯಕರ್ತರು ಜನಸಾಮಾನ್ಯರಿಗೆ ನಮ್ಮ ಯೋಜನೆಗಳ ಬಗ್ಗೆ ಚೆನ್ನಾಗಿ ತಿಳಿವಳಿಕೆ ನೀಡುತ್ತಾರೆ ಎಂದಿದ್ದಾರೆ. ನಮ್ಮ ತರಬೇತಿ ಕಾರ್ಯಕ್ರಮಗಳಿಂದಾಗಿ ಕಾರ್ಯಕರ್ತರಿಗೂ ಲಾಭವಿದೆ. ನಾವು ಹೆಚ್ಚೆಚ್ಚು ಮಂದಿಯನ್ನು ತಲುಪಬಹುದು ಎಂದು ವಾನತಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next