Advertisement
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ದೇಶದಲ್ಲಿ ಶೇ. 17ರಷ್ಟು ಅಲ್ಪಸಂಖ್ಯಾತರಿದ್ದು ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದರು.
Related Articles
Advertisement
ಜನರ ಒಲವು ಮೃತ್ರಿ ಪಕ್ಷದತ್ತ: ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದು, ಜನರ ಒಲವು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಪರವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಹುಮತದಿಂದ ಅಧಿಕಾರಕ್ಕೆ ತರಬೇಕಿತ್ತು ಎಂಬುದು ಜನರ ಮನಸ್ಸಿನಲ್ಲಿದೆ. ಕಾಂಗ್ರೆಸ್ ಸೋಲಿಸಿದ್ದ ನೋವು ಜನರ ಮನಸ್ಸಿನಲ್ಲಿ ಕಾಣುತ್ತಿದೆ. ಈ ಬಾರಿ ಲೋಕಸಭೆಯಲ್ಲಿ ಕಾಂಗ್ರೆಸ್ ಪರ ಮತ ಹಾಕಬೇಕು ಎಂದು ಮತದಾರರು ಮನಸ್ಸು ಮಾಡಿದ್ದಾರೆ ಎಂದರು.
ಪೋಳ್ಳು ಭರವಸೆ ನೀಡುವ ಮೋದಿ: ಬಿಜೆಪಿ ಅಧಿಕಾರದಲ್ಲಿದ್ದಾಗ ಐದು ವರ್ಷ ಕೆಲಸ ಮಾಡಲಿಲ್ಲ. ಜನರಿಗೆ ನೀಡಿದ್ದ ಆಶ್ವಾಸನೆ ಈಡೇರಿಸಲಿಲ್ಲ. ಬಿಜೆಪಿ ಮತ ಕೇಳಲು ಯಾವುದೇ ಬಂಡವಾಳ ಇಲ್ಲದೇ ಚುನಾವಣೆ ಎದುರಿಸುವಂತಾಗಿದೆ. ಜನರ ಮುಂದೆ ಬಿಜೆಪಿ ಕೆಲಸದ ಮೇಲೆ ಚರ್ಚೆಗೆ ಬರಲು ಸಿದ್ದವಿಲ್ಲ. ಭಯೋತ್ಪಾದಕರ ಮತ್ತು ಸೈನಿಕರ ನಡುವೆ ನಡೆದ ಸರ್ಜಿಕಲ್ ಸ್ಟ್ರೈಕ್ ಅನ್ನು ಬಿಜೆಪಿ ಬಂಡವಾಳ ಮಾಡಿಕೊಂಡಿದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ದೇಶದ ಚೌಕಿದಾರ್ ಎಂದು ಹೇಳುತ್ತಿದ್ದಾರೆ. ಜನರ ಭರವಸೆ ಈಡೇರಿಸದೇ ವಿವಿಧ ಬಣ್ಣಗಳಲ್ಲಿ ಜನರ ಬಳಿಗೆ ಬರುತ್ತಿದ್ದಾರೆ. ಇದು ಜನರಿಗೆ ತಿಳಿದಿದ್ದು, ಬಿಜೆಪಿ ವಿರುದ್ದ ಮತ ಚಲಾಯಿಸಲಿದ್ದಾರೆ ಎಂದು ಡಿಸೋಜ ಹೇಳಿದರು. ತಾಪಂ ಮಾಜಿ ಸದಸ್ಯ ರಾಜು, ಮುಖಂಡರಾದ ಸೈಯದ್, ಪಿಯೂಷ್, ಪತ್ರಿಕಾ ಕಾರ್ಯದರ್ಶಿ ಅರುಣ್ ಕುಮಾರ್ ಉಪಸ್ಥಿತರಿದ್ದರು.