Advertisement

ಬಿಜೆಪಿ ಜಿಲ್ಲಾ ಉಸ್ತುವಾರಿ ಅದಲು ಬದಲು? ಶೀಘ್ರದಲ್ಲಿ ಅಧಿಕೃತ ಪಟ್ಟಿ ಬಿಡುಗಡೆ

02:03 AM Mar 31, 2021 | Team Udayavani |

ಬೆಂಗಳೂರು: ಪಕ್ಷದಲ್ಲಿ ನಾಯಕತ್ವ ಬೆಳೆಸಲು ಮತ್ತು ಜಿಲ್ಲಾ ಮಟ್ಟದಲ್ಲಿ ರಾಜಕೀಯ ಗೊಂದಲ ನಿವಾರಿಸಲು ಬಿಜೆಪಿಯು ಸಚಿವರ ತವರು ಜಿಲ್ಲೆ ಬಿಟ್ಟು ಜಿಲ್ಲಾ ಉಸ್ತುವಾರಿಗಳ ನೇಮಕಕ್ಕೆ ಸೂಚನೆ ನೀಡಿದ್ದು, ಮಾ. 31ರ ಸಂಜೆ ಅಥವಾ ಎ. 1ರಂದು ಅಧಿಕೃತ ಪಟ್ಟಿ ಬಿಡುಗಡೆಯಾಗಲಿದೆ.

Advertisement

ಸಚಿವರು ತವರು ಜಿಲ್ಲೆಯ ಉಸ್ತುವಾರಿ ವಹಿಸಿದ್ದರೆ ಅವರ ನಾಯಕತ್ವ ಜಿಲ್ಲಾ ರಾಜಕಾರಣಕ್ಕೆ ಸೀಮಿತವಾಗಲಿದೆ. ಜಿಲ್ಲೆಯಲ್ಲಿ ಇಬ್ಬರು -ಮೂವರು ಸಚಿವರಿದ್ದರೆ, ಅವರ ನಡುವೆ ಪ್ರತಿಷ್ಠೆ ಮತ್ತು ಶಾಸಕರ ನಡುವೆ ತಾರತಮ್ಯದ ಆರೋಪಗಳು ಹೆಚ್ಚುತ್ತವೆ ಎನ್ನುವ ಕಾರಣಕ್ಕೆ ಬೇರೆ ಜಿಲ್ಲೆಗಳ ಉಸ್ತುವಾರಿ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಉತ್ತರ ಕರ್ನಾಟಕದ ಸಚಿವರನ್ನು ದಕ್ಷಿಣ ಕರ್ನಾಟಕ ಜಿಲ್ಲೆಗಳಿಗೆ ಮತ್ತು ದಕ್ಷಿಣ ಕರ್ನಾಟಕ ಜಿಲ್ಲೆಗಳ ಸಚಿವರನ್ನು ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಉಸ್ತುವಾರಿ ಆಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next