ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ನ ಭೀಕರ ಹತ್ಯೆಯ ಹಂತಕರಲ್ಲಿ ಒಬ್ಬನ ಸಂಪರ್ಕದ ಆರೋಪವನ್ನು ಬಿಜೆಪಿ ಶನಿವಾರ ಕಟುವಾಗಿ ನಿರಾಕರಿಸಿದೆ.
“ನಮಗೆ ಯಾವುದೇ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ” ಎಂದು ರಾಜ್ಯದ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಮುಖ್ಯಸ್ಥ ಸಾದಿಕ್ ಖಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅಲ್ಲದೆ ಈ ಹತ್ಯೆಯು ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ವೈಫಲ್ಯ ಎಂದು ಪುನರಾವರ್ತಿಸಿದರು
ಉದಯಪುರದಲ್ಲಿ ಟೈಲರ್‌ನ ಕ್ರೂರ ಹತ್ಯೆಯ ಪ್ರಮುಖ ಆರೋಪಿಗಳಲ್ಲಿ ಒಬ್ಬರು ‘ಬಿಜೆಪಿ ಸದಸ್ಯ’ ಎಂದು ಕಾಂಗ್ರೆಸ್ ಆರೋಪಿಸಿದೆ.
“ಕನ್ಹಯ್ಯಾ ಲಾಲ್‌ನ ಹಂತಕರಲ್ಲಿ ಓರ್ವ ರಿಯಾಜ್ ಅಟ್ಟಾರಿ ಬಿಜೆಪಿಯ ಸದಸ್ಯ” ಎಂದು ಹಿರಿಯ ಕಾಂಗ್ರೆಸ್ ನಾಯಕ ಪವನ್ ಖೇರಾ ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.
Related Articles
ಈ ಹೇಳಿಕೆಗಳು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಅವರು ಅವುಗಳನ್ನು “ನಕಲಿ ಸುದ್ದಿ” ಎಂದು ತಳ್ಳಿಹಾಕಿದರು.
ಇದನ್ನೂ ಓದಿ:ಹಂತಕರಿಗೆ ಪಾಕ್ ಸಂದೇಶ: ಪಾಕಿಸ್ಥಾನದ ಸಲ್ಮಾನ್ ಭಾಯಿ ಎಂಬ ವ್ಯಕ್ತಿಯಿಂದ ಸೂಚನೆ: ಎನ್‌ಐಎ
“ನೀವು ಸುಳ್ಳು ಸುದ್ದಿ ಅನ್ನು ಪ್ರಚಾರ ಮಾಡುತ್ತಿದ್ದೀರಿ ಎಂದು ನನಗೆ ಆಶ್ಚರ್ಯವಿಲ್ಲ. ಉದಯಪುರದ ಕೊಲೆಗಾರರು ಬಿಜೆಪಿಯ ಸದಸ್ಯರಲ್ಲ” ಎಂದು ಮಾಳವಿಯಾ ಹೇಳಿದರು.
ದರ್ಜಿ ಕನ್ಹಯ್ಯಾ ಲಾಲ್ ಅವರನ್ನು ಮಂಗಳವಾರ ಮಧ್ಯಾಹ್ನ ಇಬ್ಬರು ಹತ್ಯೆ ಮಾಡಿದ್ದಾರೆ. ಕನ್ಹಯ್ಯ ಲಾಲ್ ಅವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಪ್ರವಾದಿ ಮೊಹಮ್ಮದ್ ಅವರನ್ನು ಅವಮಾನಿಸಿದ್ದಾರೆ ಎಂದು ಹತ್ಯೆ ಮಾಡಿದ್ದಾರೆ ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ.