Advertisement

ಕುಮಾರಸ್ವಾಮಿ ರಾಜೀನಾಮೆಗೆ ಬಿಜೆಪಿ ಆಗ್ರಹ

10:46 AM Jul 10, 2019 | Team Udayavani |

ಗದಗ: ಜೆಡಿಎಸ್‌-ಕಾಂಗ್ರೆಸ್‌ ಶಾಸಕರ ರಾಜೀನಾಮೆಯಿಂದಾಗಿ ರಾಜ್ಯ ಸಮ್ಮಿಶ್ರ ಸರಕಾರ ಅಲ್ಪ ಮತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮಾನವ ಸರಪಳಿ ನಿರ್ಮಿಸಿ ಕೆಲಕಾಲ ರಸ್ತೆ ತಡೆ ನಡೆಸಿದರು. ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ದುರಾಡಳಿತ ಹಾಗೂ ಕ್ಷೇತ್ರಗಳ ಅಭಿವೃದ್ಧಿಯನ್ನು ಕಡೆಗಣಿಸಿದ್ದರಿಂದ ಶಾಸಕರು ರೋಸಿ ಹೋಗಿದ್ದಾರೆ. ಈಗಾಗಲೇ ಅತೃಪ್ತ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ರಾಜ್ಯ ಸಮ್ಮಿಶ್ರ ಸರಕಾರ ಅಲ್ಪಮತಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಬಹುಮತ ಕಳೆದುಕೊಂಡಿರುವ ಎಚ್.ಡಿ. ಕುಮಾರಸ್ವಾಮಿ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆ ನೇತೃತ್ವವ ವಹಿಸಿ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಮಾಳಶೆಟ್ಟಿ, ಸರ್ಕಾರ ಅಲ್ಪ ಮತಕ್ಕೆ ಕುಸಿದಿರುವ ಹಿನ್ನೆಲೆಯಲ್ಲಿ ಸಂವಿಧಾನಿಕನಾತ್ಮಕವಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಅರ್ಹತೆ ಇಲ್ಲ. ಸಂವಿಧಾನದ ಘನತೆಯನ್ನು ಕಾಪಾಡಲು ಕುಮಾರಸ್ವಾಮಿ ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ನಾಡಿನ ಜನರ ಆಶೋತ್ಥರಗಳನ್ನು ಈಡೇರಿಸಲು ವಿಫಲರಾದ ಸಮ್ಮಿಶ್ರ ಸರ್ಕಾರದ ನಾಯಕರುಗಳು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲಾಗದೇ, ತಮ್ಮ ಅಸಮರ್ಥತೆಯನ್ನು ಬಿಜೆಪಿ ಮೇಲೆ ಹಾಕುತ್ತಿರುವುದು ನಾಚಿಕೆಗೇಡು ಎಂದು ಟೀಕಸಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎಂ.ಎಸ್‌.ಕರೀಗೌಡ್ರ, ಎಂ.ಎಂ. ಹಿರೇಮಠ ಮಾತನಾಡಿ, ಬಹುಮತ ಕಳೆದುಕೊಂಡಿರುವ ಸರಕಾರವನ್ನು ಮುಂದುವರಿಸದೇ, ಕುಮಾರಸ್ವಾಮಿ ಅವರು ತಕ್ಷಣವೇ ರಾಜೀನಾಮೆ ನೀಡಬೇಕು. ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ಅರ್ಹತೆ ಇಲ್ಲ. ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಪ್ರಮುಖರಾದ ಅಶೋಕ ನವಲಗುಂದ, ಮಂಡಲ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ಪ್ರಮುಖರಾದ ಬಿ.ಎಸ್‌.ಚಿಂಚಲಿ, ಕಾಂತೀಲಾಲ ಬನ್ಸಾಲಿ, ವಿನಾಯಕ ಮಾನ್ವಿ, ಚಂದ್ರು ವರ್ಣೇಕರ, ಮಾಧವ ಗಣಾಚಾರಿ, ಸುಧೀರ ಕಾಟಿಗರ, ಅರವಿಂದ ಹುಲ್ಲೂರ, ಸಿದ್ದು ಪಲ್ಲೇದ ಮಾತನಾಡಿದು.

Advertisement

ಸಿ.ಜಿ. ಸೊನ್ನದ, ಗಿರೀಶ ಕಾರಬಾರಿ, ಇರ್ಷಾದ್‌ ಮಾನ್ವಿ, ಮಾಜಿ ನಗರಸಭಾ ಉಪಾಧ್ಯ ಶ್ರೀನಿವಾಸ ಭಾಂಡಗೆ, ಲಕ್ಷ್ಮಣ ದೊಡ್ಡಮನಿ, ಅಶೋಕ ಕುಡತಿನಿ, ಸುರೇಶ ಮರಳಪ್ಪನವರ, ಜಾವೀದ್‌ ಜಮಾಲಸಾಬನವರ, ಸುರೇಶ ಚಿತ್ತರಗಿ, ಚಿದಾನಂದ ಕಾಂಬಳೆ, ನವೀನ ಕೊಟೆಕಲ, ವಿಜಯ ಹಿರೇಮಠ, ಅರವಿಂದ ಕೆಲೂರ, ಸುರೇಶ ಮಗದುಮ, ಸಂತೋಷ ಹುಬ್ಬಳ್ಳಿ, ಮೋಹನ ಮಾಳಗಿಮನಿ, ಶರಣಪ್ಪ ಕಮಡೊಳ್ಳಿ, ಪ್ರಶಾಂತ ಬೆಟಗೇರಿ, ವಿನಾಯಕ ಹಬೀಬ, ಕಿರಣ ಕಲಾಲ, ಮಂಜು ಮುಳಗುಂದ, ವಾಸು ಹುಯಿಲಗೋಳ, ರಾಹುಲ ಅರಳಿ, ಬಾಬು ಯಲಿಗಾರ, ದೇವೇಂದ್ರ ಹೂಗಾರ, ಮಂಜುನಾಥ ಕೊಟ್ನಿಕಲ್ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next