Advertisement

ಮಂಗಳೂರು ಜನತೆಗೆ ಉಭಯ ಪಕ್ಷಗಳ ಭರಪೂರ ಭರವಸೆ

10:40 PM Nov 06, 2019 | mahesh |

ಮಹಾನಗರ ಪಾಲಿಕೆಗೆ ನ. 12ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ನಗರದ ಒಟ್ಟು ಅಭಿವೃದ್ಧಿಗೆ ಸಂಬಂಧಿಸಿದಂತಹ ಭವಿಷ್ಯದ ಯೋಜನೆಗಳನ್ನು ಒಳ ಗೊಂಡ ಪ್ರಮುಖ ಎರಡು ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ಬುಧವಾರ ಬಿಡುಗಡೆಗೊಂಡಿವೆ. ಬಿಜೆಪಿ ಪ್ರಣಾಳಿಕೆಯನ್ನು ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಮತ್ತು ಕಾಂಗ್ರೆಸ್‌ ಪ್ರಣಾಳಿಕೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಯಾ ಪಕ್ಷಗಳ ಜಿಲ್ಲಾ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು. ವಾರ್ಡ್‌ ಸಮಿತಿ ರಚನೆ, ನಗರದ ತ್ಯಾಜ್ಯ ನಿರ್ವಹಣೆಗೆ ವೈಜ್ಞಾನಿಕ ಪರಿಹಾರ ಹುಡುಕುವ ಬಗ್ಗೆ ಎರಡೂ ಪಕ್ಷಗಳು ಮತದಾರರಿಗೆ ಭರವಸೆ ನೀಡಿವೆ.

Advertisement

ಬಿಜೆಪಿ ಪ್ರಣಾಳಿಕೆ ಪ್ರಮುಖಾಂಶ
ನಗರಕ್ಕೆ 24×7 ಗುಣಮಟ್ಟದ ಕುಡಿಯುವ ನೀರಿನ ಸೌಲಭ್ಯ
ನಗರದ ಒಳ ಭಾಗದ ಎಲ್ಲ ರಸ್ತೆಗಳ ಉನ್ನತೀಕರಣಕ್ಕಾಗಿ ವಿಶೇಷ ಯೋಜನೆ
ನಿವೇಶನ ರಹಿತ ಬಡ ಕುಟುಂಬಗಳಿಗೆ ವಸತಿ ಸಮುಚ್ಚಯ ನಿರ್ಮಾಣ
ಪಾಲಿಕೆ ವ್ಯಾಪ್ತಿಯಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ ರಚನೆಗೆ ಯೋಜನೆ
ನೆನೆಗುದಿಗೆ ಬಿದ್ದಿರುವ ರಂಗ ಮಂದಿರದ ಕಾಮಗಾರಿಯ ಶೀಘ್ರ ಅನುಷ್ಠಾನ
ಸರಕಾರಿ ಕಟ್ಟಡ, ಹೊಸದಾಗಿ ನಿರ್ಮಾಣವಾಗುವ ವಸತಿ ಕಟ್ಟಡಗಳಲ್ಲಿ ಕಡ್ಡಾಯ ಮಳೆ ನೀರು ಕೊಯ್ಲು ಅಳವಡಿಕೆ
ನಗರದ ತೆರೆದ ಬಾವಿಗಳ ದುರಸ್ತಿ-ನಿರ್ವಹಣೆ
ಒಣ ಮತ್ತು ಹಸಿ ಕಸದ ವಿಂಗಡಣೆ, ಸಂಸ್ಕರಣೆಗೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಪರಿಣಾಮಕಾರಿ ಅನುಷ್ಠಾನದ ಮೂಲಕ ಪಚ್ಚನಾಡಿಯ ಸಮಸ್ಯೆಗೆ ಶಾಶ್ವತ ಪರಿಹಾರ
ಕೇಂದ್ರದ ಸ್ವತ್ಛ ಭಾರತ ಯೋಜನೆಯಡಿ ಲಭ್ಯವಿರುವ ಅನುದಾನ ಬಳಸಿ ಆಧುನಿಕ ತಂತ್ರಜ್ಞಾನದೊಂದಿಗೆ ಸುಧಾರಿತ ಸಂಸ್ಕರಣಾ ಘಟಕ ಹಾಗೂ ಪಚ್ಚನಾಡಿಯ ಲ್ಯಾಂಡ್‌ ಫಿಲ್‌ ಸೈಟ್‌ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಿ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ
ಎಡಿಬಿ ಯೋಜನೆ ಅನ್ವಯ ಅನುಷ್ಠಾನಗೊಳಿಸಿರುವ ಒಳಚರಂಡಿ ವ್ಯವಸ್ಥೆಯಲ್ಲಿನ ನ್ಯೂನತೆ ಸರಿಪಡಿಸಿ ನಗರದ ಪ್ರಮುಖ ಸಮಸ್ಯೆಗೆ ಶಾಶ್ವತ ಪರಿಹಾರ
ಖಾಲಿ ಲಭ್ಯ ಸ್ಥಳಗಳಲ್ಲಿ ನಗರ ಅರಣ್ಯ ಬೆಳೆಸುವ ಯೋಜನೆ
ಪಾಲಿಕೆಯಲ್ಲಿ ಲಭ್ಯವಿರುವ ಕೆರೆ ಅಭಿವೃದ್ಧಿ ನಿಧಿಯನ್ನು ಸಮರ್ಪಕವಾಗಿ ಬಳಸಿ ನಗರದ ಎಲ್ಲ ಕೆರೆಗಳ ಅಭಿವೃದ್ಧಿ
ವೆನಾÉಕ್‌ ಮತ್ತು ಲೇಡಿಗೋಶನ್‌ ಆಸ್ಪತ್ರೆಯನ್ನು ಸೂಪರ್‌ ಸ್ಪೆಷಾಲಿಟಿ ದರ್ಜೆಗೆ ಏರಿಸಲು ಪ್ರಾಮಾಣಿಕ ಪ್ರಯತ್ನ
ಮಾರಕ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ
ವಾಹನ ದಟ್ಟಣೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ನಗರದ ಹೊರ ವಲಯದಲ್ಲಿ ಸೆಟಲೈಟ್‌ ಬಸ್‌ ನಿಲ್ದಾಣಗಳ ಸ್ಥಾಪನೆ
ಹೊಸದಾಗಿ ನಿರ್ಮಾಣವಾಗುವ ಎಲ್ಲ ಬಹುಮಹಡಿ ಕಟ್ಟಡಗಳ ಕೆಳ ಅಂತಸ್ತುಗಳಲ್ಲಿ ಕಡ್ಡಾಯವಾಗಿ ಪಾರ್ಕಿಂಗ್‌ ವ್ಯವಸ್ಥೆಗಳ ಅನುಷ್ಠಾನ
ಪಾಲಿಕೆ ವ್ಯಾಪ್ತಿಯಲ್ಲಿರುವ ಕೇಂದ್ರೀಕೃತ ಆಡಳಿತ ವ್ಯವಸ್ಥೆಯ ವಿಕೇಂದ್ರೀಕರಣಕ್ಕೆ ಆದ್ಯತೆ
ಪ್ರಾಪರ್ಟಿ ಕಾರ್ಡ್‌ ವಿತರಣೆಯಲ್ಲಿನ ಗೊಂದಲ ನಿವಾರಣೆ
ಅವೈಜ್ಞಾನಿಕವಾಗಿ ಹೆಚ್ಚಿಸಲಾದ ತೆರಿಗೆ ಇಳಿಸಿ, ಪಾಲಿಕೆ ಆದಾಯವನ್ನು ಇತರ ಮೂಲಗಳಿಂದ ಕ್ರೋಢೀಕರಿಸಿ ಸಾರ್ವಜನಿಕರ ಮೇಲಿನ ಕರಭಾರ ತಗ್ಗಿಸಲು ವಿಶೇಷ ಕ್ರಮ. ನೀರಿನ ಬಿಲ್‌ ಇಳಿಕೆ ಬಗ್ಗೆ ಕ್ರಮ
ಸಾಂಸ್ಕೃತಿಕ, ಧಾರ್ಮಿಕ, ಕಡಲ ತೀರ, ವೈದ್ಯಕೀಯ ಪ್ರವಾಸೋದ್ಯಮ ಹಾಗೂ ಆತಿಥೊÂàದ್ಯಮಗಳಿಗೆ ಪೂರಕ ಯೋಜನೆಗಳ ಅನುಷ್ಠಾನ
ಪಾಲಿಕೆ ಆಡಳಿತವನ್ನು ಮಕ್ಕಳ ಸ್ನೇಹಿಯನ್ನಾಗಿ ಪರಿವರ್ತಿಸಿ ಭಿಕ್ಷಾಟನೆ, ಮಾದಕ ದ್ರವ್ಯ ಮಾರಾಟ, ಮಕ್ಕಳ ಶೋಷಣೆಯ ವಿರುದ್ಧ ಲಭ್ಯವಿರುವ ಎಲ್ಲ ಕಾನೂನುಗಳ ಕಡ್ಡಾಯ ಅನುಷ್ಠಾನ
ಸ್ಮಾರ್ಟ್‌ಸಿಟಿ ಯೋಜನೆಯಡಿಯಲ್ಲಿ ಮಂಗಳೂರನ್ನು ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿಸುವ ನಿಟ್ಟಿನಲ್ಲಿ ಐಟಿ ಪಾರ್ಕಿನ ಉನ್ನತೀಕರಣಕ್ಕೆ ಕ್ರಮ
ಉದ್ಯಮಶೀಲತೆ ಪ್ರೋತ್ಸಾಹಿಸುವುದಕ್ಕಾಗಿ ಕೌಶಲಾಭಿವೃದ್ಧಿ ಕೇಂದ್ರಗಳ ಸ್ಥಾಪನೆ

ಕಾಂಗ್ರೆಸ್‌ ಪ್ರಣಾಳಿಕೆ ಪ್ರಮುಖಾಂಶ
ನೀರಿನ ದರದ ಮರುಪರಿಶೀಲನೆ, ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಪರ್ಯಾಯ ಮೂಲಗಳಿಂದ ನೀರು ಪೂರೈಕೆಯ ಯೋಜನೆ
ಎಡಿಬಿ 2ನೇ ಹಂತದಲ್ಲಿ ಎಲ್ಲಾ ವಾರ್ಡ್‌ಗಳಲ್ಲಿ 24×7 ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ತುಂಬೆಯಿಂದ ಮಂಗಳೂರಿಗೆ ಹಾದು ಹೋಗಿರುವ ಪೈಪ್‌ಲೈನ್‌ನ ಅನಧಿಕೃತ ನೀರು ಸಂಪರ್ಕ ತೆಗೆದು-ಗ್ರಾಮಾಂತರಕ್ಕೆ ಪರ್ಯಾಯ ಸಂಪರ್ಕ
ನಂತೂರು-ಕದ್ರಿ-ಕಂಕನಾಡಿ ವೃತ್ತದಿಂದ ಕೋಟಿ ಚೆನ್ನಯ್ಯ ವೃತ್ತದವರೆಗೆ ಸ್ಮಾರ್ಟ್‌ ರಸ್ತೆ, ಬಿಜೈ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ದೇರೆಬೈಲ್‌ ಕೊಂಚಾಡಿ ರಸ್ತೆಗೂ ಸ್ಮಾರ್ಟ್‌ ಭಾಗ್ಯ, ಕಣ್ಣೂರು – ಕನ್ನಗುಡ್ಡೆ – ಕುಲಶೇಖರ ರಸ್ತೆ ಅಭಿವೃದ್ಧಿ, ಲೇಡಿಹಿಲ್‌ ವೃತ್ತದಿಂದ ಕುದ್ರೋಳಿ-ಕಾರ್‌ಸ್ಟ್ರೀಟ್‌-ಗಡಿಯಾರ ವೃತ್ತದ ರಸ್ತೆ ಸ್ಮಾರ್ಟ್‌ ರೂಪ, ಬೋಂದೆಲ್‌ನಿಂದ ವಾಮಂಜೂರುವರೆಗಿನ ರಸ್ತೆ ಅಭಿವೃದ್ಧಿ, ಮೇರಿಹಿಲ್‌-ಮರಕಡ, ಜಪ್ಪಿನಮೊಗರು-ಬಜಾಲ್‌-ಪಡೀಲ್‌, ಹಳೆ ಬಂದರು, ಯೆಯ್ನಾಡಿ ಶಕ್ತಿನಗರ ರಸ್ತೆ ಅಭಿವೃದ್ಧಿ.
ಪಣಂಬೂರು-ಮೀನಕಳಿಯ-ಬೈಕಂಪಾಡಿ-ಇಡ್ಯಾ-ಸುರತ್ಕಲ್‌ ರಸ್ತೆ ಅಭಿವೃದ್ಧಿ, ಸುರತ್ಕಲ್‌-ಕಾನ-ಎಂಆರ್‌ಪಿಎಲ್‌ ರಸ್ತೆ 6 ಪಥ ರಸ್ತೆಯನ್ನಾಗಿ ಅಭಿವೃದ್ಧಿ.
ಮಹಾಕಾಳಿಪಡು³ವಿನಲ್ಲಿ ರೈಲ್ವೇ ಕೆಳಸೇತುವೆ, ಕೊಡಕಲ್‌ನಿಂದ ಕಣ್ಣಗುಡ್ಡೆಗೆ ಕಣ್ಣೂರು ಬಳಿಯಲ್ಲಿ ರೈಲ್ವೇ ಅಂಡರ್‌ ಪಾಸ್‌, ಕದ್ರಿ ಕೆಪಿಟಿ ಬಳಿ ಅಂಡರ್‌ಪಾಸ್‌, ಪಾರ್ಕಿಂಗ್‌ಗೆ ನಗರದಲ್ಲಿ ಖಾಲಿಯಿರುವ ಜಾಗದಲ್ಲಿ ಇಂಟರ್‌ಲಾಕ್‌ ಅಳವಡಿಸಿ ವಾಹನ ನಿಲುಗಡೆ, ಅಟೋರಿಕ್ಷಾ, ಟ್ಯಾಕ್ಸಿ ಪಾರ್ಕಿಂಗ್‌ ಜಾಗಕ್ಕೆ ಮೂಲ ಸೌಲಭ್ಯ.
ಪಂಪ್‌ವೆಲ್‌ನಲ್ಲಿ ಸರ್ವಿಸ್‌ ಬಸ್‌ ನಿಲ್ದಾಣ, ಸಿಟಿ ಬಸ್‌ ಟರ್ಮಿನಲ್‌ ನಿರ್ಮಾಣ, ಮಲ್ಲಿಕಟ್ಟೆಯಲ್ಲಿ ಸಿಟಿ ಬಸ್‌ ಟರ್ಮಿನಲ್‌ ಅಭಿವೃದ್ಧಿ, ಸುರತ್ಕಲ್‌ ಬಸ್‌ ನಿಲ್ದಾಣ ಅಭಿವೃದ್ಧಿ, ಸ್ಟೇಟ್‌ಬ್ಯಾಂಕ್‌ ಬಳಿ ಸುಸಜ್ಜಿತ ಸಿಟಿಬಸ್‌ ನಿಲ್ದಾಣ
 ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ ತ್ಯಾಜ್ಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಸದಿಂದ ವಿದ್ಯುತ್‌ ಉತ್ಪಾದನೆ ಅಥವಾ ಇನ್ನಿತರ ಸುಧಾರಿತ ವ್ಯವಸ್ಥೆಯಡಿ ತ್ಯಾಜ್ಯ ಸಂಸ್ಕರಣೆ
 ಡೆಂಗ್ಯೂ, ಮಲೇರಿಯಾ, ಇಲಿಜ್ವರ ಮುಂತಾದ ಜ್ವರಗಳ ನಿಗ್ರಹಕ್ಕೆ ಪರಿಣಾಮಕಾರಿ ಕ್ರಮ
ನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಜಪ್ಪಿನಮೊಗರುವಿನಲ್ಲಿ ನೇತ್ರಾವತಿ ನದಿಯ ಸೇತುವೆ ಬಳಿಯಿಂದ ಕಣ್ಣೂರಿನವರೆಗೆ ನದಿ ತೀರದ ಅಭಿವೃದ್ಧಿ ಕಾಮಗಾರಿ
ಕೂಳೂರು ಹಿನೀ°ರಿನಲ್ಲಿ ಬೋಟು ವಿಹಾರಧಾಮ ಅಭಿವೃದ್ಧಿ
 ಹಳೆ ಬಂದರು, ಮೀನುಗಾರಿಕಾ ಬಂದರಿನ ಕಡೆಗೆ ಹೋಗುವ ಎಲ್ಲ ರಸ್ತೆ, ಬಂದರು ಪ್ರದೇಶದ ಎಲ್ಲ ರಸ್ತೆ ಆದ್ಯತೆ ಮೇರೆಗೆ ಅಭಿವೃದ್ಧಿ
ಬೆಂಗ್ರೆ ಪ್ರದೇಶದಲ್ಲಿ ಲಕ್ಷದೀÌಪದ ಕಡೆಗೆ ಸರಕು ಸಾಗಾಣಿಕೆಗೆ ಬಂದರು ಸ್ಥಾಪನೆ
ದುಡಿಯುವ ಬಡ ತಾಯಂದಿರಿಗೆ ಶಿಶು ವಿಹಾರ ತೆರೆಯಲು ಸ್ಥಳಾವಕಾಶ
ಪಾಲಿಕೆ ಆಡಳಿತದ ಪಾರದರ್ಶಕತೆಗೆ ಇ-ಆಡಳಿತಕ್ಕೆ ಒತ್ತು
ಆನ್‌ಲೈನ್‌ನಡಿ ನೀರಿನ ಬಿಲ್‌ ಪಾವತಿ, ದೂರು ಸೀÌಕಾರ ವ್ಯವಸ್ಥೆ
 ಆನ್‌ಲೈನ್‌ನಡಿ ಮನೆ ತೆರಿಗೆ ಪಾವತಿ, ಖಾತೆಗಳಿಗೆ ಸಂಬಂಧಿಸಿದ ಅರ್ಜಿ ಸೀÌಕಾರಕ್ಕೆ ಕ್ರಮ
ನಗರಾಡಳಿತದಲ್ಲಿ ಸಾರ್ವಜನಿಕರ ಎಲ್ಲಾ ಕೋರಿಕೆಗಳನ್ನು ಆನ್‌ಲೈನ್‌ಗಳ ಮೂಲಕವೇ ಮಾಡಲು ಕ್ರಮ
ಶಕ್ತಿ ನಗರದಲ್ಲಿ 10 ಎಕ್ರೆ ಜಾಗದಲ್ಲಿ ವಸತಿರಹಿತರಿಗೆ ನಿರ್ಮಿಸಲು ಉದ್ದೇಶಿಸಿರುವ ವಸತಿ ಸಮುಚ್ಚಯಕ್ಕೆ ಅರಣ್ಯ ಇಲಾಖೆ ಅನುಮತಿ ಪಡೆದು ಈ ಯೋಜನೆ ಅನುಷ್ಠಾನ
ತಗ್ಗು ಪ್ರದೇಶದಲ್ಲಿ ಬೃಹತ್‌ ತೋಡುಗಳಿಂದ ಮಳೆ ನೀರು ಹರಿದು ಪ್ರವಾಹ ಉಂಟಾಗುವುದು ತಪ್ಪಿಸಲು ತೋಡುಗಳ ನಿರ್ವಹಣೆ, ತೋಡುಗಳ ಒತ್ತುವರಿ ತೆರವು ಕಾರ್ಯ
ನಗರದ ಎಲ್ಲ ಕೆರೆ, ಬಾವಿಗಳ ಸಂರಕ್ಷಣೆ, ಅಂತರ್‌ ಜಲ ಸಮೃದ್ಧಿಗೊಳಿಸಲು ಕ್ರಮ. ಮಳೆ ನೀರು ಕೊಯ್ಲು ವ್ಯವಸ್ಥೆಗೆ ಹೆಚ್ಚಿನ ಆದ್ಯತೆ
ಮಂಗಳೂರು, ಸುರತ್ಕಲ್‌, ಕಾವೂರು ಪರಿಸರದಲ್ಲಿ ಸಾರ್ವಜನಿಕರಿಗೆ ಮಲ್ಟಿಜಿಮ್‌ ನಿರ್ಮಾಣ
 ಮುಂದಿನ 25 ವರ್ಷಗಳ ಅಭಿವೃದ್ಧಿ ದೃಷ್ಟಿಯಿಂದ ಕೊಣಾಜೆಯಿಂದ ಸುರತ್ಕಲ್‌ ಎನ್‌ಐಟಿಕೆ ವರೆಗೆ ಮೆಟ್ರೋ ರೈಲು ನಿರ್ಮಾಣಕ್ಕೆ ಕಾರ್ಯ ಯೋಜನೆಗೆ ಸರಕಾರದ ಮೇಲೆ ಒತ್ತಡ

ಸುದಿನ ಜನರ ಪ್ರಣಾಳಿಕೆಗೆ ಉಭಯ ಪಕ್ಷಗಳ ಸ್ಪಂದನೆ
ನಗರದ ಜನತೆಯ ಪ್ರಮುಖ ಆದ್ಯತೆ, ಮೂಲ ಸೌಲಭ್ಯಗಳ ಬೇಡಿಕೆ ಸಹಿತ ಸಾರ್ವಜನಿಕರು ಎದುರಿಸುತ್ತಿರುವ ಹಲವು ಸಮಸ್ಯೆ-ಸವಾಲುಗಳನ್ನು ಪಾಲಿಕೆ ಚುನಾವಣೆಗೆ ಕಣದಲ್ಲಿರುವ ಅಭ್ಯರ್ಥಿಗಳ ಮುಂದಿಡುವ ಸಲುವಾಗಿ “ಉದಯವಾಣಿ ಸುದಿನ’ ಜನರಿಗೆ ವೇದಿಕೆ ಒದಗಿಸಿಕೊಟ್ಟಿತ್ತು. “ಭವಿಷ್ಯದ ಮಂಗಳೂರಿಗೆ ಜನರ ಪ್ರಣಾಳಿಕೆ’ ಪರಿಕಲ್ಪನೆಯಡಿ ಜನರ ಆದ್ಯತೆಗಳನ್ನು ಆಹ್ವಾನಿಸಲಾಗಿತ್ತು. ಜನರ ಆದ್ಯತಾ ಪಟ್ಟಿಯನ್ನು ಪತ್ರಿಕೆಯು ಪಕ್ಷಗಳ ಮುಖಂಡರಿಗೆ ನೀಡಿ ಜನರ ಆದ್ಯತೆಗಳನ್ನು ಚುನಾವಣ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳುವಂತೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿರುವ ಬಿಜೆಪಿ, ಕಾಂಗ್ರೆಸ್‌ ಇದೀಗ ತಮ್ಮ ಪ್ರಣಾಳಿಕೆಯಲ್ಲಿ “ಸುದಿನ’ ಓದುಗರು ನೀಡಿರುವ ಪ್ರಣಾಳಿಕೆಗೆ ಆದ್ಯತೆ ನೀಡಿರುವುದು ಗಮನಾರ್ಹ.

ಬಿಜೆಪಿ ಪ್ರಣಾಳಿಕೆಯಲ್ಲಿ “ಜನರ ಪ್ರಣಾಳಿಕೆ’
 ವಾರ್ಡ್‌ ಸಮಿತಿಗಳ ರಚನೆ, ಮಳೆಕೊಯ್ಲು ಕಡ್ಡಾಯ
 ದಿನದ 24 ಗಂಟೆಯೂ ಕುಡಿಯುವ ನೀರು ಪೂರೈಕೆ
ಚರಂಡಿ ಹೂಳೆತ್ತಿ ಮಳೆಗಾಲದಲ್ಲಿ ಕೃತಕ ನೆರೆ ಬಾರದಂತೆ ಮುನ್ನೆಚ್ಚರಿಕೆ; ರಾಜಕಾಲುವೆಗಳ ದುರಸ್ತಿ
ನಗರದಲ್ಲಿ ಅಗತ್ಯವಿರುವ ಪ್ರದೇಶಗಳಲ್ಲಿ ಸಾರ್ವಜನಿಕ ಸುಲಭ ಶೌಚಾಲಯ ನಿರ್ಮಾಣ
ಡ್ರಗ್ಸ್‌ ಜಾಲದ ವಿರುದ್ಧ ವಿಶೇಷ ಕಾರ್ಯಾಚರಣೆ
ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಜನರ ಪ್ರಣಾಳಿಕೆ
ನಗರದಲ್ಲಿ ಒಳಚರಂಡಿ ವ್ಯವಸ್ಥೆ ಸುಧಾರಣೆಗೆ ಆದ್ಯತೆ
 ಪಾಲಿಕೆಯಲ್ಲಿ ಭ್ರಷ್ಟಾಚಾರ ತಡೆಗೆ ಆನ್‌ಲೈನ್‌ ವ್ಯವಸ್ಥೆ
 ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಕ್ಕೆ ಒತ್ತು
ವಾರ್ಡ್‌ ಸಮಿತಿ ಹಾಗೂ ಏರಿಯಾ ಸಮಿತಿ ರಚನೆ
 ಮಳೆಕೊಯ್ಲು ಅಳವಡಿಕೆ ಕಡ್ಡಾಯಕ್ಕೆ ಕ್ರಮ

Advertisement
Advertisement

Udayavani is now on Telegram. Click here to join our channel and stay updated with the latest news.

Next