Advertisement
ಇದರಂತೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಅಭೂತಪೂರ್ವ ಗೆಲುವು ಸಾಧಿಸ ಲಿರುವುದಾಗಿ ದ.ಕ. ಲೋಕಸಭಾ ಸದಸ್ಯ, ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಸಮಾವೇಶದ ಅಧ್ಯಕ್ಷತೆ ವಹಿಸಿದರು. ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಕುಂಟಾರು ರವೀಶ ತಂತ್ರಿ, ಬಿಜೆಪಿ ರಾಷ್ಟ್ರೀಯ ಸಮಿತಿ ಸದಸ್ಯ ಪಿ.ಕೆ. ಕೃಷ್ಣದಾಸ್, ಬಿಜೆಪಿ-ಎನ್‌ಡಿಎ ಘಟಕಗಳ ರಾಜ್ಯ ಮತ್ತು ಜಿಲ್ಲಾ ನಾಯಕರಾದ, ನ್ಯಾಯವಾದಿ ವಿ. ಬಾಲಕೃಷ್ಣ ಶೆಟ್ಟಿ, ಟಿ.ವಿ. ಬಾಬು, ಮಾನುವಲ್ ಟಿ. ಕಾಪನ್, ತಿರುವಲ್ಲೂರು ಮುರಳಿ, ಸುಧೀರ್ ಜಿ ಕೊಲ್ಲರ, ಜಿಜಿ ಥೋಮಸ್, ನ್ಯಾಯವಾದಿ ಹರಿಕುಮಾರ್, ಬೇಬಿ ಕೊಲ್ಲಂಕೊಂಬಿಲ್ ಭಾಗವಹಿಸಿ ಮಾತನಾಡಿದರು. ನಾಯಕ ರಾದ ವಿ. ಕೆ. ಸಜೀವನ್, ಪುಷ್ಪಾ ಅಮೆಕ್ಕಳ, ಎಂ. ರಾಮಪ್ಪ ಮಂಜೇಶ್ವರ ಎ. ವೇಲಾಯುಧನ್, ಪಿ. ರಮೇಶ್, ಗಂಗಾಧರ್, ಎಚ್. ಸತ್ಯಶಂಕರ ಭಟ್, ನ್ಯಾಯವಾದಿ ರಾಮ ಪಾಟಾಳಿ, ಟಿಪಿ. ಪಿ. ರಂಜಿತ್, ಎಂ.ಎನ್. ಗಿರಿ ಉಪಸ್ಥಿತ ರಿದ್ದರು. ಸವಿತಾ ಬಾಳಿಕೆ ಪ್ರಾರ್ಥಿಸಿದರು. ಮಂಜೇಶ್ವರ ಮಂಡಲ ಅಧ್ಯಕ್ಷ ಕೋಳಾರು ಸತೀಶ್ಚಂದ್ರ ಭಂಡಾರಿ ಸ್ವಾಗತಿಸಿದರು. ಪ್ರ. ಕಾರ್ಯದರ್ಶಿ ಮುರಳೀಧರ ಯಾದವ್ ವಂದಿಸಿದರು. ಪಕ್ಷದ ರಾಜ್ಯ ಸಮತಿ ಸದಸ್ಯ ಪಿ. ಸುರೇಶ್ ಕುಮಾರ್ ಶೆಟ್ಟಿ 1,001 ಮಂದಿಯನ್ನೊಳಗೊಂಡ ಚುನಾವಣ ಸಮಿತಿಯನ್ನು ಘೋಷಿಸಿದರು. ಅಧ್ಯಕ್ಷರಾಗಿ ಅರಿಬೈಲು ಗೋಪಾಲ ಶೆಟ್ಟಿ, ಪ್ರಧಾನ ಸಂಚಾಲಕ ರಾಗಿ ನ್ಯಾಯವಾದಿ ಶ್ರೀಕಾಂತ್‌ಮತ್ತು ಸಂಚಾಲಕ ರಾಗಿ ಕೋಳಾರು ಸತೀಶ್ಚಂದ್ರ ಭಂಡಾರಿ ಯವರನ್ನು ಆಯ್ಕೆ ಮಾಡಲಾಯಿತು.
Related Articles
ಕಣ್ಣೂರು ಲೋಕಸಭಾ ಮಾಜಿ ಸದಸ್ಯ,ಮಾಜಿ ಶಾಸಕ ಎ.ಪಿ. ಅಬ್ದುಲ್ಲ ಕುಟ್ಟಿ ಮಾತನಾಡಿ ಬಿಜೆಪಿ ಶಕ್ತಿ ಕೇಂದ್ರವಾದ ಮಂಜೇಶ್ವರ ಮಂಡಲದಲ್ಲಿ ಉಭಯ ರಂಗಗಳ ಸರಕಾರಗಳು ಅಭಿವೃದ್ಧಿಯನ್ನು ಅವಗಣಿಸಿದೆ. ದೇಶ ರಕ್ಷಣೆಗಾಗಿ ಬಿಜೆಪಿಗೆ ಮತ ನೀಡಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿರೆಂದರು. ತಾನು ಬಿಜೆಪಿಗೆ ಸೇರಿ ದೇಶಪ್ರೇಮದ ರಾಷ್ಟ್ರ ಪುತ್ರಅಬ್ದುಲ್ಲ ಕುಟ್ಟಿಯಾಗಿ ಹೆಮ್ಮೆಪಡುವೆನೆಂದರು.ಚುನಾವಣೆಯಲ್ಲಿ ಮತದಾರರು ಶ್ರೀ ಶಬರಿಮಲೆ ಅಯ್ಯಪ್ಪನನ್ನು ಧ್ಯಾನಿಸಿ ಎನ್‌ಡಿಎ ಗೆ ಮತ ನೀಡಿ ಅಭ್ಯರ್ಥಿಯವರನ್ನು ಚುನಾಯಿಸಿ ಎಂದರು.
Advertisement