ಮುಂಬೈ: ಬಂಡಾಯವೆದ್ದು ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಏಕನಾಥ್ ಶಿಂಧೆ ಅವರು ಮೊದಲ ಅಗ್ನಿ ಪರೀಕ್ಷೆ ಜಯಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂದಿನಿಂದ ಆರಂಭವಾದ ಎರಡು ದಿನಗಳ ವಿಶೇಷ ಅಧಿವೇಶನದಲ್ಲಿ ಸ್ಪೀಕರ್ ಚುನಾವಣೆ ನಡೆದಿದ್ದು, ಶಿಂಧೆ ಬಣದ ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೇಕರ್ ಅವರು ಆಯ್ಕೆಯಾಗಿದ್ದಾರೆ.
ಸೋಮವಾರ ವಿಶ್ವಾಸಮತ ಸಾಬೀತು ಪಡಿಸಬೇಕಾದ ಕಾರಣ ಇಂದು ಹೊಸ ಸ್ಪೀಕರ್ ಆಯ್ಕೆ ನಡೆಯಿತು. ಬಿಜೆಪಿಯಿಂದ ರಾಹುಲ್ ನಾರ್ವೇಕರ್ ಮತ್ತು ಶಿವಸೇನೆಯಿಂದ ರಾಜನ್ ಸಾಲ್ವಿ ಅವರು ಕಣದಲ್ಲಿದ್ದರು.
ರಾಜನ್ ಸಾಲ್ವಿಗೆ ಮತ ಹಾಕಬೇಕು ಎಂದು ಶಿವಸೇನೆಯು ಬಂಡಾಯ ಶಾಸಕರು ಸೇರಿದಂತೆ ತನ್ನ ಎಲ್ಲಾ ಶಾಸಕರಿಗೆ ವಿಪ್ ನೀಡಿತ್ತು. ಆದರೆ ಬಂಡಾಯ ಸೇನಾ ಶಾಸಕರು ವಿಪ್ ಮೀರಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ್ದಾರೆ. ಬಿಜೆಪಿ ಅಭ್ಯರ್ಥಿ ರಾಹುಲ್ ನಾರ್ವೇಕರ್ ಅವರು 164 ಮತ ಪಡೆದು ಜಯಿಸಿದ್ದಾರೆ.
ಇದನ್ನೂ ಓದಿ:‘ನನಗೆ ತೀರ್ಪು ಇಷ್ಟವಾಗದಿದ್ದರೂ…’: ಸುಪ್ರೀಂ ಆದೇಶದ ಬಗ್ಗೆ ಕಾನೂನು ಸಚಿವರ ಪ್ರತಿಕ್ರಿಯೆ
Related Articles
ವಿಶೇಷವೆಂದರೆ ರಾಹುಲ್ ನಾರ್ವೇಕರ್ ವಿರುದ್ಧ ಮತ ಹಾಕುವಾಗ ಸಮಾಜವಾದಿ ಪಾರ್ಟಿ ಮತ್ತು ಎಐಎಂಐಎಂ ಶಾಸಕರು ಮತದಾನದಿಂದ ದೂರ ಉಳಿದರು. ಹೀಗಾಗಿ ನಾರ್ವೇಕರ್ ವಿರುದ್ಧ 107 ಮತಗಳಷ್ಟೇ ಬಿತ್ತು.