Advertisement

ಬಿಜೆಪಿ ಅಭ್ಯರ್ಥಿ ಪಾಟೀಲ ಹಣವಂತ-ಗುಣವಂತ: ನೀಲಕಂಠ

12:26 PM Dec 08, 2021 | Team Udayavani |

 ಶಹಾಬಾದ: ಬಿಜೆಪಿ ಅಭ್ಯರ್ಥಿ ಬಿ.ಜಿ. ಪಾಟೀಲರು ಸ್ವಂತ ಬಲದಿಂದ ಹಣವಂತರಾಗಿದ್ದು, ಗುಣವಂತರು ಆಗಿದ್ದಾರೆ. ಆದ್ದರಿಂದ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಬಿಜೆಪಿ ಚಿತ್ತಾಪುರ ಮಂಡಲ ಅಧ್ಯಕ್ಷ ನೀಲಕಂಠ ಪಾಟೀಲ ಹೇಳಿದರು. ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಅನುದಾನ ಎತ್ತಿಹಾಕಿ ಬಿ.ಜಿ.ಪಾಟೀಲ ರಾಜಕೀಯಕ್ಕೆ ಬಂದಿಲ್ಲ. ಅವರು ಸ್ವಂತ ತೋಳ್ಬಲದ ಮೂಲಕ ಪರಿಶ್ರಮ ಪಟ್ಟು ಹಣವುಳ್ಳವರಾಗಿದ್ದಾರೆ. ಅಲ್ಲದೇ ಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿದ್ದಾರೆ ಹೊರತು ಹಣ ಮಾಡಲು ಬಂದಿಲ್ಲ ಎಂಬುದನ್ನು ಮತದಾರರು ಅರಿಯಬೇಕು ಎಂದರು. ಬಿ.ಜಿ. ಪಾಟೀಲ ಯಾವುದೇ ಗ್ರಾಪಂಗೆ ಭೇಟಿ ನೀಡಿಲ್ಲ.ಅನುದಾನ ಒದಗಿಸಿಲ್ಲ ಎನ್ನುವ ಮಾತನ್ನು ಕಾಂಗ್ರೆಸ್‌ ಮುಖಂಡರು ಹೇಳಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಪಕ್ಷದ ವಿಧಾನ ಪರಿಷತ್‌ ನ ಯಾವ ಸದಸ್ಯರು ಗ್ರಾಪಂಗೆ ಭೇಟಿ ನೀಡಿದ್ದಾರೆ. ಅಲ್ಲದೇ ಬಿ.ಜಿ. ಪಾಟೀಲ ಮೊದಲ ಬಾರಿಗೆ ವಿಧಾನ ಪರಿಷತ್‌ ಸದಸ್ಯರಾಗಿ ಚಿತ್ತಾಪುರ ತಾಲೂಕಿನ ಭಂಕಲಗಾ ಗ್ರಾಮದ ಸಿಸಿ ರಸ್ತೆ ನಿರ್ಮಾಣಕ್ಕೆ ಆರು ಲಕ್ಷ ರೂ. ದಿಗ್ಗಾಂವ ಸಿಸಿ ರಸ್ತೆಗೆ 3ಲಕ್ಷ ರೂ., ಅಲ್ಲೂರ(ಬಿ) ಸಿಸಿ ರಸ್ತೆಗೆ 3 ಲಕ್ಷ ರೂ., ಸಮುದಾಯ ಭವನಕ್ಕೆ 3ಲಕ್ಷ ರೂ., ಸಾತನೂರ ಸಿಸಿ ರಸ್ತೆಗೆ 3ಲಕ್ಷ ರೂ., ಭಂಕೂರ ಗ್ರಾಮದಲ್ಲಿ ಸಿಸಿ ರಸ್ತೆಗೆ 3ಲಕ್ಷ ರೂ., ಈಶ್ವರ ದೇವಸ್ಥಾನದ ಅಭಿವೃದ್ಧಿಗೆ 6ಲಕ್ಷ ರೂ. ಚರಂಡಿ ನಿರ್ಮಾಣಕ್ಕೆ 6ಲಕ್ಷ ರೂ., ಮುತ್ತಗಾ ಗ್ರಾಮದ ಸಿಸಿ ರಸ್ತೆ ನಿರ್ಮಾಣಕ್ಕೆ 3ಲಕ್ಷ ರೂ., ದಂಡಗುಂಡ ದೇವಸ್ಥಾನ ಅಭಿವೃದ್ಧಿಗೆ 15ಲಕ್ಷ ರೂ., ಪೇಠಸಿರೂರ ಗ್ರಾಮದ ಸಿಸಿ ರಸ್ತೆಗೆ 3ಲಕ್ಷ ರೂ, ತೊನಸನಹಳ್ಳಿ ಗ್ರಾಮದ ಬಸ್‌ ಸೆಲ್ಟರ್‌ ನಿರ್ಮಾಣಕ್ಕೆ 3ಲಕ್ಷ ರೂ., ಮುಗುಳನಾಗಾವ ಪಶು ಆಸ್ಪತ್ರೆಯ ಕಾಂಪೌಂಡ್‌ ವಾಲ್‌ಗೆ 3ಲಕ್ಷ ರೂ., ಮಾಡಬೂಳ ಗ್ರಾಮಲ್ಲಿ 3ಲಕ್ಷ ರೂ., ಗುಂಡುಗುರ್ತಿ ವಿದ್ಯುತ್‌ ದೀಪ ಹಾಗೂ ಶಾಲಾ ಕಾಂಪೌಂಡ್‌ಗೆ 3ಲಕ್ಷ ರೂ. ಅನುದಾನ ಮಂಜೂರು ಮಾಡಿದ್ದಾರೆ. ಅಲ್ಲದೇ ಇನ್ನು ಅನೇಕ ಅಭಿವೃದ್ಧಿಗಳಾಗಿವೆ ಎಂದರು. ಹೀಗೆ ಅನೇಕ ಗ್ರಾಮಗಳಿಗೆ ಅನುದಾನ ಒದಗಿಸುವ ಮೂಲಕ ಹಿಂದೆಂದೂ ವಿಧಾನ ಪರಿಷತ್‌ ಸದಸ್ಯರೊಬ್ಬರು ಇಷ್ಟೊಂದು ಅನುದಾನ ನೀಡಿದ ಉದಾಹರಣೆ ಗಳಿಲ್ಲ. ಆದರೆ ಗೊತ್ತಿಲ್ಲದೇ ಹಾರಿಕೆ ಹೇಳಿಕೆ ನೀಡುತ್ತಿರುವುದು ಅಸಮಂಜಸ ವಾಗಿದೆ. ರಾಷ್ಟ್ರದ ಅಭಿವೃದ್ಧಿಗೆ ಬಿಜೆಪಿ ಬೆಂಬಲಿಸಿ. ಬಿಜೆಯತ್ತ ಮತದಾರರ ಒಲವು ಇರುವುದರಿಂದ ಬಿ.ಜಿ.ಪಾಟೀಲ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next