Advertisement
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಬಿಜೆಪಿ ಈಗಾಗಲೇ ಸಮಾಜದ ಎಲ್ಲ ವರ್ಗದ ಜನರನ್ನು ತಲುಪುವುದರೊಂದಿಗೆ ವಿಶ್ವದ ನಂಬರ್ ಒನ್ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ದೇಶದಲ್ಲಿ ಸುಮಾರು 11 ಕೋಟಿ ಸಕ್ರಿಯ ಸದಸ್ಯರನ್ನು ಪಕ್ಷ ಹೊಂದಿದ್ದು, ಕರ್ನಾಟಕದಲ್ಲಿ 83 ಲಕ್ಷ ಹಾಗೂ ಕೊಡಗು ಜಿಲೆಯಲ್ಲಿ 45 ಸಾವಿರ ಸದಸ್ಯರು ಕಳೆದ ಬಾರಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
Related Articles
ಪ್ರಕೃತಿ ವಿಕೋಪ ಸಂತ್ರಸ್ತರ ನಿರ್ವಹಣೆ ಸೇರಿದಂತೆ ವಿವಿಧ ವಿಚಾರಗಳ ವೈಫಲ್ಯದ ಬಗ್ಗೆ ಬಿಜೆಪಿ ಹೋರಾಟದ ಎಚ್ಚರಿಕೆ ನೀಡಿದ ಬಳಿಕ ಆಡಳಿತ ವ್ಯವಸ್ಥೆಯಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದೆ. ಆದರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿಲ್ಲ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಮತ್ತಷ್ಟು ಚುರುಕು ಗೊಳ್ಳದಿದ್ದಲ್ಲಿ ಹೋರಾಟ ಅನಿವಾ ರ್ಯವಾಗಲಿದೆ ಎಂದರು.
Advertisement
ಕೊಡಗಿನ ಜ್ವಲಂತ ಸಮ ಸ್ಯೆಗಳ ಬಗ್ಗೆ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರೊಂದಿಗೆ ಜಿಲ್ಲಾ ಬಿಜೆಪಿ ಚರ್ಚಿಸಿದೆ. ಜಿಲ್ಲೆ ಹಾಗೂ ರಾಜ್ಯದ ಸಂಸದರ ವಿಶೇಷ ಸಭೆ ನಡೆಸಿ ಆಯಾ ಪ್ರದೇಶಗಳ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ಸದಾನಂದಗೌಡರಿಂದ ದೊರೆತ್ತಿದೆ ಎಂದು ಭಾರತೀಶ್ ಹೇಳಿದರು. ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಶಾಂತೆಯಂಡ ರವಿ ಕುಶಾಲಪ್ಪ, ನಾಪಂಡ ರವಿ ಕಾಳಪ್ಪ, ರಾಬಿನ್ ದೇವಯ್ಯ, ವಿ.ಕೆ.ಲೋಕೇಶ್ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಕಾಳಚಂಡ ಅಪ್ಪಣ್ಣ ಉಪಸ್ಥಿತರಿದ್ದರು.
ಸಾಥ್ ಆಯೇ-ದೇಶ್ ಬನಾಯೇಈ ಬಾರಿ ಸಾಥ್ ಆಯೇ-ದೇಶ್ ಬನಾಯೇ ಎಂಬ ಘೋಷ ವಾಕ್ಯದೊಂದಿಗೆ ಸದಸ್ಯತ್ವ ಅಭಿಯಾನ ನಡೆಯಲಿದ್ದು, ರಾಜಕೀಯದ ಮೂಲಕ ದೇಶ ಸೇವೆ ಮಾಡಲಿಚ್ಛಿಸುವ ಯುವಜನರು, ಎನ್‌ಜಿಒಗಳು, ಎಲ್ಲ ವರ್ಗದ ಜನರು ಈ ಸದಸ್ಯತ್ವ ಅಭಿಯಾನದಲ್ಲಿ ಭಾಗಿಯಾಗಬಹುದಾಗಿದೆ ಎಂದು ಭಾರತೀಶ್ ತಿಳಿಸಿದರು.