ಬೆಂಗಳೂರು: ರಾಜ್ಯ ಸರಕಾರದ ಟಿಪ್ಪು ಜಯಂತಿ ವಿರುದ್ಧ ಸಮರ ಸಾರಿರುವ ರಾಜ್ಯ ಬಿಜೆಪಿ, ನ. 10ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದೆ.
ಈ ಸಂಬಂಧ ಈಗಾಗಲೇ ಪಕ್ಷದ ಎಲ್ಲ ಸಂಸದರಿಗೆ, ಶಾಸಕರಿಗೆ ಮತ್ತು ಮುಖಂಡರಿಗೆ ಮಾಹಿತಿ ತಲು
ಪಿಸಲಾಗಿದೆ. ಸರಕಾರದ ವತಿಯಿಂದ ನಡೆಯುವ ಟಿಪ್ಪು ಜಯಂತಿಯಲ್ಲಿ ಯಾರೊಬ್ಬರೂ ಪಾಲ್ಗೊಳ್ಳ ಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆ ಬಗ್ಗೆ ಘೋಷಣೆ ಮಾಡಿದ ದಿನದಿಂದಲೇ ವಿರೋಧಿಸಿ ಕೊಂಡು ಬಂದಿರುವ ಬಿಜೆಪಿ, ಕಳೆದ ವರ್ಷ ಈ ಹೋರಾಟವನ್ನು ತೀವ್ರಗೊಳಿಸಿತ್ತು. ಮುಂದಿನ ವರ್ಷ ರಾಜ್ಯ ವಿಧಾನಸಭೆ ಚುನಾವಣೆ ಇರುವುದರಿಂದ ಈ ವರ್ಷ ಇನ್ನಷ್ಟು ಪರಿಣಾಮಕಾರಿಯಾಗಿ ವಿರೋಧಿಸುವ ಬಗ್ಗೆ ನಿರ್ಧರಿಸಿದೆ.
ಈಗಾಗಲೇ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸಹಿತ ಬಿಜೆಪಿಯ ಕೆಲವು ಸಂಸದರು, ಶಾಸಕರು ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆ ಸರಕಾರಕ್ಕೆ ಮನವಿ ಮಾಡಿ ದ್ದಾರೆ. ಇನ್ನು ಕೆಲವರು ತಾವು ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಹೇಳಿ ದ್ದಾರೆ. ಇದರ ಬೆನ್ನಲ್ಲೇ ಟಿಪ್ಪು ಜಯಂತಿಯಲ್ಲಿ ಪಾಲ್ಗೊಳ್ಳದೇ ಇರಲು ಪಕ್ಷದ ರಾಜ್ಯ ಘಟಕವೇ ತೀರ್ಮಾನಿಸಿ ಈ ಕುರಿತು ಪಕ್ಷದ ಎಲ್ಲ ಸಂಸದರು, ಶಾಸಕರು ಸಹಿತ ಜನಪ್ರತಿನಿಧಿಗಳು ಹಾಗೂ ಮುಖಂಡರಿಗೆ ಸೂಚನೆ ನೀಡಿದೆ.
ಅನಂತ ಕುಮಾರ್ ಹೆಗಡೆ ವಿರುದ್ಧ ಕೇಸ್?
ಕೋಲ್ಕತಾ: ಟಿಪ್ಪು ಸುಲ್ತಾನ್ ಬಗ್ಗೆ ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಟಿಪ್ಪು ವಂಶಸ್ಥರು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಟಿಪ್ಪುವಿನ ಮಗ ಮುನೀರುದ್ದೀನ್ ಅನಂತರದ 6ನೇ ತಲೆಮಾರಿನ ವರೆಂದು ಪರಿಗಣಿಸಲ್ಪಟ್ಟಿರುವ ಬಖೀ¤ಯಾರ್ ಅಲಿ, “ಸಚಿವ ಹೆಗಡೆ ಹೇಳಿಕೆ ಆಧಾರರಹಿತ ಹಾಗೂ ನಾಚಿಕೆಗೇಡಿನದ್ದು. ರಾಜಕೀಯ ಲಾಭಕ್ಕಾಗಿ ಇಂಥ ಹೇಳಿಕೆ ನೀಡಿರುವ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ನಮ್ಮ ಕುಟುಂಬದ ವಕೀಲರ ಬಳಿ ಮಾತುಕತೆ ನಡೆಸಿದ್ದೇವೆ’ ಎಂದು ತಿಳಿಸಿದ್ದಾರೆ.