ಅಗರ್ತಲಾ : ತ್ರಿಪುರಾ ಉಪಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನಗಳ ಪೈಕಿ ಮೂರರಲ್ಲಿ ಗೆಲುವು ಸಾಧಿಸಿದ್ದು, ಮುಖ್ಯಮಂತ್ರಿ ಮಾಣಿಕ್ ಸಹಾ ಅವರು ಟೌನ್ ಬರ್ಡೋವಾಲಿ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ 6,104 ಮತಗಳ ಅಂತರದಿಂದ ಗೆದ್ದಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪ್ರತಿಷ್ಠಿತ ಅಗರ್ತಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುದೀಪ್ ರಾಯ್ ಬರ್ಮನ್ 3,163 ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಕ್ರಮವಾಗಿ ಟೌನ್ ಬೋರ್ಡೋವಾಲಿ, ಜುಬಾರಾಜ್‌ನಗರ ಮತ್ತು ಸುರ್ಮಾ ಸ್ಥಾನಗಳನ್ನು ಗೆದ್ದಿದೆ. ಸಿಎಂ ಮಾಣಿಕ್ ಸಹಾ ಗೆಲುವಿನ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.
ಕಳೆದ ತಿಂಗಳು ಅಂದಿನ ಸಿಎಂ ಬಿಪ್ಲಬ್ ದೇಬ್ ಅವರ ಹಠಾತ್ ರಾಜೀನಾಮೆ ನಂತರ ರಾಜ್ಯಸಭಾ ಸಂಸದ ಮಾಣಿಕ್ ಸಹಾ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ನೇಮಿಸಲಾಗಿತ್ತು. ಮುಖ್ಯಮಂತ್ರಿಯಾಗಿ ಮುಂದುವರಿಯಲು ಈ ಉಪಚುನಾವಣೆಯಲ್ಲಿ ಗೆಲ್ಲಲೇಬೇಕಿತ್ತು.