ಬಜಪೆ: ಇಸವಿ 2014ರ ಜ.2 ರಂದು ಬೆಳಿಗ್ಗೆ 10.30 ಗಂಟೆಯಿಂದ 13.20 ಗಂಟೆ ಮಧ್ಯಾವಧಿಯಲ್ಲಿ ಪಡುಪೆರಾರ ಗ್ರಾಮದ ಅಂಬಿಕಾ ನಗರ ಎಂಬಲ್ಲಿ ವಾಸವಾಗಿರುವ ಪದ್ಮನಾಭ ಪೂಜಾರಿ ಎಂಬವರ ಮನೆಯ ಹಿಂದಿನ ಬಾಗಿಲು ಮುರಿದು ಬೆಡ್ ರೂಂ ನಲ್ಲಿದ್ದ ಕಪಾಟಿನ ಬಾಗಿಲನ್ನು ತೆರೆದು ಲಾಕರ್ ನಲ್ಲಿದ್ದ ಸುಮಾರು 32 ಗ್ರಾಂ ತೂಕದ ಬಂಗಾರದ ಕರಿಮಾಣಿ ಸರ, ಸುಮಾರು 3.5 ಪವನ್ ತೂಕದ ಹವಳದ ಸರ, ಸುಮಾರು 2 ಪವನ್ ತೂಕದ ಮುತ್ತಿನ ಸರ, ಸುಮಾರು 1.5 ಪವನ್ ತೂಕದ ಸಾದಾ ಚೈನ್, ಲಕ್ಷ್ಮಿ ಪೆಂಡೆಂಟ್ ಇರುವ ಹವಳದ ಸಣ್ಣ ಚೈನ್ – 1, ಸುಮಾರು 1.5 ಪವನ್ ತೂಕ ಮುತ್ತಿನ ಬೆಂಡೋಲೆಗಳನ್ನು ಒಟ್ಟು ಸುಮಾರು 100 ಗ್ರಾಂ ತೂಕದ 2 ಲಕ್ಷ ರೂ ಬೆಲೆಯ ಚಿನ್ನಾಭರಣಗಳು ಕಳವು ಮಾಡಿರುವ ಪ್ರಕರಣದಲ್ಲಿ ಆಪಾಧಿತರಾದ ಮುನಿಯಮ್ಮ, ಸರಸು ಯಾನೆ ಸರಸ್ವತಿ, ಲಕ್ಷ್ಮಿ, ಗುಲಾಬಿ ಮತ್ತು ಮಂಜ ಎಂಬವರನ್ನು ಹಾಗೂ ಸೊತ್ತುಗಳನ್ನು ದಿ2014ರ ಜ.10 ರಂದು ಬಜಪೆ ಪೊಲೀಸರು ಪತ್ತೆ ಮಾಡಿರುತ್ತಾರೆ.
ಈ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು 2014 ನೇ ಇಸವಿಯಿಂದ ನ್ಯಾಯಾಲಯದ ಮುಂದೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಪಚ್ಚನಾಡಿ ದೇವಿನಗರದ ಮಂಜ (37)ಎಂಬವರನ್ನು ಮೇ .5ರಂದು (ಸೋಮವಾರ) ಉಡುಪಿ ಜಿಲ್ಲೆಯ ಕಾಪು ಎಂಬಲ್ಲಿಂದ ಪತ್ತೆ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿರುತ್ತದೆ.
ತಲೆಮರೆಸಿಕೊಂಡಿದ್ದ ಈ ಆರೋಪಿಯನ್ನು ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಕುಲದೀಪ್ ಕುಮಾರ್ ಆರ್. ಜೈನ್ ರವರ ಮಾರ್ಗದರ್ಶನದಂತೆ, ಡಿಸಿಪಿ ಯವರಾದ ಅಂಶುಕುಮಾರ್ (ಕಾಮತ್ತು ಸು) ಮತ್ತು ದಿನೇಶ್ ಕುಮಾರ್ (ಅ ಮತ್ತು ಸಂ) ರವರ ನಿರ್ದೇಶನದಂತೆ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮನೋಜ್ ಕುಮಾರ್ ನಾಯಕ್ ರವರ ನೇತೃತ್ವದಲ್ಲಿ ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್ ರವರು ಸಿಬ್ಬಂದಿಯವರಾದ ಪಿ.ಎಸ್.ಐ ಪೂವಪ್ಪ, ಗುರು ಕಾಂತಿ, ಎ.ಎಸ್.ಐ ರಾಮಣ್ಣ, ರೋಹಿತ್, ಜಗದೀಶ್, ಸುಜನ್ ಮತ್ತು ಇತರರ ಜತೆ ಪತ್ತೆ ಮಾಡಿರುತ್ತಾರೆ.