Advertisement

ಕೇರಳದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ‘ಮೆಟ್ರೊ ಮ್ಯಾನ್’..!

07:09 PM Mar 04, 2021 | Team Udayavani |

ಕೇರಳ : ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ‘ಮೆಟ್ರೊ ಮ್ಯಾನ್’ ಎಂದು ಖ್ಯಾತಿ ಪಡೆದಿರುವ ಇ.ಶ್ರೀಧರನ್ ಅವರನ್ನು ಭಾರತೀಯ ಜನತಾ ಪಕ್ಷ ಇಂದು ಘೋಷಣೆ ಮಾಡಿದೆ.

Advertisement

ಶ್ರೀಧರನ್ ಫೆಬ್ರವರಿಯಲ್ಲಿ ತಮ್ಮ ಅಭಿಮಾನಿಗಳ ನಡುವೆ ಬಿಜೆಪಿಗೆ ಸೇರಿದ್ದರು ಮತ್ತು ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದರು. ಹೀಗಾಗಿ ಬಿಜೆಪಿ ಹೈಕಮಾಂಡ್ ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.

ಇನ್ನು, ಈ ಹಿಂದೆ ಶ್ರೀದರ್, ಬಿಜೆಪಿ ಅವಕಾಶ ಮಾಡಿ ಕೊಟ್ಟರೆ, ಮುಖ್ಯಮಂತ್ರಿಯಾಗಲು ಸಿದ್ಧ ಎಂದು ಹೇಳಿಕೊಂಡಿದ್ದರು.

ಓದಿ:  ತಮಿಳರ ಮತಗಳು ಮಾರಾಟಕ್ಕಿಲ್ಲ : ಕಮಲ್ ಹಾಸನ್

Advertisement

Udayavani is now on Telegram. Click here to join our channel and stay updated with the latest news.

Next