Advertisement

ರಾಮನಗರ ಘಟನೆಗೆ ಕಮಲ ಪಡೆ ಆಕ್ರೋಶ-ಪ್ರತಿಭಟನೆ

08:45 PM Jan 05, 2022 | Team Udayavani |

ಗದಗ: ರಾಮನಗರದಲ್ಲಿ ನಡೆದ ಘಟನೆ ಖಂಡಿಸಿ ಮಂಗಳವಾರ ನಗರದ ಮಹಾತ್ಮಗಾಂಧಿ  ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಜಿಲ್ಲಾ ಕಾರ್ಯಕರ್ತರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರ ವಿರುದ್ಧ  ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

Advertisement

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ರಾಮನಗರಕ್ಕೆ ಸೀಮಿತವಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್‌ ಅವರ ಗೂಂಡಾ ವರ್ತನೆ ಇದೀಗ ರಾಜ್ಯಾದ್ಯಂತ ವ್ಯಾಪಿಸುತ್ತಿದೆ. ಡಿ.ಕೆ.ಶಿವಕುಮಾರ್‌ ಅವರು ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾದ ಬಳಿಕ ರಾಮನಗರದ ಗೂಂಡಾ ಸಂಸ್ಕೃತಿಯನ್ನು ನಾಡಿನಾದ್ಯಂತ ಬೆಳೆಸುವ ಪ್ರಯತ್ನ ನಡೆಸಿದ್ದಾರೆ.

ಅವರ ಗೂಂಡಾ ಸಂಸ್ಕೃತಿಗೆ ರಾಮಗರ ಘಟನೆಯೇ ಸಾಕ್ಷಿ ಎಂದು ಹೇಳಿದರು. ಸಮಾಜದ ದಾರ್ಶನಿಕರಾದ ಸಂವಿಧಾನ ಶಿಲ್ಪಿ ಡಾ|ಬಿ.ಆರ್‌.ಅಂಬೇಡ್ಕರ್‌ ಹಾಗೂ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವರ ಭಾಷಣಕ್ಕೆ ಅಡ್ಡಿಪಡಿಸಿದ್ದಲ್ಲದೇ, ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಸಚಿವರೊಂದಿಗೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿರುವುದು ಅವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಕಾನೂನು ಮತ್ತು ಸಚಿವರ ಬಗ್ಗೆ ಅವರಲ್ಲಿ ಎಷ್ಟ ಮಟ್ಟಿಗೆ ಗೌರವ ಭಾವನೆ ಇದೆ ಎಂಬುದು ಸಾಬೀತುಪಡಿಸಿದ್ದಾರೆ ಎಂದು ಹರಿಹಾಯ್ದರು.

ಪ್ರಧಾನಿ ಮೋದಿ ಪ್ರಭಾವ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ಜನಪರ ಕಾರ್ಯಕ್ರಮಗಳಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಿತಿ ಮುಳುಗುವ ಹಡಗಿನಂತಾಗಿದೆ. ಕಾಂಗ್ರೆಸ್‌ ಪಕ್ಷದ ಭ್ರಷ್ಟಾಚಾರ, ಗೂಂಡಾ ಸಂಸ್ಕೃತಿ ಪ್ರತಿಯೊಬ್ಬರಿಗೂ ತಿಳಿದಿದೆ. ಎಲ್ಲ ಚುನಾವಣೆಗಳಲ್ಲಿ ಮತದಾರರು ಕಾಂಗ್ರೆಸ್‌ ಪಕ್ಷವನ್ನು ತಿರಸ್ಕರಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ಇದರ ಮುನ್ಸೂಚನೆಯಿಂದ ವಿಚಲಿತರಾಗಿರುವ ಕಾಂಗ್ರೆಸ್‌ ನಾಯಕರು, ಇಂಥ ದುಸ್ಸಾಹಸಕ್ಕೆ ಕೈಹಾಕುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. ನಗರಾಭಿವೃದ್ಧಿ ಪ್ರಾ ಧಿಕಾರದ ಅಧ್ಯಕ್ಷ ಸಂಗಮೇಶ ದುಂದೂರ ಮಾತನಾಡಿ, ಡಿ.ಕೆ.ಸಹೋದರರ ಉದ್ಧಟತನಕ್ಕೆ ಕಡಿವಾಣ ಹಾಕಬೇಕಾದ ಕಾಂಗ್ರೆಸ್‌ ಹೈಕಮಾಂಡ ಪರೋಕ್ಷವಾಗಿ ಭ್ರಷ್ಟ ಡಿ.ಕೆ. ಶಿವಕುಮಾರರನ್ನು ಕಾಂಗ್ರೆಸ್‌ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಡಿಕೆಶಿ ಮುಖಾಂತರ ಗೂಂಡಾಗಿರಿ ಸಂಸ್ಕೃತಿಯನ್ನು ಇಡೀ ರಾಜ್ಯಾದಂತ ಹಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಇಂತಹ ಗೂಂಡಾಗಿರಿ ಸಂಸ್ಕೃತಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸಮರ್ಥಕವಾಗಿ ಉತ್ತರ ಕೊಡಲು ತಯಾರಿದ್ದಾರೆ ಎಂದು ಎಚ್ಚರಿಸಿದರು. ಪಕ್ಷದ ಹಿರಿಯ ನಾಯಕ ಎಂ.ಎಸ್‌. ಕರೀಗೌಡ್ರ ಮಾತನಾಡಿ, ಗೂಂಡಾಗಿರಿ ಸಂಸ್ಕೃತಿ ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಈ ಕೂಡಲೇ ಗೂಂಡಾಗಿರಿ ಹಿನ್ನೆಲೆ ಹೊಂದಿರುವ ಕಾಂಗ್ರೆಸ್‌ ನಾಯಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

Advertisement

ಈ ಸಂದರ್ಭದಲ್ಲಿ ದ್ರಾಕ್ಷರಸ ನಿಗಮದ ಅಧ್ಯಕ್ಷ ಕಾಂತೀಲಾಲ ಬನ್ಸಾಲಿ, ಪಕ್ಷದ ಹಿರಿಯರಾದ ಪ್ರೇಮನಾಥ ಬಣ್ಣದ, ಮಾಂತೇಶ ನಾಲ್ವಾಡ, ವಿಜಯಕುಮಾರ ಗಡ್ಡಿ, ಸುಧೀರ ಕಾಟಿಗರ, ಶಿವು ಹಿರೇಮನಿ ಪಾಟೀಲ, ಮಂಜು ತಳವಾರ, ವಿಜಯಲಕ್ಷಿ ¾à ಮಾನ್ವಿ, ಪ್ರಶಾಂತ ನಾಯ್ಕರ, ಮಾಧುಸಾ ಮೇರವಾಡೆ, ವಿಜಯಕುಮಾರ ಗೋಣಿ, ಅರವಿಂದ ಕೆಲೂರ, ಶ್ರೀನಿವಾಸ ಹುಬ್ಬಳ್ಳಿ, ಮಾಂತೇಶ ಮಡಿವಾಳರ, ಇರ್ಷಾದ ಮಾನ್ವಿ, ನಿಂಗಪ್ಪ ಮಣ್ಣೂರ, ಬದ್ರೇಶ ಕುಸ್ಲಾಪೂರ ಬಾಬು ಯಲಿಗಾರ, ಗೊಪಾಲ ಗಡ್ಡದವರ, ನಗರಸಭೆ ನೂತನ ಸದಸ್ಯರಾದ ಉಷಾ ದಾಸರ, ಪ್ರಕಾಶ ಅಂಗಡಿ, ಚಂದ್ರು ತಡಸದ, ಮುತ್ತು ಮುಶಿಗೇರಿ, ವಿಜಯಕುಮಾರ ಗಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next