ಚಿತ್ತಾಪುರ: ಸಂಸದ ಡಿ.ಕೆ ಸುರೇಶ ಹಾಗೂ ಎಂಎಲ್‌ಸಿ ಎಸ್.ರವಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ರಾಮನಗರ ಜಿಲ್ಲೆಯ ಸರ್ಕಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಸಂಸದ ಡಿಕೆ ಸುರೇಶ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ರವಿ ಅವರು ಗುಂಡಾವರ್ತನೆ ತೋರಿ ಐಟಿ-ಬಿಟಿ ಸಚಿವ ಅಶ್ವಥನಾರಾಯಣ ಅವರ ಜೊತೆಯಲ್ಲಿ ಅಸಭ್ಯವಾಗಿ ವರ್ತನೆ ಮಾಡಿದ್ದಾರೆ. ಅವರಿಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರಿಬ್ಬರಿಗೆ ಸ್ಥಾನದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಲಾಡ್ಜಿಂಗ್ ಕ್ರಾಸ್‌ನಿಂದ ತಹಶೀಲ್ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ಬಿಜೆಪಿ ತಾಲೂಕು ಅಧ್ಯಕ್ಷ ನೀಲಕಂಠರಾವ್ ಪಾಟೀಲ್, ಮುಖಂಡರಾದ ವಿಠ್ಠಲ್ ನಾಯಕ, ಗೋಪಾಲ್ ರಾಠೊಡ, ನಾಗರಾಜ ಭಂಕಲಗಿ, ನಾಗರಾಜ ಹೂಗಾರ, ಶಿವಕುಮಾರ ಸುಣಗಾರ, ಪ್ರಸಾದ ಆವಂಟಿ, ಮಲ್ಲಿಕಾರ್ಜುನ ಪೂಜಾರಿ, ಬಾಲಾಜಿ ಬುರಬುರೆ, ನಾಗುಬಾಯಿ ಜಿತುರೆ, ಪ್ರಭು ಗಂಗಾಣಿ, ರಮೇಶ, ಶ್ಯಾಮ ಮೇಧಾ, ಅಶ್ವಥ ರಾಠೊಡ ಇತರರು ಇದ್ದರು.