ಗಾಜಿಯಾಬಾದ್ : ಅಪಹರಣಕ್ಕೊಳಗಾದ ಬಾಲಕನೊಬ್ಬ ಅಪಹರಣಕಾರನ ಕೈಗೆ ಕಚ್ಚಿ ವ್ಯಾನ್ ನಿಂದ ಜಿಗಿದು ತಪ್ಪಿಸಿಕೊಂಡ ಘಟನೆ ಗಾಜಿಯಾಬಾದ್ನಲ್ಲಿ ಶನಿವಾರ ನಡೆದಿದೆ.
ಬಾಲಕ ಸಿನಿಮಾ ಶೈಲಿಯಲ್ಲಿ ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದು ಗಾಜಿಯಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ವಿವರ: ಗಾಜಿಯಾಬಾದ್ನ ಮುರಾದ್ನಗರದ ನಿವಾಸಿ ಆರವ್ ರಾಠಿ ಶನಿವಾರ ಸಂಜೆ 6 ಗಂಟೆ ಸುಮಾರಿಗೆ ತರಕಾರಿ ಖರೀದಿಸಲು ಪೇಟೆಗೆ ಹೋಗಿದ್ದಾನೆ ತರಕಾರಿ ತೆಗೆದುಕೊಂಡು ಮನೆಗೆ ಹಿಂತಿರುವ ವೇಳೆ ನಾಲ್ವರ ತಂಡ ವ್ಯಾನ್ ನಲ್ಲಿ ಬಂದು ಬಾಲಕನಿಗೆ ಚಾಕು ತೋರಿಸಿ ಅಪಹರಿಸಿದ್ದಾರೆ, ತಪ್ಪಿಸಿಕೊಳ್ಳಲು ಯತ್ನಿಸಿದರೂ ನಾಲ್ವರಿದ್ದ ಪರಿಣಾಮ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಅಪಹರಣಕಾರರು ಸ್ವಲ್ಪ ಮುಂದೆ ಹೋದ ವೇಳೆ ವಾಹನವನ್ನು ರಸ್ತೆ ಬದಿ ನಿಲ್ಲಿಸಿ ಬಾಲಕನ ಮೈಯಲ್ಲಿದ್ದ ಬಟ್ಟೆ ಕಳಚಿ ವಿವಸ್ತ್ರಗೊಳಿಸಿದ್ದಾರೆ ಮತ್ತು ಆತನ ಸೈಕಲ್ ಅನ್ನು ರಸ್ತೆ ಬದಿಗೆ ಎಸೆದಿದ್ದಾರೆ, ಈ ವೇಳೆ ಬಾಲಕ ಸಮಯ ಪ್ರಜ್ಞೆ ಮೆರೆದು ಅಪಹರಣಕಾರನ ಕೈಗೆ ಕಚ್ಚಿ ವ್ಯಾನ್ ನಿಂದ ಜಿಗಿದು ಅಲ್ಲಿಂದ ತಪ್ಪಿಸಿಕೊಂಡು ಸುಮಾರು ಎರಡು ಕಿಲೋಮೀಟರ್ ದೊರದವರೆಗೆ ಬೆತ್ತಲೆಯಾಗಿ ಓಡಿ ಬಂದು ಮನೆ ಸೇರಿದ್ದಾನೆ, ಬಳಿಕ ಮನೆಯವರಲ್ಲಿ ವಿಚಾರ ತಿಳಿಸಿದ್ದಾನೆ, ಕೂಡಲೇ ಬಾಲಕನ ತಂದೆ ಗಾಜಿಯಾಬಾದ್ ಠಾಣೆಗೆ ಹೋಗಿ ದೂರು ನೀಡಿದರೂ ಪೊಲೀಸರು, ದೂರು ದಾಖಲಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.
ಬಳಿಕ ಸಾರ್ವಜನಿಕರು ಸೇರಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದು ಬಳಿಕ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
Related Articles
ಕಳೆದ ವಾರ, ಗಾಜಿಯಾಬಾದ್ನ ನಂದಗ್ರಾಮ್ನಲ್ಲಿ ಬಾಲಕಿಯ ಅಪಹರಣವಾಗಿದ್ದು ಬಳಿಕ ಆಕೆಯ ಶವ ಬುಲಂದ್ಶಹರ್ನಲ್ಲಿ ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಇನ್ನೊಂದು ಘಟನೆ ನಡೆದಿರುವುದು ಜನರ ನಿದ್ದೆಗೆಡಿಸಿದೆ.
ಇದನ್ನೂ ಓದಿ: ವಿಡಿಯೋ…: 9 ಗಂಟೆ ತಡವಾಗಿ ಬಂದ ರೈಲನ್ನು ಪ್ರಯಾಣಿಕರು ಬರಮಾಡಿಕೊಂಡದ್ದು ಹೀಗೆ