Advertisement

ಇದು ಅಂತಿಂಥಾ ಶ್ವಾನವಲ್ಲ… ಈ ಶ್ವಾನ ಗಿನ್ನಿಸ್‌ ರೆಕಾರ್ಡ್‌ ಹೋಲ್ಡರ್‌…!

02:48 PM Mar 02, 2023 | Team Udayavani |

ವಾಷಿಂಗ್ಟನ್‌: ಇದು ಅಂತಿಂಥಾ ಶ್ವಾನವಲ್ಲ… ಈ ಶ್ವಾನ ಗಿನ್ನಿಸ್‌ ರೆಕಾರ್ಡ್‌ ಹೋಲ್ಡರ್‌…

Advertisement

ಹೌದು. ಅಮೇರಿಕದ ಅನಿಝೋನಾದ ಟಸ್ಕನ್‌ ಸಿಟಿಯಲ್ಲಿರುವ ಇಂಗ್ಲಿಷ್‌ ಸೆಟ್ಟರ್‌ ತಳಿಯ ಈ ಶ್ವಾನ ನೂತನ ದಾಖಲೆ ಬರೆದು ಗಿನ್ನಿಸ್‌ ರೆಕಾರ್ಡ್‌ ಪಡೆದುಕೊಂಡಿದೆ.

ಮೂರು ವರ್ಷ ಪ್ರಾಯದ ʻಬಿಸ್ಬೀʼ ಎಂಬ ಹೆಸರಿನ ಈ ಇಂಗ್ಲಿಷ್‌ ಸೆಟ್ಟರ್‌ ತಳಿಯ ಶ್ವಾನ ತನ್ನ ಉದ್ದನೆಯ ನಾಲಗೆಯಿಂದ ಗಿನ್ನಿಸ್‌ ರೆಕಾರ್ಡ್‌ ಪಟ್ಟಿಗೆ ಸೇರ್ಪಡೆಗೊಂಡಿದೆ.

ಬಿಸ್ಬೀಯು ಸುಮಾರು 3.74 ಇಂಚುಗಳಷ್ಟು (9.49 ಸೆಂ.ಮೀ) ಉದ್ದದ ನಾಲಗೆ ಹೊಂದಿದ್ದು, ಈ ಮೂಲಕ ಜಗತ್ತಿನಲ್ಲೇ ಅತಿ ಉದ್ದದ ನಾಲಗೆ ಹೊಂದಿರುವ ಶ್ವಾನ ಎಂಬ ಖ್ಯಾತಿಗೂ ಪಾತ್ರವಾಗಿದೆ.

Advertisement

ಈ  ಬಗ್ಗೆ ಟ್ಟಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಗಿನ್ನಿಸ್‌ ಸಂಸ್ಥೆ, ʻಬಿಸ್ಬೀ ದೊಡ್ಡ ಹೃದಯವನ್ನೂ ಅದಕ್ಕಿಂತ ದೊಡ್ಡನಾಲಗೆಯನ್ನು ಹೊಂದಿದೆʼ ಎಂದು ಬರೆದುಕೊಂಡಿದೆ.

ಈ ಶ್ವಾನವನ್ನು ಜೇಯ್‌ ಮತ್ತು ಎರಿಕಾ ದಂಪತಿ ದತ್ತಿ ಹರಾಜಿನಲ್ಲಿ ಪಡೆದುಕೊಂಡಿದ್ದರು.

 

ಇದನ್ನೂ ಓದಿ: ಭಾರತದ ಕೋವಿಡ್‌ ನಿಯಂತ್ರಣ ಕ್ರಮಗಳಿಗೆ ಬಿಲ್‌ಗೇಟ್ಸ್‌ ಬಹುಪರಾಕ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next