Advertisement

ಬರ್ತ್ ಡೇ ಬಾಯ್ ವಿರಾಟ್ ಗೆ ಶುಭಾಶಯಗಳ ಸುರಿಮಳೆ: ಕೋಚ್ ಶಾಸ್ತ್ರೀ ಹೇಳಿದ್ದೇನು?

09:50 AM Nov 06, 2019 | Team Udayavani |

ಹೊಸದಿಲ್ಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ವಿಶ್ವ ಕ್ರಿಕೆಟ್ ನ ಅಧಿಪತಿಯಾಗಿ ಮೆರೆಯುತ್ತಿರವ ಕಿಂಗ್ ಕೊಹ್ಲಿಗೆ ಅನೇಕರು ಶುಭಾಶಯ ಕೋರಿದ್ದಾರೆ.

Advertisement

31ನೇ ಹುಟ್ಟುಹಬ್ಬ ಆಚರಿಸುತ್ತಿರುವ ವಿರಾಟ್ ಕೊಹ್ಲಿ, ಮಡದಿ ಅನುಷ್ಕಾ ಶರ್ಮಾ ಜೊತೆ ಸುತ್ತಾಟದಲ್ಲಿದ್ದಾರೆ. ಬಾಂಗ್ಲಾ ವಿರುದ್ಧ ಸರಣಿಗೆ ರಜೆ ಪಡೆದಿರುವ ಕೊಹ್ಲಿ ಜಾಲಿ ಮೂಡ್ ನಲ್ಲಿದ್ದಾರೆ.

ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ನಾಯಕನಿಗೆ ಶುಭ ಕೋರಿದ್ದು, ಇತ್ತೀಚಿನ ದಕ್ಷಿಣ ಆಫ್ರಿಕಾ ವಿರುದ್ಧದ ರಾಂಚಿ ಪಂದ್ಯದ ಫೋಟೋವನ್ನು ಬಳಸಿದ್ದಾರೆ.

 

Advertisement

 

ವೇಗಿ ಇಶಾಂತ್ ಶರ್ಮಾ ಕೂಡಾ ನಾಯಕ ವಿರಾಟ್ ಕೊಹ್ಲಿಗೆ ಬರ್ತ್ ಡೆ ವಿಶಸ್ ತಿಳಿಸಿದ್ದು, ಎಲ್ಲಾ ದಾಖಲೆಗಳನ್ನು ಮುರಿದು ಹಾಕು ಚೀಕು ಎಂದು ಬರೆದಿದ್ದಾರೆ.

 

 

ಟೀಂ ಇಂಡಿಯಾ ಮತ್ತೋರ್ವವೇಗಿ ಉಮೇಶ್ ಯಾದವ್ ಕೂಡಾ ನಾಯಕ ಕೊಹ್ಲಿ ಗೆ ಶುಭಾಶಯ ಕೋರಿದ್ದು, ತಂಡವನ್ನು ಇನ್ನೂ ಎತ್ತರಕ್ಕೆ ಮುನ್ನಡೆಸು ಎಂದು ಶುಭ ಹಾರೈಸಿದ್ದಾರೆ.

 

ಹ್ಯಾಪಿ ಬರ್ತ್ ಡೆ ಮೇರೇ ಚೋಟೇ ವೀರ್ ಎಂದು ಟ್ವೀಟ್ ಮಾಡಿರುವ ಟರ್ಬನೇಟರ್ ಹರ್ಭಜನ್ ಸಿಂಗ್ ವಿಶ್ ಮಾಡಿದ್ದಾರೆ. ಆಧುನಿಕ ಕ್ರಿಕೆಟ್ ನ ಮಾಸ್ಟರ್ ಎಂದು ಕೊಹ್ಲಿಯನ್ನು ಬಣ್ಣಿಸಿದ್ದಾರೆ.

 

ಕೋಚ್ ರವಿಶಾಸ್ತ್ರೀ ಕೂಡಾ ಕ್ಯಾಪ್ಟನ್ ಗೆ ವಿಶ್ ಮಾಡಿದ್ದು, ಹ್ಯಾಪಿ ಬರ್ತ್ ಡೆ ಯಂಗ್ ಮ್ಯಾನ್ ಶುಭವಾಗಲಿ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next