Advertisement

ಪಾತಕಿ ಛೋಟಾ ರಾಜನ್ ಬರ್ತ್ ಡೇಗೆ ಶುಭಕೋರಿ ಬ್ಯಾನರ್: 6 ಜನರ ವಿರುದ್ಧ ಪ್ರಕರಣ

02:49 PM Jan 14, 2023 | Team Udayavani |

ಮುಂಬೈ: ಮುಂಬೈನ ಮಲಾಡ್‌ ನಲ್ಲಿ ಭೂಗತ ಪಾತಕಿ ಛೋಟಾ ರಾಜನ್ ಜನ್ಮದಿನದಂದು ಪೋಸ್ಟರ್ ಹಾಕಿದ್ದಕ್ಕಾಗಿ ಆರು ಜನರ ವಿರುದ್ಧ ಮುಂಬೈ ಪೊಲೀಸರು ಶನಿವಾರ (ಜನವರಿ 14) ಪ್ರಕರಣ ದಾಖಲಿಸಿದ್ದಾರೆ. ಈ ಸಂದರ್ಭದಲ್ಲಿ ಕಬಡ್ಡಿ ಕಾರ್ಯಕ್ರಮ ಆಯೋಜಿಸಿದ್ದ ವ್ಯಕ್ತಿಯ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Advertisement

ಪೋಸ್ಟರ್‌ ನಲ್ಲಿ ನಮೂದಿಸಲಾದ ವಿವರಗಳಲ್ಲಿ ಸಾಗರ್ ರಾಜ್ ಗೋಲೆ ಎಂಬ ವ್ಯಕ್ತಿಯೇ ಸಂಘಟಕ ಎಂದು ಬರೆಯಲಾಗಿದ್ದು, ‘ಸಿಆರ್ ಸಮಾಜಿಕ ಸಂಘಟನೆ’ ಮಹಾರಾಷ್ಟ್ರದ ಪೋಸ್ಟರ್ ಹಾಕಲಾಗಿದೆ.

ಇದನ್ನೂ ಓದಿ:ತಮಿಳುನಾಡು ಡಿಎಂಕೆ ನಾಯಕನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ದೂರು

ಪೋಸ್ಟರ್ ಪ್ರಕಾರ ಶುಕ್ರವಾರ (ಜನವರಿ 13) ಭೂಗತ ಪಾತಕಿ ಛೋಟಾ ರಾಜನ್ ಜನ್ಮದಿನದ ಸಂದರ್ಭದಲ್ಲಿ ಕಬ್ಬಡ್ಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಮೂಲತಃ ಚೆಂಬೂರಿನ ಪಾತಕಿ ಛೋಟಾ ರಾಜನ್ ನ ನಿಜವಾದ ಹೆಸರು ರಾಜೇಂದ್ರ ಸದಾಶಿವ ನಿಕಲ್ಜೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಆತನನ್ನು ಮಲೇಷ್ಯಾದಿಂದ ಗಡೀಪಾರು ಮಾಡಲಾಗಿತ್ತು. ಇತ್ತೀಚೆಗಷ್ಟೇ ಪತ್ರಕರ್ತ ಜೆ ಡೇ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next