Advertisement
ಶೀಘ್ರದಲ್ಲೇ ಸ್ವದೇಶಿ ಉಪಕರಣಗಳುವಿಶ್ವದ ಅಪಾಯಕಾರಿ ಯುದ್ಧಭೂಮಿ ಎಂದೇ ಪರಿಗಣಿಸಲ್ಪಟ್ಟಿರುವ ಸಿಯಾಚಿನ್‌ನಲ್ಲಿ ನಿಯೋಜಿಸಲಾದ ಯೋಧರಿಗೆ ವಿಶೇಷ ಉಡುಗೆ, ಸ್ಲಿàಪಿಂಗ್ ಕಿಟ್ ಹಾಗೂ ಪ್ರಮುಖ ಉಪಕರಣಗಳನ್ನು ಒದಗಿಸುವ ದೀರ್ಘಾವಧಿಯ ಯೋಜನೆಗೆ ಸೇನೆ ಅಂತಿಮ ಸ್ಪರ್ಶ ನೀಡುತ್ತಿದೆ. ಇಲ್ಲಿರುವ ಯೋಧರಿಗೆ ವಿಪರೀತ ಚಳಿ ತಡೆಯುವಂಥ ವಸ್ತ್ರ ಹಾಗೂ ಪರ್ವತಾ ರೋಹಣಕ್ಕೆ ಬೇಕಾದ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಭಾರತ ಪ್ರತಿ ವರ್ಷ 800 ಕೋಟಿ ರೂ. ವೆಚ್ಚ ಮಾಡುತ್ತದೆ. ಈಗ ದೇಶದಲ್ಲೇ ಇವುಗಳನ್ನು ತಯಾರಿಸುವ ಮೂಲಕ 300 ಕೋಟಿ ರೂ. ಉಳಿತಾಯ ಮಾಡಲು ಸೇನೆ ನಿರ್ಧರಿಸಿದೆ. ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸೇನಾ ಮೂಲಗಳು ತಿಳಿಸಿವೆ.