Advertisement

ಹುಟ್ಟು ಹಬ್ಬ ಭವಿಷ್ಯದ ಬದುಕಿನ ಎಚ್ಚರಿಕೆ ಗಂಟೆ

10:59 AM Jan 04, 2022 | Team Udayavani |

ಯಡ್ರಾಮಿ: ಕಳೆದ ವರ್ಷಗಳಲ್ಲಿ ನಾವು ಮಾಡಿದ ಸಮಾಜ ಸೇವೆಯ ಪ್ರಮಾಣವನ್ನು ಪುನಃ ಅವಲೋಕನ ಮಾಡಿಕೊಂಡು ಬರುವ ವರ್ಷಕ್ಕೆ ನಮ್ಮ ಕಾಣಿಕೆ ಏನಾಗಬೇಕೆಂಬುದರ ಬಗೆಗೆ ಸಂಕಲ್ಪಿಸುವುದೇ ಜನ್ಮ ದಿನಾಚರಣೆ ನಿಜವಾದ ಅರ್ಥವೆನಿಸುತ್ತದೆ ಎಂದು ಯಡ್ರಾಮಿ ವಿರಕ್ತಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ನುಡಿದರು.

Advertisement

ಪಟ್ಟಣದ ಮುರಘೇಂದ್ರ ಶಿವಯೋಗಿ ವಿರಕ್ತಮಠದ ಪೀಠಾಧಿ ಪತಿ ಸಿದ್ಧಲಿಂಗ ಸ್ವಾಮೀಜಿ ಅವರ 29ನೇ ಜನ್ಮ ದಿನಾಚರಣೆ ನಿಮಿತ್ತ ಸೋಮವಾರ ಶ್ರೀಮಠದ ಭಕ್ತ ಕಿರಣ ದೇಸಾಯಿ ಅವರು ಏರ್ಪಡಿಸಿದ್ದ ಮಹಾಪ್ರಸಾದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಜನ್ಮ ದಿನಾಚರಣೆ ಬದುಕಿನ ಪಯಣದ ಎಚ್ಚರಿಕೆಯ ಗಂಟೆ. ಕಳೆದ ಸಂವತ್ಸರಗಳಲ್ಲಿ ನಾವು ಮಾಡಿದ ಕೆಲಸ ಕಾರ್ಯಗಳ ಕುರಿತು ಆತ್ಮಾವಲೋಕನ ಮಾಡುವುದಾಗಿದೆ. ವೃತ್ತಿ ಪ್ರವೃತ್ತಿಗಳಲ್ಲಿ ಎಷ್ಟರ ಮಟ್ಟಿಗೆ ಸಫಲತೆ ಉಂಟಾಗಿದೆ. ಆ ಮೂಲಕ ಜನರ ಬದುಕಿಗೆ ಕಾಯಕದಿಂದ ಎಷ್ಟು ಬೆಳಕು ನೀಡಿದೆ ಅನ್ನುವುದು ಬಹಳ ಮುಖ್ಯವಾಗುತ್ತದೆ. ನನ್ನ ಜನ್ಮ ದಿನವನ್ನು ಪ್ರೀತಿ, ಅಭಿಮಾನ, ಭಕ್ತಿಯಿಂದ ಆಚರಿಸುತ್ತಿರುವ ಭಕ್ತರಿಗೆ ಭಗವಂತ ಸದಾ ನೆಮ್ಮದಿ ಕರುಣಿಸಲಿ ಎಂದು ನುಡಿದರು.

ಮಹಾಲಿಂಗಪ್ಪಗೌಡ ಬಂಡೆಪ್ಪಗೋಳ, ಗುರುಬಸಪ್ಪ ಸಾಹು ಸಣ್ಣಳ್ಳಿ, ಪ್ರಕಾಶ ಸಾಹು ಬೆಲ್ಲದ, ಕಿರಣ ದೇಸಾಯಿ, ಆನಂದ ಯತ್ನಾಳ, ಸಿದ್ದು ಸಾಹು ಅಂಗಡಿ, ಲಕ್ಷ್ಮೀಕಾಂತ ಸೋನಾರ, ಮಲ್ಲಿಕಾರ್ಜುನ ಯಾದಗಿರ, ರೇವಣಸಿದ್ದಪ್ಪ ಸಾಹು ಅಂಕಲಕೋಟಿ, ಚನ್ನು ತಾಳಿಕೋಟಿ, ಮಲ್ಲಿಕಾರ್ಜುನ ಸೊನ್ನ, ಸುರೇಶ ಸಾಹು ಡಂಬಳ, ಸತೀಶ ಬಂಡೆಪ್ಪಗೋಳ, ನಿಂಗರಾಜ ಪಟ್ಟಣಶೆಟ್ಟಿ, ಮಂಜುನಾಥ, ಕಿರಣ ಹೂಗಾರ, ದೇವು ಮಳ್ಳಿ, ಶಿಕ್ಷಕ ಬಸಯ್ಯಸ್ವಾಮಿ ಕಕ್ಕೇರಾ, ವಿಜಯಾದೇವಿ ಲೋಕರೆ, ಶಿಕ್ಷಕ ಅಮೃತ, ಮಠದ ಭಕ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next